ಪಿರಿಯಾಪಟ್ಟಣದಲ್ಲಿ ಮಾಸ್ಕ್ ಧರಿಸದ 291 ಜನರಿಂದ ದಂಡ ವಸೂಲಿ
ಮೈಸೂರು

ಪಿರಿಯಾಪಟ್ಟಣದಲ್ಲಿ ಮಾಸ್ಕ್ ಧರಿಸದ 291 ಜನರಿಂದ ದಂಡ ವಸೂಲಿ

May 3, 2021

ಪಿರಿಯಾಪಟ್ಟಣ, ಮೇ 2(ವೀರೇಶ್)- ಜನತಾ ಕಫ್ರ್ಯೂ ಜಾರಿಯಲ್ಲಿದ್ದರೂ ಕುಂಟು ನೆಪವೊಡ್ಡಿ ಬೈಕ್‍ಗಳಲ್ಲಿ ರಸ್ತೆಗಿಳಿಯುವವರ ಬೈಕ್ ವಶಪಡಿಸಿಕೊಂಡು ಮತ್ತು ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿದ ಅಂಗಡಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುವ ಮೂಲಕ ಪೆÇಲೀಸರು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.

ತಾಲೂಕಿನಲ್ಲಿ ಎರಡನೇ ಅಲೆಯಲ್ಲಿ ಗ್ರಾಮೀಣ ಪ್ರದೇಶದಲ್ಲೇ ಹೆಚ್ಚಿನ ಸೋಂಕು ಪ್ರಕರಣಗಳು ಕಂಡು ಬರುತ್ತಿದ್ದು, ಈವರೆಗೆ 1914 ಪ್ರಕರಣಗಳು ಪತ್ತೆಯಾಗಿದ್ದು, 1411 ಜನ ಗುಣಮುಖರಾಗಿದ್ದಾರೆ. 503 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಶನಿವಾರ ಒಟ್ಟು 149 ಸೋಂಕಿತರು ಪತ್ತೆಯಾಗಿ, ಅದರಲ್ಲಿ ಗ್ರಾಮೀಣ ಪ್ರದೇಶದವರೇ 149 ಜನರಿದ್ದು, ಪಿರಿಯಾಪಟ್ಟಣ ವ್ಯಾಪ್ತಿಯಲ್ಲಿ 38 ಜನ ಸೋಂಕಿತರು ಪತ್ತೆಯಾಗಿದ್ದಾರೆ. ತಾಲೂಕಿ ನಾದ್ಯಂತ ಒಟ್ಟು 34 ಸೋಂಕಿತರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಮಾಸ್ಕ್ ಧರಿಸದ 291 ಜನರಿಗೆ ದಂಡ ವಿಧಿಸಿರುವ ಪೆÇಲೀಸರು, ಅನಗತ್ಯವಾಗಿ ಸಂಚರಿಸುತ್ತಿದ್ದ 15 ಬೈಕ್‍ಗಳನ್ನು ವಶ ಪಡಿಸಿ ಕೊಂಡಿದ್ದಾರೆ, 2 ಬೇಕರಿಗಳು, 1 ಶಾಪಿಂಗ್ ಮಾಲ್, 1 ಜಿಮ್ ವಿರುದ್ಧ ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿದ ಆರೋಪ ದಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್‍ಐ ಸದಾಶಿವ ತಿಪ್ಪಾರೆಡ್ಡಿ ತಿಳಿಸಿದ್ದಾರೆ.

Translate »