ಬಿಎಸ್‍ವೈ, ಅಮಿತ್ ಶಾಗೆ ಕೊರೊನಾ
ಮೈಸೂರು

ಬಿಎಸ್‍ವೈ, ಅಮಿತ್ ಶಾಗೆ ಕೊರೊನಾ

August 3, 2020

ನವದೆಹಲಿ/ಬೆಂಗಳೂರು, ಆ.2- ಇಡೀ ವಿಶ್ವವನ್ನು ಬೆಂಬಿಡದೆ ಕಾಡುತ್ತಿರುವ ಕೊರೊನಾ ವೈರಸ್ ಭಾರತ ದಲ್ಲಿಯೂ ಆರ್ಭಟ ಮುಂದುವರೆಸಿದೆ.

ಉತ್ತರ ಪ್ರದೇಶದ ಪ್ರಭಾವಿ ಸಚಿವೆ ಕಮಲರಾಣಿ ವರುಣ್ ಭಾನು ವಾರ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಇದೇ ವೇಳೆ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ತಮಿಳು ನಾಡು ರಾಜ್ಯಪಾಲ ಭನ್ವಾರಿಲಾಲ್ ಪುರೋಹಿತ್ ಅವರಿಗೂ ಕೊರೊನಾ ಸೋಂಕು ದೃಢಪಟ್ಟಿದ್ದು, ಇಬ್ಬರೂ ಆಸ್ಪತ್ರೆಗೆ ದಾಖಲಾಗಿದ್ದಾರೆ.

ತಮಗೆ ಸೋಂಕು ತಗುಲಿರುವುದನ್ನು ಸಾಮಾಜಿಕ ಜಾಲತಾಣದ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ ಖಚಿತಪಡಿಸಿದ್ದಾರೆ. `ನನ್ನ ಕೊರೊನಾ ಪರೀಕ್ಷಾ ವರದಿ ಯಲ್ಲಿ ಪಾಸಿಟಿವ್ ಎಂದು ಬಂದಿದ್ದು, ರೋಗಲಕ್ಷಣಗಳು ಇಲ್ಲದಿದ್ದರೂ ಮುನ್ನಚ್ಚರಿಕೆ ದೃಷ್ಟಿಯಿಂದ ವೈದ್ಯರ ಸಲಹೆ ಯಂತೆ ಆಸ್ಪತ್ರೆಗೆ ದಾಖಲಾಗುತ್ತಿದ್ದೇನೆ. ಕಳೆದ ಕೆಲವು ದಿನಗಳಲ್ಲಿ ನನ್ನ ಸಂಪರ್ಕಕ್ಕೆ ಬಂದಿರುವವರು ಕ್ವಾರಂ ಟೈನ್‍ನಲ್ಲಿದ್ದು, ಮುಂಜಾಗ್ರತೆ ವಹಿಸಿ ಎಂದು ಕೋರು ತ್ತೇನೆ’ ಎಂದು ಸಿಎಂ ಯಡಿಯೂರಪ್ಪ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಲಖನೌ ವರದಿ: ಉತ್ತರ ಪ್ರದೇಶದ ತಾಂತ್ರಿಕ ಶಿಕ್ಷಣ ಸಚಿವೆ ಕಮಲ ರಾಣಿ ವರುಣ್(62) ಕೊರೊನಾಗೆ ಭಾನುವಾರ ಬೆಳಗ್ಗೆ 9.30ಕ್ಕೆ ಲಖನೌನ ಸಂಜಯ್ ಗಾಂಧಿ ವೈದ್ಯ ಕೀಯ ಕಾಲೇಜಿನಲ್ಲಿ ಸೋಂಕಿನಿಂದ ಕೊನೆಯುಸಿರೆಳೆ ದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮ ನಾಥ್ ಕೋವಿಂದ್, ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಸಂತಾಪ ಸೂಚಿಸಿದ್ದಾರೆ. ಎರಡು ವಾರಗಳ ಹಿಂದೆ ಸಚಿವೆಗೆ ಕೊರೊನಾ ಸೋಂಕು ತಗುಲಿತ್ತು. ಜು.18ರಿಂದ ಕಮಲಾ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು,
ವೆಂಟಿಲೇಟರ್‍ನಲ್ಲಿ ಚಿಕಿತ್ಸೆ ಮುಂದುವರೆದಿತ್ತು. ವಯೋಸಹಜ ಕಾಯಿಲೆಗಳಿಂದ ಅವರು ಬಳಲು ತ್ತಿದ್ದರು. ಸೋಂಕು ತಗುಲಿದ ನಂತರ ಹೈಪರ್‍ಟೆನ್ಷನ್ ಹಾಗೂ ಬಹು ಅಂಗಾಂಗ ವೈಫಲ್ಯಕ್ಕೆ ಒಳಗಾಗಿದ್ದರಿಂದ ಭಾನುವಾರ ಸಾವನ್ನಪ್ಪಿದರು.

