ಮೈಸೂರಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪರ ಕಂಚಿನ ಪ್ರತಿಮೆ ಅನಾವರಣ
ಮೈಸೂರು

ಮೈಸೂರಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪರ ಕಂಚಿನ ಪ್ರತಿಮೆ ಅನಾವರಣ

October 17, 2021

ಮೈಸೂರು,ಅ.೧೬(ಪಿಎಂ)-ಭಾರತೀಯ ಸೇನೆಯ ಪ್ರಪ್ರಥಮ ದಂಡನಾಯಕ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ ಪ್ರತಿಮೆಯನ್ನು ಅವರ ಹೆಸರಿನಲ್ಲೇ ಇರುವ ಮೈಸೂರಿನ ಪ್ರಮುಖ ವೃತ್ತ ದಲ್ಲಿ ಶನಿವಾರ ಪ್ರತಿಷ್ಠಾಪನೆ ಮಾಡಲಾಯಿತು.

ಈ ಮೊದಲು ಮೆಟ್ರೋಪೋಲ್ ವೃತ್ತ ಎಂದು ಕರೆಯಲಾಗುತ್ತಿತ್ತು. ಹಲವು ವರ್ಷಗಳ ಹಿಂದೆಯೇ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ ಹೆಸರನ್ನು ನಾಮಕಾರಣ ಮಾಡಿ, ಅವರ ಪುತ್ಥಳಿ ಪ್ರತಿಷ್ಠಾಪಿಸಲಾಗಿತ್ತು. ಇದೀಗ ಇಂದು ಬೆಳಗ್ಗೆ ೫೦೦ ಕೆಜಿ ತೂಕದ ಕಂಚಿನ ಪ್ರತಿಮೆ ಪ್ರತಿಷ್ಠಾಪನೆ ಮಾಡಲಾಯಿತು. ಬಳಿಕ ನೂತನ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಶಾಸಕ ಎಲ್.ನಾಗೇಂದ್ರ ಉದ್ಘಾಟನೆ ನೆರವೇರಿಸಿದರು.

