ತಮಿಳ್ನಾಡಿನಲ್ಲಿ ಸೆರೆ ಹಿಡಿದ ಹುಲಿಗೆ ಮೈಸೂರಲ್ಲಿ `ಆರೈಕೆ’!
ಮೈಸೂರು

ತಮಿಳ್ನಾಡಿನಲ್ಲಿ ಸೆರೆ ಹಿಡಿದ ಹುಲಿಗೆ ಮೈಸೂರಲ್ಲಿ `ಆರೈಕೆ’!

October 17, 2021

ಮೈಸೂರು, ಅ.೧೬(ಎಂಟಿವೈ)-ತಮಿಳುನಾಡಿನ ಮದುಮಲೈ ಹುಲಿ ಸಂರಕ್ಷಿತ ಪ್ರದೇಶದ ಮಸಣಗುಡಿ ಕಾಡಂಚಿನ ಗ್ರಾಮದಲ್ಲಿ ನಾಲ್ವರನ್ನು ಬಲಿ ಪಡೆದಿದ್ದ ಹುಲಿಯನ್ನು ಸೆರೆ ಹಿಡಿಯಲಾಗಿದೆ. ಅದನ್ನು ಮೈಸೂರು ಹೊರ ವಲಯದ ಕೂರ್ಗಳ್ಳಿಯ ಮೈಸೂರು ಮೃಗಾಲಯದ ಪುನ ರ್ವಸತಿ ಕೇಂದ್ರಕ್ಕೆ ತಂದು ಆರೈಕೆ ಮಾಡಲಾಗುತ್ತಿದೆ. ಅನ್ಯ ರಾಜ್ಯದಲ್ಲಿ ಸೆರೆ ಸಿಕ್ಕಿದ ಹುಲಿಗೆ ಮೈಸೂರು ಮೃಗಾಲಯದ ವತಿಯಿಂದ ಆರೈಕೆ ಮಾಡುತ್ತಿರುವುದು ಇದೇ ಮೊದಲು.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊAಡಿರುವ ತಮಿಳುನಾಡಿನ ಮದುಮಲೆ ಹುಲಿ ಸಂರಕ್ಷಿತ ಪ್ರದೇಶದ ಮಸಣಗುಡಿ ರಸ್ತೆಯಲ್ಲಿನ ಪಂದಲೂರು ವಲಯ ವ್ಯಾಪ್ತಿಯಲ್ಲಿ ತಿಂಗಳಲ್ಲಿ ನಾಲ್ವರ ಬಲಿ ಪಡೆದಿತ್ತು. ಜೊತೆಗೆ ೩೦ಕ್ಕೂ ಹೆಚ್ಚು ಜಾನುವಾರುಗಳನ್ನು ತಿಂದು ತೇಗಿತ್ತು. ತಮಿಳುನಾಡು ಅರಣ್ಯ ಇಲಾಖೆ ಸಿಬ್ಬಂದಿ ಅ.೧೪ರಂದು ಸಂಜೆ ಇದನ್ನು ಸೆರೆ ಹಿಡಿದಿದ್ದರು. ಶುಕ್ರವಾರ ಮಧ್ಯರಾತ್ರಿ ಮೈಸೂರಿಗೆ ತಂದು ಗಾಯಗೊಂಡಿರುವ ಈ ಹುಲಿಗೆ ಚಿಕಿತ್ಸೆ ನೀಡಿ, ಆರೈಕೆ ಮಾಡಲಾಗುತ್ತಿದೆ.

