ನರಿ, ಪುನುಗು ಬೆಕ್ಕಿನ ಚರ್ಮ, ಉಡ ಮಾರಾಟಕ್ಕೆ ಯತ್ನ: ಒಬ್ಬನ ಬಂಧನ
ಮೈಸೂರು

ನರಿ, ಪುನುಗು ಬೆಕ್ಕಿನ ಚರ್ಮ, ಉಡ ಮಾರಾಟಕ್ಕೆ ಯತ್ನ: ಒಬ್ಬನ ಬಂಧನ

October 17, 2021

ಮೈಸೂರು,ಅ.೧೬(ಎAಟಿವೈ)-ಅಳಿವಿ ನಂಚಿನಲ್ಲಿರುವ ನರಿ, ಪುನುಗು ಬೆಕ್ಕಿನ ಚರ್ಮ ಹಾಗೂ ೨ ಜೀವಂತ ಉಡ ಮಾರಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ಅರಣ್ಯ ಸಂಚಾರಿ ದಳದ ಸಿಬ್ಬಂದಿ ಬಂಧಿಸಿ, ೫ ಚರ್ಮ ಹಾಗೂ ೨ ಉಡ ವಶಪಡಿಸಿಕೊಂಡಿದ್ದಾರೆ.

ಮAಡ್ಯ ಜಿಲ್ಲೆ ನಾಗಮಂಗಲ ತಾಲೂಕು ಶಿಕಾರಿಪುರ ಗ್ರಾಮದ ಯಶವಂತರಾವ್ (೪೮) ಬಂಧಿತ ಆರೋಪಿ. ಈತ ಹಲವಾರು ಅರಣ್ಯ ಅಪರಾಧ ಪ್ರಕರಣಗಳಲ್ಲಿ ಭಾಗಿ ಯಾಗಿದ್ದಾನೆ ಎಂದು ಅರಣ್ಯ ಸಂಚಾರಿ ದಳದ ಅಧಿಕಾರಿಗಳು ತಿಳಿಸಿದ್ದಾರೆ.

ನಾಗಮಂಗಲ ಹಾಗೂ ಹುಣಸೂರು ತಾಲೂ ಕಿನ ಪಕ್ಷಿರಾಜಪುರದ ಹಕ್ಕಿಪಿಕ್ಕಿ ಜನಾಂಗದವ ರೊಂದಿಗೆ ಸಂಪರ್ಕ ಹೊಂದಿರುವ ಈತ, ಅವರು ಗಿಡಮೂಲಿಕೆಯಿಂದ ತಯಾರಿಸುವ ಎಣ್ಣೆ ಮಾರಾಟ ಮಾಡುವ ಸೋಗಿನಲ್ಲಿ ಮೂಢನಂಬಿಕೆ ಹೊಂದಿರುವವರನ್ನು ಗುರು ತಿಸಿ ಅವರಿಗೆ ನರಿ, ಪುನುಗು ಬೆಕ್ಕಿನ ಚರ್ಮ ಹಾಗೂ ನರಿಯ ತಲೆ ಸೇರಿದಂತೆ ವನ್ಯಜೀವಿ ಗಳ ಅಂಗಾAಗಗಳನ್ನು ಮಾರಾಟ ಮಾಡು ತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನರಿಯ ತಲೆ ಬುರುಡೆ, ಚರ್ಮವನ್ನು ಇಟ್ಟುಕೊಂಡರೆ ಒಳಿತಾಗುತ್ತದೆ ಎಂಬ ಮೂಢನಂಬಿಕೆಗೆ ಕೆಲವರು ಒಳಗಾಗಿದ್ದಾರೆ. ಉಡವನ್ನು ವಾಮಾಚಾರಕ್ಕೆ ಬಳಸುತ್ತಾರೆ. ಅಂತಹವರಿಗೆ ಅವುಗಳನ್ನು ಮಾರಾಟ ಮಾಡುತ್ತಿದ್ದುದ್ದಾಗಿ ಆರೋಪಿ ಒಪ್ಪಿಕೊಂಡಿ ದ್ದಾನೆ ಎಂದು ಅಧಿಕಾರಿಗಳು ತಿಳಿಸಿ ದ್ದಾರೆ. ಅರಣ್ಯ ಸಂಚಾರಿ ದಳದ ಡಿಸಿಎಫ್ ರಾಮ ಕೃಷ್ಣಪ್ಪ, ಎಸಿಎಫ್ ಮನೋಹರ್ ಸುವರ್ಣ ಮಾರ್ಗದರ್ಶನದಲ್ಲಿ ಆರ್‌ಎಫ್‌ಓ ವಿವೇಕ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆ ಯಲ್ಲಿ ಡಿಆರ್‌ಎಫ್‌ಓಗಳಾದ ಪ್ರಮೋದ್, ಡಿ.ಎಂ.ವಿನೋದ್‌ಕುಮಾರ್, ನಾಗ ರಾಜು, ಅನಿಲ್‌ಕುಮಾರ್, ಟಿ.ಸಿ. ಸ್ನೇಹಾ, ಕೆ.ಜೆ.ಮೇಘನ, ಅರಣ್ಯ ರಕ್ಷಕರಾದ ಮಹಾಂತೇಶ್, ಕೊಟ್ರೇಶ ಪೂಜಾರ್, ಚೆನ್ನಬಸವಯ್ಯ, ವಿರೂಪಾಕ್ಷ, ಉದಯ ಕುಮಾರ್, ಕುಮಾರ್, ಪ್ರಕಾಶ್, ದಿವಾ ಕರ್, ವಾಹನ ಚಾಲಕರಾದ ಮಧು ಮತ್ತು ಪುಟ್ಟಸ್ವಾಮಿ ಭಾಗವಹಿಸಿದ್ದರು.

Translate »