ಶಿಕ್ಷಕನಿಂದ ಲಂಚ ಸ್ವೀಕಾರ: ಡಿಡಿಪಿಐ ಕಚೇರಿ ಎಫ್‍ಡಿಎ ಎಸಿಬಿ ಬಲೆಗೆ
ಮೈಸೂರು

ಶಿಕ್ಷಕನಿಂದ ಲಂಚ ಸ್ವೀಕಾರ: ಡಿಡಿಪಿಐ ಕಚೇರಿ ಎಫ್‍ಡಿಎ ಎಸಿಬಿ ಬಲೆಗೆ

June 19, 2018

ಮೈಸೂರು: ಮುಂಬಡ್ತಿ ಪಟ್ಟಿಗೆ ಹೆಸರು ಸೇರಿಸಲು ಡಿಡಿಪಿಐ ಕಚೇರಿ ಎಫ್‍ಡಿಎ ಕೆಂಪೇ ಗೌಡ, ಶಿಕ್ಷಕನಿಂದ 15 ಸಾವಿರ ರೂ. ಲಂಚ ಪಡೆಯುತ್ತಿದ್ದಾಗ ಭ್ರಷ್ಟಾಚಾರ ನಿಗ್ರಹ ದಳದ(ಎಸಿಬಿ) ಬಲೆಗೆ ಬಿದ್ದಿದ್ದಾರೆ.

ತಿ.ನರಸೀಪುರ ಸರ್ಕಾರಿ ಶಾಲೆ ಶಿಕ್ಷಕ ವಸಂತ್‍ಕುಮಾರ್ ಅವರ ಹೆಸರನ್ನು ಮುಂಬಡ್ತಿ ಪಟ್ಟಿಗೆ ಸೇರಿಸಲು ಕೆಂಪೇ ಗೌಡ 20 ಸಾವಿರ ರೂ.ಗೆ ಬೇಡಿಕೆ ಇಟ್ಟಿದ್ದರು. ಈ ಕುರಿತು ವಸಂತ್‍ಕುಮಾರ್ ಎಸಿಬಿಗೆ ದೂರು ನೀಡಿದ್ದರು. ಸೋಮ ವಾರ ಸಂಜೆ 4.30ರ ವೇಳೆಗೆ ಡಿಡಿಪಿಐ ಕಚೇರಿಯಲ್ಲಿ ಕೆಂಪೇಗೌಡ 15 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ, ಕೆಂಪೇ ಗೌಡನನ್ನು ಬಂಧಿಸಿ, 15 ಸಾವಿರ ರೂ. ವಶಕ್ಕೆ ಪಡೆದಿದ್ದಾರೆ. ನಂತರ ಕೆಂಪೇ ಗೌಡನನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಎಸಿಬಿ ಎಸ್‍ಪಿ ಹೆಚ್.ಟಿ.ಶೇಖರ್ ಮಾರ್ಗದರ್ಶನದಲ್ಲಿ ಎಸಿಬಿ ಡಿವೈಎಸ್‍ಪಿ ಉಮೇಶ್ ಜಿ.ಶೇಠ್ ನೇತೃತ್ವದಲ್ಲಿ ಇನ್ಸ್‍ಪೆಕ್ಟರ್‍ಗಳಾದ ವಿನಯ್, ಶೇಖರ್ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Translate »