ಗಮನ ಸೆಳೆದ ಬ್ರಾಹ್ಮಣ ಸಮಾವೇಶದ ಬೃಹತ್ ಶೋಭಾಯಾತ್ರೆ
ಮೈಸೂರು

ಗಮನ ಸೆಳೆದ ಬ್ರಾಹ್ಮಣ ಸಮಾವೇಶದ ಬೃಹತ್ ಶೋಭಾಯಾತ್ರೆ

December 17, 2018

ಮೈಸೂರು: ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಮಾವೇಶದ ಅಂಗವಾಗಿ ಮೈಸೂರಲ್ಲಿ ಭಾನುವಾರ ನಡೆದ ಬೃಹತ್ ಶೋಭಾ ಯಾತ್ರೆ ಗಮನ ಸೆಳೆಯಿತು. ಓಂ ಚಿಹ್ನೆ ಇರುವ ಕೇಸರಿ ವರ್ಣದ ನೂರಾರು ಬಾವುಟಗಳು ಶೋಭಾ ಯಾತ್ರೆಯ ಉದ್ದಕ್ಕೂ ರಾರಾಜಿಸಿದವು.

ಮೈಸೂರಿನ ಶಂಕರಮಠ ಆವರಣದಿಂದ ಹೊರಟ ಮೆರವಣಿಗೆಗೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎನ್.ಕುಮಾರ್, ಸಮ್ಮೇಳನಾಧ್ಯಕ್ಷ ಡಿ.ಟಿ.ಪ್ರಕಾಶ್ ನೇತೃತ್ವ ದಲ್ಲಿ ಅಲಂಕೃತ ಬೆಳ್ಳಿರಥದಲ್ಲಿ ಇರಿಸಿದ್ದ ಗಾಯತ್ರಿ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಲಾಯಿತು. ಇದೇ ವೇಳೆ ಅಲಂ ಕೃತ ವಾಹನದಲ್ಲಿದ್ದ ತ್ರಿಮತಾಚಾರ್ಯರಾದ ಶಂಕರಾ ಚಾರ್ಯ, ರಾಮಾನುಜಾಚಾರ್ಯ, ಮಧ್ವಾಚಾರ್ಯರ ಪ್ರತಿಮೆಗಳಿಗೂ ಪುಷ್ಪಾರ್ಚನೆ ಮಾಡಲಾಯಿತು.

ಅಲ್ಲಿಂದ ಹೊರಟ ಶೋಭಾಯಾತ್ರೆ ಸಂಸ್ಕøತ ಪಾಠ ಶಾಲಾ ವೃತ್ತ, ಚಾಮರಾಜ ಜೋಡಿ ರಸ್ತೆ, ತ್ಯಾಗರಾಜ ರಸ್ತೆ, ಅಗ್ರಹಾರ ವೃತ್ತ, ಮಹಾತ್ಮ ಗಾಂಧಿ ರಸ್ತೆ, ರಾಮಾ ನುಜ ರಸ್ತೆ, ಕಂಸಾಳೆ ಮಹದೇವಯ್ಯ ವೃತ್ತ, ಎಲೆ ತೋಟ, ನೀಲಗಿರಿ ರಸ್ತೆ ಮೂಲಕ ಗಣಪತಿ ಸಚ್ಚಿದಾ ನಂದ ಆಶ್ರಮವನ್ನು ತಲುಪಿತು. ಸಾವಿರಾರು ವಿಪ್ರರು ಭಾಗವಹಿಸಿದ್ದ ಮೆರವಣಿಗೆಯಲ್ಲಿ ಪುರುಷರು, ಮಹಿಳೆ ಯರು ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ನಂದಿ ಕಂಬ, ವೀರಭದ್ರ ಕುಣಿತ, ಕಂಸಾಳೆ, ಗಾರುಡಿಗೊಂಬೆ, ಪೂಜಾ ಕುಣಿತ, ಬ್ಯಾಂಡ್‍ಸೆಟ್, ಡೊಳ್ಳು ಕುಣಿತ, ಚಂಡೆ ಮದ್ದಳೆ, ಕೊಂಬು ಕಹಳೆ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು ಪಾಲ್ಗೊಂಡು ಆಕರ್ಷಿಸಿದವು.

ಮೈಸೂರು ಬ್ರಾಹ್ಮಣ ಸಂಘ, ಹೂಟಗಳ್ಳಿ ಗಾಯತ್ರಿ ವಿಪ್ರ ಸಂಘ, ಚಾಮರಾಜನಗರ ಬ್ರಾಹ್ಮಣ ಸಂಘ, ಕೆ.ಆರ್.ಪೇಟೆ ತಾಲೂಕು ಬ್ರಾಹ್ಮಣ ಸಂಘ, ಕೆ.ಆರ್. ನಗರ ಬ್ರಾಹ್ಮಣ ಧರ್ಮ ಸಹಾಯಸಭಾ ಸೇರಿದಂತೆ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಿಂದ ವಿವಿಧ ಬ್ರಾಹ್ಮಣ ಸಂಘಟನೆಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು. ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ. ರಾಮದಾಸ್, ಡಾ.ಭಾನುಪ್ರಕಾಶ್ ಶರ್ಮ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಕೆ.ಎನ್. ವೆಂಕಟನಾರಾಯಣ, ಹಿರಿಯ ಉಪಾಧ್ಯಕ್ಷ ಆರ್.ಲಕ್ಷ್ಮಿ ಕಾಂತ್, ಸಮಾವೇಶದ ಪ್ರಧಾನ ಕಾರ್ಯದರ್ಶಿ ಮಾ.ವಿ. ರಾಮಪ್ರಸಾದ್, ಡಿ.ಎನ್.ಕೃಷ್ಣಮೂರ್ತಿ, ಎಸ್.ಆರ್. ಗೋಪಾಲರಾವ್, ಮೈಸೂರು ಜಿಲ್ಲಾ ಸಹಕಾರ ಯೂನಿ ಯರ್ ಅಧ್ಯಕ್ಷ ಎಚ್.ವಿ.ರಾಜೀವ್, ಸಮಿತಿಯ ಎಂ.ಡಿ. ಪಾರ್ಥಸಾರಥಿ, ವೇಣುಗೋಪಾಲ್, ಕಡಕೊಳ ಜಗ ದೀಶ್, ಚಾಮರಾಜನಗರದ ಗಣೇಶ್ ದೀಕ್ಷಿತ್, ಸುರೇಶ್ ಋಗ್ವೇದಿ, ಬಾಲಸುಬ್ರಹ್ಮಣ್ಯ, ಶೋಭಾ ಯಾತ್ರೆಯ ಉಪಾಧ್ಯಕ್ಷ ಅಜಯ್‍ಶಾಸ್ತ್ರಿ, ಪ್ರಚಾರ ಸಮಿತಿಯ ವಿಕ್ರಂ ಅಯ್ಯಂಗಾರ್, ರಂಗನಾಥ್ ಇನ್ನಿತರರು ಭಾಗವಹಿಸಿದ್ದರು.

Translate »