ಕೊಡವ ಸಮಾಜ ಮೈಸೂರು, ಕೊಡವ ಸಮಾಜ ಕಲ್ಚರಲ್ ಅಂಡ್ ಸ್ಪೋರ್ಟ್ಸ್ ಕ್ಲಬ್ ಮತ್ತು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅಭಿಮಾನಿ ಬಳಗದ ಸಂಯುಕ್ತಾಶ್ರಯದಲ್ಲಿ ೧೧ ಲಕ್ಷ ರೂ. ವೆಚ್ಚದಲ್ಲಿ ಕೆ.ಎಂ.ಕಾರ್ಯಪ್ಪರ ಕಂಚಿನ ಪ್ರತಿಮೆ ಪ್ರತಿಷ್ಠಾಪಿಸ ಲಾಗಿದೆ. ಪ್ರತಿಮೆಯ ಪೀಠದ (ವೇದಿಕೆ) ಸುತ್ತಳ ತೆಯು ಚೌಕಾಕಾರದಲ್ಲಿ ೪x೪ ಅಡಿ ಇದ್ದು, ಪೀಠದ ಎತ್ತರ ೫ ಅಡಿ ಇದೆ. ಇದರ ಅಡಿಪಾಯ ೪ ಅಡಿ ಇದೆ. ಪೀಠದ ಮೇಲೆ ಪ್ರತಿಷ್ಠಾಪಿಸಿರುವ ಕೆ.ಎಂ. ಕಾರ್ಯಪ್ಪರ ಪ್ರತಿಮೆ ಎಂಟೂವರೆ ಅಡಿ (೮.೫ ಅಡಿ) ಎತ್ತರವಿದೆ. ಪ್ರತಿಮೆಗೆ ಕಪ್ಪು ವರ್ಣ ಲೇಪಿಸಿ ರುವ ಹಿನ್ನೆಲೆಯಲ್ಲಿ ಶಿಲೆಯಲ್ಲಿ ನಿರ್ಮಿಸಿರುವಂತೆ ಕಾಣುತ್ತದೆ. ಕಾರ್ಯಪ್ಪನವರು ತಮ್ಮ ಸೇನಾ ಸಮವಸ್ತçದಲ್ಲಿ ದಂಡ ಹಿಡಿದು ನಿಂತಿರುವ ಭಂಗಿ ಯಲ್ಲಿ ಪ್ರತಿಮೆ ಇದ್ದು, ಕಾವಾ ಡೀನ್ ಆಗಿದ್ದ ದಿವಂ ಗತ ವಿ.ಎ.ದೇಶಪಾಂಡೆ ಮತ್ತು ಇವರ ಪತ್ನಿ ಪ್ರಮೋ ದಿನಿ ದೇಶಪಾಂಡೆಯವರು ಪ್ರತಿಮೆಯ ಶಿಲ್ಪಿಗಳು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಎಲ್.ನಾಗೇಂದ್ರ, ಪೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪನವರು ದೇಶದ ಹಿರಿಮೆ ಹೆಚ್ಚಿಸಿದವರು. ಅವರ ಸೇವೆಯನ್ನು ಇಡೀ ದೇಶದ ಜನ ಮರೆ ಯಲು ಸಾಧ್ಯವಿಲ್ಲ. ಅವರ ಈ ನೂತನ ಪ್ರತಿಮೆಗೆ ವರ್ಷಪೂರ್ತಿ ದೀಪಾಲಂಕಾರಕ್ಕೆ ವ್ಯವಸ್ಥೆ ಮಾಡ ಲಾಗುವುದು. ಜೊತೆಗೆ ಕೆ.ಎಂ.ಕಾರ್ಯಪ್ಪರ ಸ್ಮರಣಾರ್ಥ ಸರ್ಕಾರದ ವತಿಯಿಂದಲೇ ವಿವಿಧ ಕಾರ್ಯಕ್ರಮ ಆಯೋಜಿಸಲಾಗುವುದು. ಅವರ ಈ ನೂತನ ಪ್ರತಿಮೆ ಕಂಡು ಹರ್ಷಗೊಂಡಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದರು.
ಇದೇ ವೇಳೆ ಮಾಜಿ ಮೇಯರ್ ಎಂ.ಜೆ.ರವಿ ಕುಮಾರ್ ಸಹ ಆಗಮಿಸಿ, ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು. ಕೊಡವ ಸಮಾಜ ಮೈಸೂರು ಅಧ್ಯಕ್ಷ ಕೆ.ಎಂ.ಬೆಳ್ಳಿಯಪ್ಪ, ಮಾಜಿ ಅಧ್ಯಕ್ಷರಾದ ಎಂ.ಎA. ಕರುಂಬಯ್ಯ, ಡಾ.ಪುಟ್ಟಪ್ಪ, ಕಾರ್ಯದರ್ಶಿ ಎಂ.ಎA. ಪೊನ್ನಪ್ಪ, ಖಜಾಂಚಿ ಎಂ.ಬಿ.ಜೀವನ್, ಕೊಡವ ಸಮಾಜ ಕಲ್ಚರಲ್ ಅಂಡ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಕೆ.ಡಿ.ಮುತ್ತಪ್ಪ, ಮಾಜಿ ಅಧ್ಯಕ್ಷ ಎಂ.ಪಿ.ನಾಣಯ್ಯ, ಜಂಟಿ ಕಾರ್ಯದರ್ಶಿ ಪ್ರಕಾಶ್, ಗೌರವ ಕಾರ್ಯ ದರ್ಶಿ ಎಂ.ಎಸ್.ಬೋಪಣ್ಣ, ಕೊಡವ ಸಮು ದಾಯದ ಮುಖಂಡ ಕೆ.ಡಿ.ಕಾರ್ಯಪ್ಪ, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅಭಿಮಾನಿ ಬಳಗದ ಅಧ್ಯಕ್ಷ ಎನ್.ಎಂ.ತಿಮ್ಮಯ್ಯ, ಕೊಡವ ಸಮಾಜ ಮೈಸೂರು ಮತ್ತು ಕೊಡವ ಸಮಾಜ ಕಲ್ಚರಲ್ ಅಂಡ್ ಸ್ಪೋರ್ಟ್ಸ್ ಕ್ಲಬ್‌ನ ಕಾನೂನು ಸಲಹೆಗಾರ ಜೆ.ಎಂ. ಅಯ್ಯಣ್ಣ, ಪಾಲಿಕೆ ಸದಸ್ಯ ಎಂ.ಯು.ಸುಬ್ಬಯ್ಯ, ಮುಖಂಡರಾದ ರಮೇಶ್‌ರಾವ್, ಶೆಟ್ಟಿಹಳ್ಳಿ ರವಿ ಕುಮಾರ್, ಪ್ರವೀಣ್ ಚೆಂಗಪ್ಪ ಇತರರಿದ್ದರು.

 

Translate »