ನವದೆಹಲಿ ವರದಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೂ ಕೊರೊನಾ ಸೋಂಕು ತಗುಲಿರುವುದು ಭಾನುವಾರ ದೃಢಪಟ್ಟಿದೆ. ಈ ವಿಷಯವನ್ನು ಅಮಿತ್ ಶಾ ಅವರೇ ಟ್ವೀಟ್ ಮೂಲಕ ಖಚಿತಪಡಿಸಿದ್ದಾರೆ. ಕೊರೊನಾ ವೈರಸ್‍ನ ಆರಂಭಿಕ ರೋಗ ಲಕ್ಷಣಗಳು ಕಂಡುಬಂದ ನಂತರ, ಟೆಸ್ಟ್ ಮಾಡಿಸಿದೆ. ಕೊರೊನಾ ವರದಿ ಪಾಸಿಟಿವ್ ಬಂದಿದೆ. ಆದರೆ, ಆರೋಗ್ಯ ಸ್ಥಿರವಾಗಿದೆ. ವೈದ್ಯರ ಸಲಹೆ ಮೇರೆಗೆ ಆಸ್ಪತ್ರೆಯಲ್ಲಿ ದಾಖಲಾಗಿದ್ದೇನೆ. ಕಳೆದ ಕೆಲವು ದಿನಗಳಲ್ಲಿ ನನ್ನ ಸಂಪರ್ಕಕ್ಕೆ ಬಂದಿದ್ದವರು ತಪಾಸಣೆ ಮಾಡಿಸಿಕೊಳ್ಳಿ ಹಾಗೂ ಕ್ವಾರಂಟೈನ್‍ನಲ್ಲಿರಿ ಎಂದು ಅಮಿತ್ ಶಾ ಟ್ವೀಟ್ ಮಾಡಿದ್ದಾರೆ. ಶಾ ಅವರಿಗೆ ಕೊರೊನಾ ಸೋಂಕು ದೃಢಪಟ್ಟ ನಂತರ, ಬಿಜೆಪಿಯ ಅನೇಕ ನಾಯಕರು ಹಾಗೂ ಕಾರ್ಯಕರ್ತರು ಅವರ ಆರೋಗ್ಯ ಚೇತರಿಕೆಗಾಗಿ ಪ್ರಾರ್ಥಿಸಿದ್ದಾರೆ.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಟ್ವೀಟ್ ಮೂಲಕ ಅಮಿತ್ ಶಾ ಬೇಗ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.

ಚೆನ್ನೈ ವರದಿ: ಇತ್ತೀಚೆಗೆ ಹೋಮ್‍ಕ್ವಾರಂಟೈನ್‍ನಲ್ಲಿದ್ದ ತಮಿಳುನಾಡು ರಾಜ್ಯಪಾಲ ಭನ್ವರಿಲಾಲ್ ಪುರೋಹಿತ್ ಅವರಿಗೆ ಕರೊನಾ ಸೋಂಕು ದೃಢಪಟ್ಟಿದೆ. ಅವರನ್ನು ಚೆನ್ನೈ ಆಸ್ಪತ್ರೆಗೆ ಭಾನುವಾರ ದಾಖಲಿಸಲಾಗಿದೆ. ಕಳೆದ ವಾರ ರಾಜಭವನದ 84 ಸಿಬ್ಬಂದಿ ಸೋಂಕಿಗೆ ಒಳಗಾಗಿದ್ದರು. ಈ ಹಿನ್ನೆಲೆಯಲ್ಲಿ ಜು.29ರಿಂದ ರಾಜ್ಯಪಾಲರು ರಾಜಭವನ ದಲ್ಲೇ ಹೋಮ್‍ಕ್ವಾರಂಟೈನ್ ಆಗಿದ್ದರು. ಇಂದು ಆರೋಗ್ಯದಲ್ಲಿ ದಿಢೀರ್ ಏರುಪೇರಾಗಿ ದ್ದರಿಂದ ಆಸ್ಪತ್ರೆಗೆ ದಾಖಲಾದರು. 81 ವರ್ಷಗಳ ಭನ್ವರಿಲಾಲ್ ಅವರು ಹಲವು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಸದ್ಯ ಅವರು ಆರೋಗ್ಯದಿಂದ ಇದ್ದಾರೆ. ಹೋಮ್ ಐಸೋಲೇಷನ್‍ಗೆ ತಿಳಿಸಲಾಗಿದೆ. ವೈದ್ಯರ ತಂಡವೊಂದು ಇವರ ಆರೋಗ್ಯವನ್ನು ನಿರಂತರ ತಪಾಸಣೆ ಮಾಡಲಿದೆ ಎಂದು ವೈದ್ಯರು ಹೇಳಿದ್ದಾರೆ.

Translate »