ನವದೆಹಲಿ: ಕೇಂದ್ರ ಸರ್ಕಾರದ ಅಧೀನದ ಶಾಲೆಗಳಲ್ಲಿ 1ರಿಂದ 8ನೇ ತರಗತಿ ಶಿಕ್ಷಕರಾಗಿ ನೇಮಕ ವಾಗಲು ಸಿಟಿಇಟಿ ಪರೀಕ್ಷೆಯಲ್ಲಿ ತೇರ್ಗಡೆ ಯಾಗುವುದು ಕಡ್ಡಾಯವಾ ಗಿದ್ದು ಶಿಕ್ಷಕರಾಗುವವರಿಗೆ ಅನುಕೂಲ ವಾಗು ವಂತೆ ಕೇಂದ್ರ ಸರ್ಕಾರ ತ್ರಿ-ಭಾಷಾ ಸೂತ್ರವನ್ನು ರದ್ದು ಮಾಡಿದ್ದು ಇನ್ನು ಪ್ರಾದೇಶಿಕ ಭಾಷೆಯಲ್ಲೇ ಪರೀಕ್ಷೆ ಗಳನ್ನು ಬರೆಯಬಹುದಾಗಿದೆ.
ಮೊದಲಿಗೆ ಭಾರತದ 20 ಭಾಷೆ ಗಳಲ್ಲೂ ಸಿಟಿಇಟಿ ಪರೀಕ್ಷಾರ್ಥ ಪರೀಕ್ಷೆ ಯನ್ನು ನಡೆಸಿತ್ತು. ನಂತರ ಪ್ರಾದೇಶಿಕ ಭಾಷೆಗಳಾದ ಕನ್ನಡ, ತಮಿಳು, ಮಲ ಯಾಳಂ, ತೆಲುಗು, ಗುಜರಾತ್ ಮತ್ತು ಬೆಂಗಾಳಿ ಸೇರಿದಂತೆ 17 ಭಾಷೆಗಳನ್ನು ಹೊರತುಪಡಿಸಿ ಬರೀ ಮೂರೇ ಭಾಷೆ ಯಲ್ಲಿ ಪರೀಕ್ಷೆಯನ್ನು ನಡೆಸುವುದಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಇದೀಗ ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ಜಾವ್ಡೇಕಾರ್ ಅಭ್ಯರ್ಥಿಗಳು ಆಯಾ ಪ್ರಾದೇಶಿಕ ಭಾಷೆಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಕಾಶ್ ಜಾವ್ಡೇಕರ್ ಭಾರತದ ಎಲ್ಲಾ ಪ್ರಾದೇಶಿಕ ಭಾಷೆಗಳಲ್ಲಿಯೂ ಸಿಟಿಇಟಿ ಪರೀಕ್ಷೆಯನ್ನು ನಡೆಸಲಾಗುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.
ಸಿಟಿಇಟಿ ಪರೀಕ್ಷೆಯನ್ನು 2018ರ ಸೆಪ್ಟೆಂಬರ್ 16ರಂದು ನಡೆಸಲಾಗುತ್ತದೆ. ಪತ್ರಿಕೆ 1 ಮಧ್ಯಾಹ್ನ 2ರಿಂದ 4.30ರವರೆಗೆ. ಪತ್ರಿಕೆ 2 ಬೆಳಗ್ಗೆ 9.30ರಿಂದ 12ರವರೆಗೆ ನಡೆಸಲಾಗುತ್ತದೆ. ಎರಡು ವಿಭಾಗದಲ್ಲಿ ಪರೀಕ್ಷೆಯನ್ನು ನಡೆಸಲಾಗುತ್ತದೆ. 1ರಿಂದ 5ನೇ ತರಗತಿ ಶಿಕ್ಷಕರಾಗಲು ಪತ್ರಿಕೆ 1 ಹಾಗೂ 6ರಿಂದ 8ನೇ ತರಗತಿಗೆ ಶಿಕ್ಷಕರಾಗುವವರು ಪತ್ರಿಕೆ 2ನ್ನು ಬರೆಯಬೇಕಾಗುತ್ತದೆ.