ಸರಹದ್ದು ಕಾದಾಟದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಸುಮಾರು ೧೦ ವರ್ಷದ ಗಂಡು ಹುಲಿ ಬೈಕ್ ಸವಾರರು ಹಾಗೂ ದನ ಗಾಹಿಗಳ ಮೇಲೆ ಎರಗುತ್ತಿತ್ತು. ಸ್ಥಳೀಯರಿಂದ ಅರಣ್ಯ ಇಲಾಖೆ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದರಿಂದ ಗುಂಡಿಕ್ಕಿ ಕೊಲ್ಲುವ ಆದೇಶ ಹೊರಡಿಸಲಾಗಿತ್ತು. ಹುಲಿ ಕೊಲ್ಲದಂತೆ ಪರಿಸರವಾದಿಗಳು ನ್ಯಾಯಾ ಲಯದ ಮೆಟ್ಟಿಲೇರಿದ್ದರು. ಆದರೂ ಕಳೆದ ೨೦ ದಿನದಿಂದ ಹುಲಿ ಸೆರೆ, ಅನಿವಾರ್ಯವಾದರೆ ಗುಂಡಿಕ್ಕಿ ಕೊಲ್ಲುವ ಕಾರ್ಯಾಚರಣೆ ಆರಂಭಿಸ ಲಾಗಿತ್ತು. ನೆರವಿಗಾಗಿ ಬಂಡೀಪುರದ ಪತ್ತೆದಾರಿ ಶ್ವಾನ ರಾಣಾ ಹಾಗೂ ಪಾಲಕ ಸುರೇಶ್ ಕಲ್ಕಕರ್ ಮಗೆ ಅವರನ್ನು ಕರೆದೊಯ್ಯಲಾಗಿತ್ತು. ಅ.೧೪ ರಂದು ಸಂಜೆ ಹುಲಿಗೆ ಅರವಳಿಕೆ ಮದ್ದು ನೀಡಿ ಸೆರೆ ಹಿಡಿಯಲಾಗಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಹುಲಿಗೆ ತುರ್ತಾಗಿ ಚಿಕಿತ್ಸೆ ಕೊಡಿಸುವ ಅಗತ್ಯವಿತ್ತು. ಚೆನ್ನೆöÊನ ವಂಡಲೂರು ಮೃಗಾಲಯಕ್ಕೆ ಕೊಂಡೊಯ್ಯಲು ೭ ಗಂಟೆ ಅವಧಿ ಬೇಕಾಗುವುದನ್ನು ಮನಗಂಡು ಹಿರಿಯ ಅಧಿಕಾರಿಗಳು ಮೈಸೂರು ಮೃಗಾಲಯಕ್ಕೆ ತರಲು ನಿರ್ಧರಿಸಿದ್ದರು. ಕಳೆದ ರಾತ್ರಿ ೧೧.೩೦ಕ್ಕೆ ಕೂರ್ಗಳ್ಳಿಯಲ್ಲಿರುವ ಪುನರ್ವಸತಿ ಕೇಂದ್ರಕ್ಕೆ ತಮಿಳುನಾಡಿನ ೧೦ ಅಧಿಕಾರಿಗಳ ತಂಡ ಗಾಯಗೊಂಡಿದ್ದ ಹುಲಿಯನ್ನು ತಂದು ಬಿಟ್ಟಿದ್ದಾರೆ.

ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, ಅಸ್ವಸ್ಥ ಗೊಂಡ ವನ್ಯಜೀವಿಗಳ ರಕ್ಷಣೆಗೆ ದಶಕದ ಹಿಂದೆಯೇ ನಗರದ ಹೊರ ವಲಯದ ಕೂರ್ಗಳ್ಳಿಯಲ್ಲಿ ಪುನರ್ವಸತಿ ಕೇಂದ್ರ ಸ್ಥಾಪಿಸ ಲಾಗಿದೆ. ಇಲ್ಲಿ ೮ ಹುಲಿಗಳನ್ನು ರಕ್ಷಿಸಲಾಗಿದೆ. ಮೊದಲ ಬಾರಿಗೆ ಹೊರ ರಾಜ್ಯದಿಂದ ಹುಲಿಯನ್ನು ಇಲ್ಲಿಗೆ ತರಲಾಗಿದೆ. ಇದಕ್ಕೆ ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಎಂ.ಕುಲ ಕಣ ð ಮಾತನಾಡಿ, ಕತ್ತು, ಮುಖ ಸೇರಿದಂತೆ ವಿವಿಧೆಡೆ ಗಾಯವಾಗಿ ರುವ ಹುಲಿ ಸ್ಥಿತಿ ಗಂಭೀರವಾಗಿತ್ತು. ಪುನರ್ವಸತಿ ಕೇಂದ್ರದಲ್ಲಿ ರಾತ್ರಿಯೇ ಚಿಕಿತ್ಸೆ ಆರಂಭಿಸಲಾಗಿದೆ. ಬೆಳಗ್ಗೆ ೨ ಕೋಳಿ ಸೇವಿಸಿದೆ. ಮಲ, ಮೂತ್ರ ವಿಸರ್ಜಿಸಿರುವುದರಿಂದ ಹುಲಿಯ ಜೀರ್ಣ ಪ್ರಕ್ರಿಯೆ ಚೆನ್ನಾಗಿರುವುದು ದೃಢಪಟ್ಟಿದೆ. ಆದರೂ ಚಿಕಿತ್ಸೆ ಮುಂದುವರೆಸಲಾಗಿದೆ ಎಂದರು.

Translate »