50ಕ್ಕೂ ಹೆಚ್ಚು ಬಾರಿ ರಕ್ತದಾನ-ಸನ್ಮಾನ
ಮೈಸೂರು

50ಕ್ಕೂ ಹೆಚ್ಚು ಬಾರಿ ರಕ್ತದಾನ-ಸನ್ಮಾನ

June 15, 2020

ಮೈಸೂರು, ಜೂ.14(ಎಂಟಿವೈ)- `ವಿಶ್ವ ರಕ್ತದಾನಿಗಳ ದಿನಾಚರಣೆ’ ಹಿನ್ನೆಲೆಯಲ್ಲಿ ಭಾನುವಾರ ಮೈಸೂರಿನ ಜೀವಧಾರ ರಕ್ತ ನಿಧಿ ಕೇಂದ್ರದಲ್ಲಿ 50ಕ್ಕೂ ಹೆಚ್ಚು ಬಾರಿ ರಕ್ತ ದಾನ ಮಾಡಿದ ಹಲವು ದಾನಿಗಳನ್ನು ಡಿಟಿಎಸ್ ಫೌಂಡೇಶನ್ ವತಿಯಿಂದ ಸನ್ಮಾ ನಿಸಲಾಯಿತು. ರಕ್ತದಾನ ಮುಂದುವರಿಸಿ ರೋಗಿಗಳ ಪ್ರಾಣ ರಕ್ಷಣೆಗೆ ಸಹಕರಿಸು ವಂತೆ ಕೋರಲಾಯಿತು.

ಮೈಸೂರಿನ ಸಯ್ಯಾಜಿರಾವ್ ರಸ್ತೆಯ ಜೀವಧಾರ ರಕ್ತನಿಧಿ ಕೇಂದ್ರದಲ್ಲಿ ಭಾನು ವಾರ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ 50ಕ್ಕೂ ಹೆಚ್ಚು ಮಂದಿ ಸ್ವಪ್ರೇರಣೆಯಿಂದ ರಕ್ತದಾನ ಮಾಡಿ `ವಿಶ್ವ ರಕ್ತದಾನಿಗಳ ದಿನ’ ವನ್ನು ಅರ್ಥಪೂರ್ಣವಾಗಿ ಆಚರಿಸಿದರು. ಜೆಸಿಐ ರಾಯಲ್ ಸಿಟಿ ಸಂಸ್ಥೆಯ 25ಕ್ಕೂ ಸದಸ್ಯರು ರಕ್ತದಾನ ಮಾಡಿ ಗಮನ ಸೆಳೆದರು.

ರಕ್ತದಾನಿಗಳಿಗೆ ಸನ್ಮಾನ ಮಾಡಿದ ಡಿಟಿಎಸ್ ಫೌಂಡೇಶನ್ ಅಧ್ಯಕ್ಷ ಡಿ.ಟಿ. ಪ್ರಕಾಶ್ ಮಾತನಾಡಿ, ರಕ್ತದಾನದ ಮಹ ತ್ವದ ಬಗ್ಗೆ ಎಲ್ಲರೂ ತಿಳಿದುಕೊಳ್ಳುವ ಅಗತ್ಯ ವಿದೆ. ರಕ್ತದಾನದ ಬಗ್ಗೆ ಹಲವರಲ್ಲಿ ಮೂಢ ನಂಬಿಕೆಯಿದ್ದು, ಅದು ನಿವಾರಣೆಯಾಗ ಬೇಕು. ರಕ್ತದಾನ ಮಾಡಲು ಇತರರಿಗೂ ಪ್ರೇರಣೆಯಾಗಬೇಕು. ಪುರುಷರು 3 ತಿಂಗಳಿಗೊಮ್ಮೆ, ಮಹಿಳೆಯರು 4 ತಿಂಗಳಿ ಗೊಮ್ಮೆ ರಕ್ತದಾನ ಮಾಡಬಹುದು. ಅನಾ ರೋಗ್ಯ ಪೀಡಿತರು, 60 ವರ್ಷ ಮೇಲ್ಪಟ್ಟ ವರು ರಕ್ತದಾನ ಮಾಡಲೇಬಾರದು ಎಂದರು.

ರಕ್ತದಾನದಿಂದ ನಿಶ್ಯಕ್ತಿ ಆಗುವುದಿಲ್ಲ. ರಕ್ತದಾನ ಮಾಡಿದಷ್ಟೆ ಪ್ರಮಾಣದಲ್ಲಿ ಹೊಸ ರಕ್ತ ಉತ್ಪಾದನೆಯಾಗುತ್ತದೆ. ಕೊಬ್ಬಿ ನಂಶ ಕಡಿಮೆಯಾಗಿ ಹೃದಯಾಘಾತ ಸಂಭವ ಕಡಿಮೆಯಾಗುತ್ತದೆ. ರಾಷ್ಟ್ರೀಯ ಹಬ್ಬದ ದಿನ, ಜನ್ಮದಿನ, ಮದುವೆ ಸೇರಿ ದಂತೆ ಹಲವು ಸಂದರ್ಭಗಳಲ್ಲಿ ರಕ್ತದಾನ ಮಾಡಿ ಮತ್ತೊಬ್ಬರ ಜೀವ ಉಳಿಸುವುದ ರೊಂದಿಗೆ ಮಾನವೀಯತೆ ಪ್ರದರ್ಶಿಸಲು ಎಲ್ಲರೂ ಪಣ ತೊಡಬೇಕು. ಯುವ ಜನತೆ ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿ, ಮತ್ತೊ ಬ್ಬರಿಗೆ ಮಾದರಿಯಾಗಬೇಕು ಎಂದರು.

