ಮಂಡ್ಯದಲ್ಲಿ ಹೆಚ್ಚಿದ ಕೋವಿಡ್ ಸೋಂಕು ಪ್ರಕರಣ ಕೊರೊನಾ ಹಾಟ್‍ಸ್ಪಾಟ್ ಗ್ರಾಮಗಳು ಸೀಲ್‍ಡೌನ್
ಮಂಡ್ಯ

ಮಂಡ್ಯದಲ್ಲಿ ಹೆಚ್ಚಿದ ಕೋವಿಡ್ ಸೋಂಕು ಪ್ರಕರಣ ಕೊರೊನಾ ಹಾಟ್‍ಸ್ಪಾಟ್ ಗ್ರಾಮಗಳು ಸೀಲ್‍ಡೌನ್

May 3, 2021

ಮಂಡ್ಯ, ಮೇ 2(ಮೋಹನ್‍ರಾಜ್)- ಮಂಡ್ಯದಲ್ಲಿ ಕಳೆದ ಮೂರ್ನಾಲ್ಕು ದಿನ ಗಳಿಂದ ಕೊರೊನಾ ಕೇಸುಗಳು ಸಾವಿರದ ಗಡಿ ದಾಟಿದ ಹಿನ್ನಲೆಯಲ್ಲಿ ಜಿಲ್ಲಾಡಳಿತದ ಸೂಚನೆಯಂತೆ ತಾಲೂಕು ಆಡಳಿತ ಹಾಗೂ ಟಾಸ್ಕ್‍ಫೋರ್ಸ್ ಸಿಬ್ಬಂದಿ ಕೊರೊನಾ ಹಾಟ್‍ಸ್ಪಾಟ್ ಆಗಿರುವ ಗ್ರಾಮೀಣ ಪ್ರದೇಶಗಳನ್ನು ಸೀಲ್‍ಡೌನ್ ಮಾಡುತ್ತಿದೆ.

ಸುಮಾರು 20ರಿಂದ 25 ಕೇಸುಗಳು ಒಂದೇ ದಿನ ದಾಖಲಾಗುವ ಗ್ರಾಮಗಳನ್ನು ಸೀಲ್‍ಡೌನ್ ಮಾಡಿ ಕಂಟೈನ್ಮೆಂಟ್ ಝೋನ್ ಎಂದು ಘೋಷಿಸುತ್ತಿರುವ ತಾಲೂಕು ಆಡಳಿತ, ಆಯಾ ಗ್ರಾಮಗಳಿಗೆ ಅಗತ್ಯ ವಸ್ತುಗಳನ್ನು ಸಹ ಪೂರೈಕೆ ಮಾಡುತ್ತಿದೆ.
ಮಂಡ್ಯ, ಶ್ರೀರಂಗಪಟ್ಟಣ, ಪಾಂಡವ ಪುರ ತಾಲೂಕುಗಳಲ್ಲಿ ಇದೀಗ ಸೀಲ್ ಡೌನ್ ಕಾರ್ಯ ಆರಂಭವಾಗಿದ್ದು, ಅದ ರಲ್ಲೂ ಹೋಬಳಿ ಮಟ್ಟದ ಗ್ರಾಮಗಳು ಹಾಗೂ ಜನಸಂಖ್ಯೆ ಹೆಚ್ಚಿರುವ ಗ್ರಾಮ ಗಳೇ ಸೀಲ್‍ಡೌನ್‍ಗೆ ಒಳಗಾಗುತ್ತಿದೆ.

