ಬಿಪಿಎಲ್ ಪಡಿತರದಾರರಿಗೆ ಪರಿಹಾರ ನೀಡಲು ಆಗ್ರಹ
ಮಂಡ್ಯ

ಬಿಪಿಎಲ್ ಪಡಿತರದಾರರಿಗೆ ಪರಿಹಾರ ನೀಡಲು ಆಗ್ರಹ

May 3, 2021

ಶ್ರೀರಂಗಪಟ್ಟಣ, ಮೇ 2(ವಿನಯ್ ಕಾರೇಕುರ)- ದೇಶ ಹಾಗೂ ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆಯ ಪ್ರಕರಣಗಳು ಹೆಚ್ಚಾಗಲು ರಾಜ್ಯ ಹಾಗೂ ಕೇಂದ್ರ ಸರ್ಕಾರ ಗಳ ಬೇಜವಬ್ದಾರಿಯೇ ಕಾರಣವಾಗಿದ್ದು, ಲಾಕ್‍ಡೌನ್ ಸಂಕಷ್ಟವನ್ನು ಸರಿದೂಗಿಸಲು ಕೂಡಲೇ ಎಲ್ಲಾ ಬಿಪಿಎಲ್ ಪಡಿತರ ಕುಟುಂಬಕ್ಕೂ ತಲಾ 10 ಸಾವಿರ ರೂ.ನಗದನ್ನು ಅವರ ಖಾತೆಗೆ ಜಮೆ ಮಾಡಬೇಕೆಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಆಗ್ರಹಿಸಿದರು.
ತಾಲೂಕಿನ ಅರಕೆರೆ ಗ್ರಾಮದ ಸಮುದಾಯ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಕೋವಿಡ್ ಹಾಗೂ ಆಕ್ಸಿಜನ್ ಕೇಂದ್ರ ವನ್ನು ಉದ್ಘಾಟಿಸಿ ಮಾತನಡಿದ ಅವರು, ಜನತೆ ಲಾಕ್‍ಡೌನ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ಕೂಡಲೇ ಪ್ರತೀ ಬಿಪಿಎಲ್ ಕುಟುಂಬಕ್ಕೂ ಹೆಚ್ಚುವರಿ ಪಡಿತರ ವಿತರಣೆಯೊಂದಿಗೆ ಧನ ಸಹಾಯ ಮಾಡುವ ಮೂಲಕ ಅವರ ಜೀವನೋಪಾಯಕ್ಕೆ ಬೆನ್ನೆಲುಬಾಗಿ ನಿಲ್ಲಬೇಕೆಂದು ಒತ್ತಾಯಿಸಿದರು.

ಸರ್ಕಾರದ ಜೊತೆಗೆ ಸಾಮಾಜಿಕ ಕಾಳಜಿಯುಳ್ಳ ಪ್ರತಿಯೊಬ್ಬರೂ ಮನೆ ಯಿಂದ ಹೊರಬಂದು ತಮ್ಮ ಕೈಲಾದ ಸಹಾಯವನ್ನು ಮಾಡಬೇಕೆಂದು ಕರೆ ನೀಡಿದ ಶಾಸಕರು, ಇಲ್ಲಿನ ಆಸ್ಪತ್ರೆಯಲ್ಲಿನ ವೈದ್ಯರು, ಪೌರ ಕಾರ್ಮಿ ಕರು ಹಾಗೂ ಆಶಾ ಕಾರ್ಯಕರ್ತೆ ಯರಿಗೆ ತಮ್ಮ ವೈಯಕ್ತಿಕ ಹಣದಿಂದ ಪಿಪಿಇ ಕಿಟ್ ಹಾಗೂ ಮಾಸ್ಕ್ ವಿತರಿಸಿ ಅವರ ಸಮಸ್ಯೆಗಳನ್ನು ಆಲಿಸಿ ಧೈರ್ಯ ತುಂಬಿದರು.

ಕೊರೊನಾ ಎರಡನೇ ಅಲೇ ತೀವ್ರ ಗೊಳ್ಳುತ್ತಿದ್ದು, ಕೋವಿಡ್ ನಿಯಮಗಳನ್ನು ಪ್ರತಿಯೊಬ್ಬರೂ ಪಾಲಿಸುವಂತೆ ಗ್ರಾಮ ಸ್ಥರಲ್ಲಿ ಮನವಿ ಮಾಡಿದ ಶಾಸಕರು, ಇಂತಹ ಕ್ಲಿಷ್ಟ ಪರಿಸ್ಥಿತಿಯಲ್ಲಿ ತಾಲ್ಲೂಕಿನ ಪ್ರಮುಖ ಸ್ಥಳಗಳಲ್ಲಿ ತಾಲ್ಲೂಕು ಅಡಳಿತ ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಲಿ ಕಾರ್ಮಿ ಕರು ಹಾಗೂ ನಿರ್ಗತಿಕರಿಗೆ ಊಟದ ವ್ಯವಸ್ಥೆ ಮಾಡುವಂತೆ ತಹಸೀಲ್ದಾರ್ ಎಂ.ವಿ.ರೂಪ ಅವರಿಗೆ ಸೂಚನೆ ನೀಡಿದರು. ಇದಕ್ಕೆ ಸಹಮತ ವ್ಯಕ್ತಪಡಿಸಿದ ತಹಸೀಲ್ದಾರ್ ರೂಪ ಈ ಸಂಬಂಧ ಕಾರ್ಯಪ್ರವೃತ್ತರಾಗಿದ್ದು, ಒಂದೆ ರಡು ದಿನಗಳಲ್ಲಿ ನಿರ್ಗತಿಕರಿಗೆ ಊಟದ ವ್ಯವಸ್ಥೆ ಕಲ್ಪಿಸುವುದಾಗಿ ಹೇಳಿದರು.

Translate »