ಬ್ರಾಹ್ಮಣರು ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ
ಮೈಸೂರು

ಬ್ರಾಹ್ಮಣರು ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ

December 17, 2018

ಮೈಸೂರು:  ಬ್ರಾಹ್ಮ ಣರು ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ರಾಜ್ಯ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎನ್.ಕುಮಾರ್ ಇಂದಿಲ್ಲಿ ಸಲಹೆ ನೀಡಿದರು.

ಮೈಸೂರಿನ ಅವಧೂತ ದತ್ತಪೀಠ ಗಣ ಪತಿ ಸಚ್ಚಿದಾನಂದ ಆಶ್ರಮದ ನಾದಮಂಟಪ ದಲ್ಲಿ ಭಾನುವಾರ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಮಾವೇಶದ 2ನೇ ದಿನ ವಿಶೇಷ ಗೋಷ್ಠಿಯಲ್ಲಿ ಪಾಲ್ಗೊಂಡು ಮಾತ ನಾಡಿದರು. ಬ್ರಾಹ್ಮಣರನ್ನು ಬುದ್ಧಿವಂತರು, ಮುಂದುವರಿದ ಜನಾಂಗ ಎನ್ನಲಾಗುತ್ತದೆ. ಆದರೆ, ನಮ್ಮಲ್ಲಿ ಬುದ್ಧಿ ಇದ್ದರೂ ಕೆಲಸ ಪಡೆಯಲಾಗುತ್ತಿಲ್ಲ. ಹೀಗಾಗಿ, ನಮ್ಮ ಯುವ ಕರು ನಿರುದ್ಯೋಗ ಸಮಸ್ಯೆ ಎದುರಿಸುವಂತಾ ಗಿದೆ. ಕೆಲಸ ಇಲ್ಲವೆಂದು ಮನೆಯಲ್ಲಿ ಕುಳಿತುಕೊಳ್ಳದೆ ಸಹನೆಯಿಂದ ಪ್ರಯತ್ನಿಸಿ ದರೆ ಕೆಲಸ ದೊರೆಯುತ್ತದೆ. ಜೊತೆಗೆ ಛಲ ಇರುವವರು ನೌಕರಿ ಸೃಷ್ಟಿ ಮಾಡಿ, ಇತರ ರಿಗೂ ಕೆಲಸ ನೀಡುವಂತಾಗಬೇಕು ಎಂದು ಅಭಿಪ್ರಾಯಪಟ್ಟರು. ವಿಪ್ರರು ಎಂದರೆ ಪ್ರಾಮಾಣಿಕರು, ಸತ್ಯವಂತರು, ಧರ್ಮಿ ಷ್ಟರು ಎನ್ನುತ್ತಾರೆ. ಈ ಗುಣ ಇದ್ದ ವಿಪ್ರ ಖಂಡಿತ ಅಭಿವೃದ್ಧಿ ಹೊಂದುತ್ತಾನೆ ಎಂದರು.

ಧಾರ್ಮಿಕ ಚಿಂತಕ ಶ್ರೀಕಾಂತಾಚಾರ್ಯ ಮಾತನಾಡಿ, ನಾವು ಬ್ರಾಹ್ಮಣ್ಯವನ್ನು ಉಳಿಸಿ ಕೊಂಡರೆ ಮಾತ್ರ ನಮಗೆ ಬೆಲೆ. ಬ್ರಾಹ್ಮಣ ರೆಲ್ಲರೂ ನಾನು ಬ್ರಾಹ್ಮಣ ಎಂಬ ಬಗ್ಗೆ ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಯುವಕರು ಪ್ರಾಮಾಣಿಕರಾಗಿದ್ದು, ಭ್ರಷ್ಟಾ ಚಾರದಿಂದ ದೂರವಿದ್ದು ಇನ್ನೊಬ್ಬರಿಗೆ ಮಾದರಿಯಾಗಿ ನಿಲ್ಲಬೇಕು. ಈ ದೇಶ ದಿಂದ ಭ್ರಷ್ಟಾಚಾರ ಹೋಗಬೇಕಾದರೆ ಅದು ಒಬ್ಬ ಮೋದಿಯಿಂದ ಸಾಧ್ಯವಿಲ್ಲ. ಬ್ರಾಹ್ಮಣರು ಪ್ರತಿಯೊಬ್ಬರೂ ಮೋದಿಗಳಾ ಗಬೇಕು ಎಂದು ಸಲಹೆ ಮಾಡಿದರು.

ಧಾರ್ಮಿಕ ಚಿಂತಕಿ ಡಾ.ಬಿ.ವಿ.ಆರತಿ ಮಾತನಾಡಿ, ಬ್ರಾಹ್ಮಣ ಶಕ್ತಿ ಜಾಗೃತವಾಗ ಬೇಕು. ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಸಂಸ್ಕøತ ಕಲಿಸಬೇಕು. ಪೋಷಕರು ಪ್ರತಿಜ್ಞೆ ಮಾಡಬೇಕು. ಬ್ರಾಹ್ಮಣರಾದವರು ಸಂಸ್ಕøತ, ಶಾಸ್ತ್ರ, ವೇದ ಕಲಿಯಬೇಕು ಎಂದರು.

ವಿದ್ವಾಂಸ ಡಾ.ಅರಳುಮಲ್ಲಿಗೆ ಪಾರ್ಥ ಸಾರಥಿ ಮಾತನಾಡಿ, ಬ್ರಾಹ್ಮಣರಲ್ಲಿ ಅಖಂಡ ಆತ್ಮವಿಶ್ವಾಸ ಅಗತ್ಯ. ಬ್ರಾಹ್ಮಣ ವ್ಯಕ್ತಿತ್ವ ಉಳಿಸಿ ಕೊಳ್ಳಬೇಕು. ಬ್ರಾಹ್ಮಣ ಇದ್ದ ಕಡೆ ಯಶಸ್ಸು, ಶ್ರೇಯಸ್ಸು ಖಚಿತ ಎಂದರು. ಈ ಸಂದರ್ಭ ದಲ್ಲಿ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್, ಉಪಾಧ್ಯಕ್ಷ ಡಿ.ಎನ್.ಕೃಷ್ಣಮೂರ್ತಿ ಇನ್ನಿತರರು ಉಪಸ್ಥಿತರಿದ್ದರು.

Translate »