ತಿ.ನರಸೀಪುರದ ವಿವಿಧೆಡೆ ಉಪಹಾರ, ದವಸ-ಧಾನ್ಯ ವಿತರಣೆ
ಮೈಸೂರು ಗ್ರಾಮಾಂತರ

ತಿ.ನರಸೀಪುರದ ವಿವಿಧೆಡೆ ಉಪಹಾರ, ದವಸ-ಧಾನ್ಯ ವಿತರಣೆ

April 20, 2020

ತಿ.ನರಸೀಪುರ, ಏ.19(ಎಸ್‍ಕೆ)-ಪಟ್ಟಣದ ವಿಶ್ವಕರ್ಮ ಬೀದಿಯಲ್ಲಿರುವ ರೇಣುಕಾ ಸಭಾ ಭವನದ ಬಳಿ ಶ್ರೀ ಗುಂಜಾನರಸಿಂಹಸ್ವಾಮಿ ಗೆಳೆಯರ ಬಳಗದಿಂದ ಸಾರ್ವ ಜನಿಕರು ಹಾಗೂ ಅಶಕ್ತರಿಗೆ ಏರ್ಪಡಿಸಿದ್ದ ಮಧ್ಯಾಹ್ನದ ಉಪಹಾರ ವಿತರಣೆ ಕಾರ್ಯಕ್ರಮಕ್ಕೆ ಬಳಗದ ಮುಖ್ಯಸ್ಥ ಕುದೇರು ನಾಗೇಂದ್ರ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಕೊರೊನಾ ಹರಡು ವಿಕೆ ನಿಯಂತ್ರಣಕ್ಕಾಗಿ ದೇಶಾದ್ಯಂತ ಲಾಕ್‍ಡೌನ್ ಜಾರಿಯಲ್ಲಿರುವುದರಿಂದ ಬಡವರು, ಅಶಕ್ತರಿಗೆ ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ನಿರ್ಮಾಣ ವಾಗಿದೆ. ಪರಿಸ್ಥಿತಿಯ ಅವಲೋಕನದೊಂದಿಗೆ ಗೆಳೆಯರ ಬಳಗವು ಲಾಕ್‍ಡೌನ್ ಮುಗಿಯು ವವರೆಗೂ ನಿರಂತರವಾಗಿ ಮಧ್ಯಾಹ್ನದ ಉಪಹಾರ ವಿತರಿಸಲು ಬಳಗ ಮುಂದಾಗಿದೆ. ಅವಶ್ಯಕತೆ ಇರುವವರು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಮನವಿ ಮಾಡಿದರು.

ಈ ವೇಳೆ ಪುರಸಭಾ ಸದಸ್ಯ ಎಸ್.ಕೆ.ಕಿರಣ್, ಪಿಎಸಿ ಸಿಎಸ್ ನಿರ್ದೇಶಕ ಕೆ.ನಂಜುಂಡಸ್ವಾಮಿ, ಶಾಮಿಯಾನ ವೀರೇಶ್, ಶಿವರಾಜು, ಬಾಲ ರಾಜು, ಮಂಜುನಾಥ್, ಹೋಟೆಲ್ ರಾಜಣ್ಣ, ತಿಮ್ಮಪ್ಪ, ಚೌಹಳ್ಳಿ ನಾಗ, ಎಂ. ಸುರೇಶ್‍ಕುಮಾರ್, ಮಾಸ್ಕ್ ಸಿದ್ದರಾಜು ಮತ್ತಿತರರಿದ್ದರು.

ದಿನಸಿ ಕಿಟ್ ವಿತರಣೆ: ತಾಲೂಕಿನ ವ್ಯಾಸರಾಜಪುರ ಗ್ರಾಮದಲ್ಲಿ 50ಕ್ಕೂ ಹೆಚ್ಚು ಬಡ ಕುಟುಂಬಗಳಿಗೆ ಪಿಎಸಿಸಿಎಸ್ ನಿರ್ದೇಶಕ ಹಾಗೂ ಪ್ರಥಮ ದರ್ಜೆ ಗುತ್ತಿಗೆದಾರ ಶ್ರೀರಂಗರಾಜಪುರ ಎಂ.ಸಿದ್ದರಾಜು ದಿನಸಿ ಕಿಟ್ ವಿತರಿಸಿದರು. ಬಳಿಕ ಮಾತನಾಡಿದ ಅವರು, ಗ್ರಾಮೀಣ ಜನತೆ ಕೃಷಿ ಚಟುವಟಿಕೆಗಳನ್ನೇ ಹೆಚ್ಚು ಅವಲಂಬಿಸಿದ್ದು, ಲಾಕ್‍ಡೌನ್‍ನಿಂದ ಆರ್ಥಿಕ ಸಮಸ್ಯೆ ಎದುರಿಸುತ್ತಾರೆ. ಗ್ರಾಮದ ಜನತೆಗೆ ಆದಾಯದ ಮೂಲವೇ ಇಲ್ಲದಂತಾಗಿದೆ. ಜೀವನ ನಿರ್ವಹಣೆಗೆ ಸಾಲ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂಕಷ್ಟದಲ್ಲಿ ಅವರಿಗೆ ಸ್ಪಂದಿಸಬೇಕಾದದ್ದು ಪ್ರತಿಯೊಬ್ಬರ ಕರ್ತವ್ಯ. ನಾನು ಮಾನವೀಯ ದೃಷ್ಟಿಯಿಂದ ದವಸ-ಧಾನ್ಯ ನೀಡುವ ಮೂಲಕ ಕೈಲಾದ ಅಲ್ಪ ಸಹಾಯ ಮಾಡುತ್ತಿದ್ದೇನೆ ಎಂದರು.

ತಾಲೂಕು ಆಡಳಿತ ಕಡು ಬಡವರಿರುವ ಗ್ರಾಮವನ್ನು ಗುರುತಿಸಿ ಸ್ಪಂದಿಸಬೇಕು ಹಾಗೂ ಸಂಘ ಸಂಸ್ಥೆಗಳು ಹಾಗೂ ಉಳ್ಳವರು ಬಡ ಕುಟುಂಬಗಳನ್ನು ಗುರುತಿಸಿ ಆಹಾರದ ಸಾಮಗ್ರಿ ವಿತರಿಸುವ ಮೂಲಕ ಸಾಮಾಜಿಕ ಜವಾಬ್ದಾರಿ ಮೆರೆಯಬೇಕೆಂದರು. ಈ ವೇಳೆ ಸೋಮನಾಥ ಪುರ ಗ್ರಾಪಂ ಮಾಜಿ ಅಧ್ಯಕ್ಷೆ ಪುಟ್ಟಸಿದ್ದಮ್ಮ, ಸದಸ್ಯೆ ಸಿದ್ದಮ್ಮ, ಕೆಬ್ಬೆ ನಾಗಣ್ಣ ಲೋಕೇಶ್, ಮಾದೇವ, ರಂಗಸ್ವಾಮಿ ಇದ್ದರು.

Translate »