ಮತದಾನಕ್ಕೆ 48 ಗಂಟೆಗಳ ಮುನ್ನ ಬಹಿರಂಗ ಪ್ರಚಾರಕ್ಕೆ ತೆರೆ
ಹಾಸನ

ಮತದಾನಕ್ಕೆ 48 ಗಂಟೆಗಳ ಮುನ್ನ ಬಹಿರಂಗ ಪ್ರಚಾರಕ್ಕೆ ತೆರೆ

April 14, 2019

ಹಾಸನ: ಲೋಕಸಭಾ ಚುನಾವಣೆಯಲ್ಲಿ ಮತದಾನ ಮುಕ್ತಾಯಗೊಳ್ಳುವ 48 ಗಂಟೆಯಲ್ಲಿ ಯಾವುದೇ ಅಭ್ಯರ್ಥಿ ಅಥವಾ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಬಹಿರಂಗ ಪ್ರಚಾರ ನಡೆಸುವಂತಿಲ್ಲ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಭಾನುವಾರ ಮತದಾನ ಮುಕ್ತಾಯದ ಅಂತಿಮ 48 ಗಂಟೆಗಳಲ್ಲಿ ಅನುಸರಿಸಬೇಕಾದ ಕ್ರಮಗಳ ಕುರಿತು ಅಭ್ಯರ್ಥಿಗಳು ಹಾಗೂ ಚುನಾವಣಾ ಏಜೆಂಟ್‍ಗಳ ಸಭೆ ನಡೆಸಿದ ಅವರು ಚುನಾವಣಾ ಆಯೋಗದ ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ನಿರ್ದೇಶನ ನೀಡಿದರು.
ಏ. 16ರಂದು ಸಂಜೆಯಿಂದ ಯಾರು ಬಹಿರಂಗ ಪ್ರಚಾರ ಮಾಡುವಂತಿಲ್ಲ. ಧ್ವನಿ ವರ್ಧಕಗಳನ್ನು ಬಳಸಿ ಪ್ರಚಾರ ಮಾಡುವಂತಿಲ್ಲ. ದೃಶ್ಯ ಮಾಧ್ಯಮ ಹಾಗೂ ಸಾಮಾಜಿಕ ಜಾಲ ತಾಣಗಳ ಮೂಲಕ ಪ್ರಚಾರ ಮಾಡುವಂತಿಲ್ಲ ಹಾಗೂ ಏ. 17 ಮತ್ತು 18 ರಂದು ಪ್ರಕಟಗೊಳ್ಳುವ ಮುದ್ರಣ ಮಾಧ್ಯಮದ ಜಾಹೀರಾತುಗಳಿಗೆ 15ನೇ ತಾರೀಖಿನೊಳಗೆ ಎಂ.ಸಿ. ಎಂ.ಸಿ ಸಮಿತಿಗೆ ಅರ್ಜಿ ಸಲ್ಲಿಸಿ ಪ್ರಕಟ ಪೂರ್ವ ದೃಢೀಕರಣ ಪಡೆಯಬೇಕು ಎಂದು ಹೇಳಿದರು.

ಸುದ್ದಿ ಮಾಧ್ಯಮಗಳಲ್ಲಿ ಯಾವುದೇ ಸಮೀಕ್ಷೆಗಳನ್ನು ಪ್ರಕಟಿಸುವಂತಿಲ್ಲ. ಸಂದರ್ಶನಗಳನ್ನು ಮಾಡುವಂತಿಲ್ಲ. ಚರ್ಚೆಗಳನ್ನು ನಡೆಸುವಂತಿಲ್ಲ. ಎಕ್ಸಿಟ್ ಪೋಲ್ ಹಾಕುವಂತಿಲ್ಲ. ಮತದಾನ ಮುಗಿದ ನಂತರ ಮತಯಂತ್ರಗಳನ್ನು ಆಯಾಯ ತಾಲೂಕಿನಿಂದ ತರುವ ಸಂದರ್ಭ ಅಭ್ಯರ್ಥಿ ಪರವಾದ ಏಜೆಂಟ್‍ಗಳು ಮತಗಟ್ಟೆಗೆ ಸಾಗಿಸುವ ವಾಹನಗಳ ಹಿಂದೆ ಬರಬಹುದು, ಸ್ಟ್ರಾಂಗ್ ರೂಂಗಳಲ್ಲಿಟ್ಟು ಮುದ್ರೆ ಹಾಕುವ ಸಂದರ್ಭದಲ್ಲಿ ಹಾಜರಿದ್ದು ಗಮನಿಸಬೇಕು ಎಂದು ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.
ಮತ ಎಣಿಕಾ ಕೇಂದ್ರದಲ್ಲಿ ಅಭ್ಯರ್ಥಿಯ ಏಜೆಂಟ್ ಗಳು ಆಗಿದ್ದಾಂಗೇ ಸ್ಟ್ರಾಂಗ್ ರೂಂಗಳನ್ನು ಪರಿಶೀಲಿ ಸಲು ಅವಕಾಶ ಇದೆ. ಅಲ್ಲದೆ ಏಜೆಂಟ್‍ಗಳಿಗೆ ವಾಸ್ತವ್ಯಕ್ಕೆ ಸೌಲಭ್ಯ ಕಲ್ಪಿಸಲಾಗುವುದು ಮತ್ತು ಮತಯಂತ್ರಗಳನ್ನು ಸಾಗಿಸುವ ಎಲ್ಲಾ ವಾಹನಗಳಿಗೆ ಜಿಪಿಎಸ್ ಅಳ ವಡಿಸಲಾಗಿದ್ದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಅವುಗಳ ಟ್ರಾಂಕಿಂಗ್ ವ್ಯವಸ್ಥೆ ಮಾಡಲಾಗಿದೆ. ಇದನ್ನು ಅಭ್ಯರ್ಥಿ ಗಳು, ಏಜೆಂಟ್‍ಗಳು ಹಾಗೂ ರಾಜಕೀಯ ಮುಖಂಡರು ಗಮನಿಸಬಹುದು ಎಂದು ಹೇಳಿದರು.

ಸಹಾಯಕ ಚುನಾವಣಾಧಿಕಾರಿ ಎಂ.ಎಲ್.ವೈಶಾಲಿ ಮಾತನಾಡಿ, ಮತಗಟ್ಟೆಗಳ ಹೊರಗೆ 200 ಮೀಟರ್ ದೂರದಲ್ಲ ಹಾಕಲಾಗುವ ಅಭ್ಯರ್ಥಿ ಪರವಾದ ಮತದಾರರ ಮಾಹಿತಿ ಕೇಂದ್ರಗಳಲ್ಲಿ 3×11/2 ಅಳತೆಯ ಬ್ಯಾನರ್ ಹಾಕಬಹುದಾಗಿದೆ. ಅದರಲ್ಲಿ ಅಭ್ಯರ್ಥಿಯ ಪೋಟೋ ಮತ್ತು ಚಿಹ್ನೆ ಬಳಸುವಂತಿಲ್ಲ ಹಾಗೂ ಅದರÀಲ್ಲಿ ಕೂರುವ ಏಜೆಂಟ್‍ಗಳ ಹೆಸರು ಆ ಬೂತ್‍ನ ಮತದಾರರ ಪಟ್ಟಿಯಲ್ಲಿ ಇರಲೇಬೇಕು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಬೇಕು ಎಂದರು.

Translate »