ಶಾಲಾ ಕಾಲೇಜು ಆರಂಭ, ಆನ್‍ಲೈನ್ ಶಿಕ್ಷಣ ಕುರಿತು ತಜ್ಞರ ಅಭಿಪ್ರಾಯ ಸೂಕ್ತ: ಮಂಜುಳಾ ನಾಯ್ಡು
ಮೈಸೂರು

ಶಾಲಾ ಕಾಲೇಜು ಆರಂಭ, ಆನ್‍ಲೈನ್ ಶಿಕ್ಷಣ ಕುರಿತು ತಜ್ಞರ ಅಭಿಪ್ರಾಯ ಸೂಕ್ತ: ಮಂಜುಳಾ ನಾಯ್ಡು

June 15, 2020

ಮೈಸೂರು, ಜೂ.14(ಆರ್‍ಕೆಬಿ)- ಶಾಲಾ-ಕಾಲೇಜು ಆರಂಭ ಹಾಗೂ ಆನ್‍ಲೈನ್ ಶಿಕ್ಷಣ ಕುರಿತು ರಾಜ್ಯ ಸರ್ಕಾರ ಶಿಕ್ಷಣ ತಜ್ಞರ ಸಲಹೆ ಪಡೆದು ನಿರ್ಧಾರ ಕೈಗೊಳ್ಳಬೇಕು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಂಜುಳಾ ನಾಯ್ಡು ಹೇಳಿದರು.

ಮೈಸೂರಿನ ಜಲದರ್ಶಿನಿ ಅತಿಥಿಗೃಹದಲ್ಲಿ ಮೈಸೂರು ಬಲಿಜ ವೇದಿಕೆ ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿ, ಲಾಕ್‍ಡೌನ್ ನಿಯಮ ಸಡಿಲಿಕೆ ನಂತರ ಎಲ್ಲ ವಾಣಿಜ್ಯ ವಹಿ ವಾಟುಗಳು ಆರಂಭವಾಗಿದ್ದರೂ, ಕೊರೊನಾ ಬಗ್ಗೆ ಜನರಲ್ಲಿನ್ನೂ ಭಯವಿದೆ. ಇಂತಹ ವೇಳೆ ಶಾಲೆ ಪುನಾರಂಭ ಸರಿಯಲ್ಲ. ಈ ವಿಚಾರದಲ್ಲಿ ಸರ್ಕಾರ ದುಡುಕಿ ನಿರ್ಧಾರ ತೆಗೆದುಕೊಳ್ಳದೇ ಶಿಕ್ಷಣ ತಜ್ಞರ ಸಲಹೆ ಪಡೆಯಲಿ. ಶಾಲಾ ಮಕ್ಕಳಿಗೆ ಆನ್‍ಲೈನ್ ಶಿಕ್ಷಣ ಪರಿಣಾಮಕಾರಿ ಆಗುವುದಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಇಂಟರ್‍ನೆಟ್, ನೆಟ್‍ವರ್ಕ್, ಆಂಡ್ರಾಯ್ಡ್ ಮೊಬೈಲ್ ಸಮಸ್ಯೆ ಇದೆ. ಈ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸರ್ಕಾರ ಮಕ್ಕಳ ಹಿತ ಕಾಯಬೇಕು ಎಂದರು. ಮಾಜಿ ಮೇಯರ್ ಪುಷ್ಪವಲ್ಲಿ, ಮುಖಂಡರಾದ ಎಂ.ಎಸ್.ಗುರುರಾಜಶೆಟ್ಟಿ, ಗುರುಪ್ರಸಾದ್, ನಂದಕುಮಾರ್, ರವಿಚಂದ್ರ, ಪ್ರಶಾಂತ್, ಉಮೇಶ್, ಶಿವಕುಮಾರ್, ಸದಾಶಿವ ಇನ್ನಿತರರಿದ್ದರು.

Translate »