ವಿಶ್ವ ರಕ್ತದಾನಿಗಳ ದಿನ 111 ಜನರಿಂದ ರಕ್ತದಾನ
ಹಾಸನ

ವಿಶ್ವ ರಕ್ತದಾನಿಗಳ ದಿನ 111 ಜನರಿಂದ ರಕ್ತದಾನ

June 17, 2019

ಸಕಾಲಕ್ಕೆ ರಕ್ತ ದೊರೆಯದೇ ಹಲವರ ಸಾವು: ಡಿಸಿ ಅಕ್ರಂ ಪಾಷ ವಿಷಾದ
ಹಾಸನ:  ಭಾರತೀಯ ರೆಡ್ ಕ್ರಾಸ್ ಜಿಲ್ಲಾ ಶಾಖೆ, ಸರಕಾರಿ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಜಿಲ್ಲೆಯ ವಿವಿಧ ಸಂಘ-ಸಂಸ್ಥೆಗಳು ಜತೆಗೂಡಿ ನಗರದಲ್ಲಿನ ಕಸಾಪ ಜಿಲ್ಲಾ ಭವನದಲ್ಲಿ ಶನಿವಾರ ಬೆಳಿಗ್ಗೆ ಹಮ್ಮಿಕೊಂಡಿದ್ದ `ವಿಶ್ವ ರಕ್ತದಾನಿಗಳ ದಿನ’ ಆಚರಣೆ, ಬೃಹತ್ ರಕ್ತದಾನ ಶಿಬಿರದಲ್ಲಿ 111 ಮಂದಿ ರಕ್ತದಾನ ಮಾಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾಧಿಕಾರಿ ಅಕ್ರಂ ಪಾಷ, ಅಪಘಾತವಾದಾಗ ಮೊದಲು ಬೇಕಾಗುವುದೇ ರಕ್ತ. ಅಪಘಾತ, ಅವಘಡ, ತುರ್ತುಚಿಕಿತ್ಸೆ ಮತ್ತಿತರ ಸಂದರ್ಭಗಳಲ್ಲಿ ಸಕಾಲದಲ್ಲಿ ರಕ್ತ ದೊರೆಯದೇ, ಸೂಕ್ತ ಗುಂಪಿನ ರಕ್ತದ ಕೊರತೆಯಿಂದಾಗಿ ಹಲವರ ಜೀವವೇ ಹೋಗಿದೆ ಎಂದು ವಿಷಾದಿಸಿದರು.

2004ರಿಂದಲೂ ಪ್ರತಿವರ್ಷ ಈ ದಿನಾ ಚರಣೆ ನಡೆಯುತ್ತಿದೆ. ಪ್ರತಿ ವರ್ಷ ಮಹ ತ್ವದ ವಿಷಯದ ಶೀರ್ಷಿಕೆಯಡಿ ರಕ್ತ ದಾನಿಗಳ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. `ತುಂಬ ಸುರಕ್ಷಿತವಾಗಿ ರಕ್ತದಾನ ಮಾಡಬೇಕು’ ಎಂಬುದು 2019ರ ಘೋಷಣೆಯಾಗಿದೆ. ಆರೋಗ್ಯವಂತರೆಲ್ಲರೂ ಯಾವುದೇ ಭಯ ವಿಲ್ಲದೆ ರಕ್ತದಾನ ಮಾಡಬಹುದು. ರಕ್ತದಾನ ಶಿಬಿರ ಹೆಚ್ಚು ಹಮ್ಮಿಕೊಂಡು ಜೀವಗಳನ್ನು ಉಳಿಸಿ ಎಂದರು.

ಜನರು ಮೂಢನಂಬಿಕೆಯಿಂದ ರಕ್ತದಾನ ದಿಂದ ಹಿಂದೆ ಸರಿಯುತ್ತಿದ್ದಾರೆ. ರಕ್ತ ನೀಡಿದ ಮೂರೇ ತಿಂಗಳಿಗೆ ಅಷ್ಟೇ ಪ್ರಮಾಣದ ರಕ್ತ ಮತ್ತೆ ದೇಹದಲ್ಲಿ ಸೇರಿಕೊಳ್ಳುತ್ತದೆ ಎಂದು ಗಮನಸೆಳೆದರು.