ನಿರಂತರ ರಕ್ತದಾನ ಮಾಡುತ್ತಿರುವ ನಿಮಗೆ ಮೈಸೂರಿನ ಜನತೆ ಪರವಾಗಿ ಧನ್ಯವಾದ ಅರ್ಪಿಸುವೆ. ಯುವಪೀಳಿಗೆಗೆ ನಿಮ್ಮ ಸೇವೆಯೇ ಪ್ರೇರಣೆಯಾಗಲಿ ಎಂದು ಆಶಿಸಿದರು.

ಸನ್ಮಾನ ಸ್ವೀಕರಿಸಿದ ರಕ್ತದಾನಿ ಯುವರಾಜ್ ಮಾತನಾಡಿ, ನಾನು ರಕ್ತದಾನ ಮಾಡಿದ ಫೆÇೀಟೊ, ಪ್ರಮಾಣಪತ್ರವನ್ನು ಫೇಸ್‍ಬುಕ್ ನಲ್ಲಿ, ವಾಟ್ಸ್‍ಅಪ್ ಸ್ಟೇಟಸ್‍ನಲ್ಲಿ ಹಾಕುತ್ತಿ ರುತ್ತೇನೆ. ಇದನ್ನು ನೋಡಿ ಪ್ರೇರೇಪಿತರಾಗಿ 10 ಯುವಕರು ರಕ್ತದಾನ ಮಾಡಲು ಮುಂದೆ ಬಂದರು. ಗರ್ಭಿಣಿಯೊಬ್ಬರಿಗೆ `ಎ’ ನೆಗೆ ಟಿವ್ ಗುಂಪಿನ ರಕ್ತ ಬೇಕಾಗಿತ್ತು. ನನ್ನ ಸಂಪರ್ಕ ದಲ್ಲಿದ್ದ ಯುವಕರೊಬ್ಬರು ರಕ್ತ ನೀಡಿದರು. ಈವರೆಗೆ 50 ಬಾರಿ ರಕ್ತದಾನ ಮಾಡಿದ್ದೇನೆ. ನಾವು ಆರೋಗ್ಯವಂತರಾಗಿದ್ದರಷ್ಟೆ ರಕ್ತದಾನ ಸಾಧ್ಯ. ನನ್ನ ಆರೋಗ್ಯವೇ ನನಗೆ ನಿಜ ವಾದ ಸರ್ಟಿಫಿಕೇಟ್. ನಿಯಮಿತ ರಕ್ತ ದಾನದಿಂದ ಹೃದಯಾಘಾತ, ಪಾರ್ಶ್ವ ವಾಯುವಿನ ಅಪಾಯ ಶೇ.75ರಷ್ಟು ಕಡಿಮೆ ಯಾಗುತ್ತದೆ ಎಂಬ ಮಾಹಿತಿ ವೈದ್ಯರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಯುವ ಜನರು ರಕ್ತದಾನ ಮಾಡುವ ಮೂಲಕ ಅಪಘಾತ, ಶಸ್ತ್ರಚಿಕಿತ್ಸೆ, ಗರ್ಭಿಣಿಯರಿಗೆ ನೆರವಾಗುವ ನಿಟ್ಟಿನಲ್ಲಿ ಸಹಕರಿಸಬೇಕು ಎಂದು ಮನವಿ ಮಾಡಿದರು.

ಬಾಲ ಸಾಧಕಿ ಭೇಟಿ: ಜೀವಧಾರ ರಕ್ತನಿಧಿ ಕೇಂದ್ರದಲ್ಲಿ ಭಾನುವಾರ ಸಂಜೆ ರಕ್ತದಾನ ಮಾಡಲು ಬಂದವರಿಗೆ ಬೃಹತ್ ವಾಹನ ಚಾಲನೆಯಲ್ಲಿ ದಾಖಲೆ ಮಾಡಿರುವ ಮೈಸೂರಿನ ಬಾಲ ಸಾಧಕಿ ರಿಫಾ ತಸ್ಕೀನ್ ಪ್ರಮಾಣಪತ್ರ ವಿತರಿಸಿದರು. ಇದೇ ವೇಳೆ 50ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿದ ಯುವರಾಜ್, ವಿಕಾಸ್ ಡರ್ಲಾ, ಎಂ. ಪ್ರದೀಪ್ ಸಿಂಗ್ ಚೌಹಾಣ್, ಸಿ.ಆನಂದ್, ಕರ್ಮರಾಮ್ ಅವರನ್ನು ಸನ್ಮಾನಿಸಿ, ಅಭಿನಂದನಾ ಪತ್ರ ನೀಡಲಾಯಿತು

ಜೀವಧಾರ ರಕ್ತನಿಧಿ ನಿರ್ದೇಶಕ ಗಿರೀಶ್, ತೇರಾಪಂತ್ ಅಧ್ಯಕ್ಷ ದೇವೇಂದ್ರ, ಡಾ.ಕಿರಣ್, ಡಾ.ಮಮತಾ, ಯುವ ಮುಖಂಡರಾದ ವಿಕ್ರಮ ಅಯ್ಯಂಗಾರ್, ಶ್ರೀನಿವಾಸ್, ರಾಕೇಶ್, ಬಿಜೆಪಿ ಯುವ ಮುಖಂಡ ಶಿವಪ್ರಕಾಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Translate »