350ಕ್ಕೂ ಹೆಚ್ಚು ಸ್ಥಾನದಲ್ಲಿ ಬಿಜೆಪಿಗೆ ಗೆಲುವು: ಎ.ಮಂಜು ವಿಶ್ವಾಸ
ಹಾಸನ

350ಕ್ಕೂ ಹೆಚ್ಚು ಸ್ಥಾನದಲ್ಲಿ ಬಿಜೆಪಿಗೆ ಗೆಲುವು: ಎ.ಮಂಜು ವಿಶ್ವಾಸ

April 14, 2019

ರಾಮನಾಥಪುರ: ದೇಶದ ಸುಭದ್ರತೆಗೆ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡಿ. ದೇಶ ಮತ್ತು ರಾಜ್ಯಾದ್ಯಂತ ಬಿಜೆಪಿ ಅಲೆಯಿದ್ದು, ಚುನಾ ವಣೆಯಲ್ಲಿ ಹಾಸನ ಜಿಲ್ಲೆಯಲ್ಲಿ ನಾನು ಸೇರಿದಂತೆ ದೇಶದ 350ಕ್ಕೂ ಹೆಚ್ಚು ಸ್ಥಾನ ಗಳಲ್ಲಿ ಬಿಜೆಪಿ ಜಯಗಳಿಸಲಿದೆ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ಅಭ್ಯರ್ಥಿ ಎ.ಮಂಜು ವಿಶ್ವಾಸ ವ್ಯಕ್ತಪಡಿಸಿದರು.

ರಾಮನಾಥಪುರದ ಬಸವೇಶ್ವರ ವೃತ್ತ ದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ನಾನು ಲೋಕಸಭಾ ಚುನಾವಣೆಗೆ ಟಿಕೆಟ್ ಬಯಸಿ, ಬಿಜೆಪಿಗೆ ಬಂದಿಲ್ಲ. ಪ್ರಧಾನಿ ಮೋದಿಯವರ ಜನಪರ ಅಭಿವೃದ್ಧಿ ಕೆಲಸ ಗಳನ್ನು ನೋಡಿ ಅಂತಹ ವ್ಯಕ್ತಿಯ ಕೈ ಬಲ ಪಡಿಸಲು ಬಿಜೆಪಿಗೆ ಬಂದಿದ್ದೇನೆ. ಜಿಲ್ಲೆ ಯಲ್ಲಿ ಬಿಜೆಪಿ ಕಟ್ಟಲು ಯುವಕರು ಹಾಗೂ ಪ್ರಜ್ಞಾವಂತರಿಂದ ಮಾತ್ರ ಸಾಧ್ಯ. ದೇಶದ ಹಿತÀದೃಷ್ಠಿಯಿಂದ ಮೋದಿ ಅವರಿಗೆ ನಾವೆ ಲ್ಲರೂ ಶಕ್ತಿ ತುಂಬುವ ಕೆಲಸ ಮಾಡ ಬೇಕು ಎಂದರು.

ಬಿಜೆಪಿ ಯಾವ ದಲಿತ ವಿರೋಧಿ ಯಲ್ಲ. ಉಗ್ರಗಾಮಿಗಳ ವಿರೋಧಿಯಾ ಗಿದ್ದು, ಜೆಡಿಎಸ್ ಕುಟುಂಬ ರಾಜಕಾರಣಕ್ಕೆ ಒಂದು ಬಾರಿ ಹಿನ್ನಡೆ ಮಾಡಿದರೇ, ಎಲ್ಲ ರಿಗೂ ಸ್ವಾತಂತ್ರ್ಯ ಸಿಗುತ್ತದೆ. ಜಿಲ್ಲೆಯಲ್ಲಿ ಕುಟುಂಬ ರಾಜಕಾರಣ ಮತ್ತು ಪಾಳೇ ಗಾರಿಕೆ ಸಂಸ್ಕøತಿಯನ್ನು ಹೋಗಲಾಡಿ ಸಲು ಹಾಗೂ ಜಿಲ್ಲೆಯ ಜನತೆಗೆ ಸ್ವಾತಂತ್ರ್ಯ ತಂದುಕೊಡುವ ನಿಟ್ಟಿನಲ್ಲಿ ನಾನು ಹೋರಾಟ ಮಾಡುತ್ತಿದ್ದೇನೆ. ಅದ್ದರಿಂದ ಪ್ರತಿಯೊಬ್ಬ ಸ್ವಾಭಿಮಾನಿಗಳಾಗಿ ಮತ ಚಲಾಯಿಸ ಬೇಕು. ನಾನು ಸಚಿವನಾದ ಅವಧಿಯಲ್ಲಿ ಯಾವುದೇ ಕಪ್ಪುಚುಕ್ಕೆ ಬಾರದ ರೀತಿ ಯಲ್ಲಿ ಕೆಲಸ ಮಾಡಿದ್ದೇನೆ ಎಂದರು.

ದೇಶದ ಅಭಿವೃದ್ಧಿ ಭದ್ರತೆಗಾಗಿ ನಾವು ಇಂದು ಮೋದಿಯವರನ್ನು ಪ್ರಧಾನಿಯ ನ್ನಾಗಿ ಮಾಡಬೇಕಿದೆ ಎಂದು ಮತದಾ ರರು ತೀರ್ಮಾನಿಸಿದ್ದಾರೆ. ಆದರೆ, ದೇವೇ ಗೌಡರು ತಮ್ಮ ಕುಟುಂಬದ ಏಳಿಗೆಗಾಗಿ ಹೊರಟಿರುವುದು ಸರಿಯಲ್ಲ. ಇಡೀ ದೇಶವೇ ಮೋದಿಯವರನ್ನು ಪ್ರಧಾನಿ ಮಾಡುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ. ರಾಜ್ಯದಲ್ಲಿ ದೇವೇ ಗೌಡರು ತಮ್ಮ ಮಕ್ಕಳು ಹಾಗೂ ಮೊಮ್ಮಕ್ಕ ಳನ್ನು ಚುನಾವಣೆಗೆ ನಿಲ್ಲಿಸುತ್ತಿರುವು ದರಿಂದ ಜನರು ಇವರ ವಿರುದ್ಧ ಆಕ್ರೋಶ ಗೊಂಡಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಸಚಿವರ ಪತ್ನಿ ತಾರಾ ಮಂಜು, ತಾಪಂ ಸದಸ್ಯ ಜಿ.ಸಿ.ಮಂಜೇ ಗೌಡ, ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ಜಯಣ್ಣ, ಮುಖಂಡರಾದ ದೊಡ್ಡಮಗ್ಗೆ ರಾಜೇ ಗೌಡ, ವಿಶ್ವನಾಥ್, ಮಾಗೋಡು ಬಸವ ರಾಜ್, ಹಳ್ಳಿಮೈಸೂರು ಶಾಂಬಶಿವಪ್ಪ, ಕೇಶವೇಗೌಡ, ಸುಂದರೇಶ್, ಕೃಷ್ಣೇಗೌಡ, ಗುಂಡಣ್ಣ, ಕುಮಾರಸ್ವಾಮಿ, ವಿಜಯ ಕುಮಾರ್, ಮಲ್ಲೇಶ್, ಹನ್ಯಾಳು ಜಯಣ್ಣ, ಕಂಬೇಗೌಡ ಮುಂತಾದವರು ಇದ್ದರು.

Translate »