ಕಳೆದ ಮೂರ್ನಾಲ್ಕು ದಿನಗಳಿಂದ ಜಿಲ್ಲೆಯಲ್ಲಿ ಸೋಂಕು ಪ್ರಕರಣಗಳು ನಿತ್ಯ ಸಾವಿರ ಗಡಿ ದಾಟುತ್ತಿದ್ದು, ಇದರಿಂದ ಎಚ್ಚೆತ್ತು ಕೊಂಡಿರುವ ಜಿಲ್ಲಾಡಳಿತ 20ಕ್ಕಿಂತ ಹೆಚ್ಚು ಕೇಸುಗಳು ಬರುವ ಗ್ರಾಮಗಳ ಸೀಲ್ ಡೌನ್‍ಗೆ ಸೂಚನೆ ನೀಡಿದೆ. ಈ ನಿಟ್ಟಿನಲ್ಲಿ 20ಕ್ಕೂ ಹೆಚ್ಚು ಕೇಸುಗಳು ದಾಖ ಲಾಗಿರುವ ಗ್ರಾಮಗಳನ್ನು ಪರಿಶೀಲನೆ ನಡೆಸಿದ ತಹಸೀಲ್ದಾರ್‍ರವರುಗಳು ಆಯಾ ಗ್ರಾಮಗಳಿಗೆ ಖುದ್ದು ಭೇಟಿ ನೀಡಿ ಪರಿ ಶೀಲನೆ ನಡೆಸಿ ಸೀಲ್‍ಡೌನ್ ಮಾಡಿಸುತ್ತಿದ್ದಾರೆ.

ಈಗಾಗಲೇ ಮಂಡ್ಯ ತಾಲೂಕಿನ ಕೀಲಾರ, ಬಸರಾಳು, ಹುಲಿವಾನ, ಕೊತ್ತತ್ತಿ, ಸೂನ ಗನಹಳ್ಳಿ, ಹೊಳಲು ಗ್ರಾಮಗಳನ್ನು ಸೀಲ್ ಡೌನ್ ಮಾಡಲಾಗಿದೆ. ಶ್ರೀರಂಗಪಟ್ಟಣ ತಾಲ್ಲೂಕು ವ್ಯಾಪ್ತಿಯ ಅರಕೆರೆ ಹಾಗೂ ಪಾಂಡವಪುರ ತಾಲ್ಲೂಕಿನ ಅನೇಕ ಗ್ರಾಮಗಳು ಸೀಲ್‍ಡೌನ್ ಆಗಿವೆ.
ಈ ಕುರಿತು ಮಾತನಾಡಿದ ಮಂಡ್ಯ ತಹಸೀಲ್ದಾರ್ ಚಂದ್ರಶೇಖರ್ ಶಂಗಾಳಿ, ಮಂಡ್ಯ ತಾಲೂಕಿನ 8 ಗ್ರಾಮಗಳಲ್ಲಿ ನಿತ್ಯ 20 ಕೇಸುಗಳು ದಾಖಲಾಗಿದ್ದರಿಂದ ಆಯಾ ಗ್ರಾಮಗಳನ್ನು ಸೀಲ್‍ಡೌನ್ ಮಾಡ ಲಾಗಿದೆ. ಕೆಲ ಗ್ರಾಮಗಳಲ್ಲಿ ಸೋಂಕಿತರು ಹೋಂ ಐಸೋಲೇಷನ್ ಆಗಿ, ಮನೆಯಲ್ಲಿರದೇ ಓಡಾಟ ನಡೆಸಿದ್ದರಿಂದ ನಾವು ಸೀಲ್‍ಡೌನ್ ಮಾಡಿಸಬೇಕಾಗಿದೆ. ಅಂತಹವರ ಮೇಲೆ ಕೇಸುಗಳನ್ನು ಕೂಡ ದಾಖಲು ಮಾಡು ತ್ತಿದ್ದೇವೆ. ಕಂಟೈನ್ಮೆಂಟ್ ಝೋನ್ ವ್ಯಾಪ್ತಿಯ ಪ್ರದೇಶಗಳಲ್ಲಿ ಅಗತ್ಯ ವಸ್ತುಗಳನ್ನು ನಾವೇ ಪೂರೈಕೆ ಮಾq Àಲಿದ್ದು, ಇದಕ್ಕಾಗಿ ಟಾಸ್ಕ್‍ಫೋರ್ಸ್ ಸಿಬ್ಬಂದಿ ಕಾರ್ಯನಿರ್ವಹಣೆ ಮಾಡ ಲಿದ್ದು, ಕೋವಿಡ್ ವಾರ್‍ರೂಂಗಳನ್ನು ಸಹ ತೆರೆಯಲಾಗಿದೆ ಎಂದು ತಿಳಿಸಿದರು.

Translate »