ನಮ್ಮಲ್ಲಿ ರಕ್ತ ಕೊಡುವವರ ಸಂಖ್ಯೆ ಕಡಿಮೆ. ಯುವಕರು ಇಂತಹ ಶಿಬಿರದಲ್ಲಿ ಹೆಚ್ಚು ಪಾಲ್ಗೊಳ್ಳಬೇಕು ಎಂದು ಜಿಪಂ ಸಿಇಒ ವಿಜಯಪ್ರಕಾಶ್ ಉತ್ತೇಜಿಸಿದರು.

ಆಟೋ ಮತ್ತು ಕಾರು ಚಾಲಕರು ಮತ್ತು ಮಾಲೀಕರು, ವಿವಿಧ ಸಂಘಟನೆ ಗಳ ಮುಖಂಡರು, ಸದಸ್ಯರು, ಕಾಲೇಜು ವಿದ್ಯಾರ್ಥಿಗಳು, ಸರ್ಕಾರಿ ಅಧಿಕಾರಿ, ಸಿಬ್ಬಂದಿ ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿ ದರು. ಇದಕ್ಕೂ ಮುನ್ನ ಡಿಸಿ ಕಚೇರಿ ಆವ ರಣದಿಂದ ಜಾಥಾ ನಡೆಸಲಾಯಿತು.

ಈ ಸಂದರ್ಭ ಭಾರತೀಯ ರೆಡ್ ಕ್ರಾಸ್ ಹಾಸನ ಘಟಕದ ಅಧ್ಯಕ್ಷ ಹೆಚ್.ಪಿ.ಮೋಹನ್, ಉಪ ವಿಭಾಗಾಧಿಕಾರಿ ಹೆಚ್.ಎಲ್.ನಾಗ ರಾಜು, ಡಾ.ಗುರುರಾಜು ಹೆಬ್ಬಾರ್, ಹಿಮ್ಸ್ ನಿರ್ದೇಶಕ ಡಾ.ಬಿ.ಸಿ. ರವಿಕುಮಾರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸತೀಶ್ ಕುಮಾರ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಕೃಷ್ಣ ಮೂರ್ತಿ, ಭಾರತ್ ಸ್ಕೌಟ್-ಗೈಡ್ಸ್ ಜಿಲ್ಲಾ ಆಯುಕ್ತ ವೈ.ಎಸ್.ವೀರಭದ್ರಪ್ಪ, ಸಂಜೀ ವಿನಿ ಸಹಕಾರಿ ಆಸ್ಪತ್ರೆ ಅಧ್ಯಕ್ಷ ಗಿರೀಗೌಡ, ಜಿಲ್ಲಾ ಕ್ಷಯ ಮತ್ತು ಏಡ್ಸ್ ರೋಗ ನಿಯಂ ತ್ರಣಾಧಿಕಾರಿ ಡಾ.ನಾಗೇಶ್ ಆರಾಧ್ಯ, ಆಟೋ ಚಾಲಕರ ಮಜದೂರ್ ಸಂಘದ ಅಧ್ಯಕ್ಷ ಹೆಚ್.ಕೆ. ದಿಲೀಪ್, ಲಯನ್ಸ್ ಕ್ಲಬ್ ಅಧ್ಯಕ್ಷ ಚಂದ್ರೇಗೌಡ, ಮಹಾವೀರ್ ಬನ್ಸಾಲಿ, ನಾಗ ಲಕ್ಷ್ಮಿ, ಜಿಲ್ಲಾ ಕಸಾಪ ಅಧ್ಯಕ್ಷ ಎನ್.ಮಂಜೇ ಗೌಡ, ಕರವೇ ಜಿಲ್ಲಾಧ್ಯಕ್ಷ ಮನುಕುಮಾರ್, ಆಜûಮ್‍ಖಾನ್ ಮತ್ತಿತರರಿದ್ದರು.

Translate »