ಬಿಎಸ್‍ವೈ, ಅಮಿತ್ ಶಾ ಶೀಘ್ರ ಗುಣಮುಖರಾಗಲೆಂದು ವಿಶೇಷ ಪೂಜೆ
ಮೈಸೂರು

ಬಿಎಸ್‍ವೈ, ಅಮಿತ್ ಶಾ ಶೀಘ್ರ ಗುಣಮುಖರಾಗಲೆಂದು ವಿಶೇಷ ಪೂಜೆ

August 4, 2020

ಮೈಸೂರು, ಆ. 3- ಮೈಸೂರಿನ ಅಗ್ರ ಹಾರದಲ್ಲಿರುವ ನೂರೊಂದು ಗಣಪತಿ ದೇವಸ್ಥಾನದಲ್ಲಿ ಬಿ.ಎಸ್.ಯಡಿಯೂರಪ್ಪ ಅಭಿಮಾನಿ ಬಳಗದ ವತಿಯಿಂದ ಮುಖ್ಯ ಮಂತ್ರಿ ಯಡಿಯೂರಪ್ಪ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ರಾಜ್ಯದಲ್ಲಿರುವ ಕೊರೊನಾ ಸೋಂಕಿತರು ಗುಣಮುಖರಾಗಲೆಂದು ವಿಘ್ನ ನಿವಾರಕ ವಿಘ್ನೇಶ್ವರನಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಲಾಯಿತು.

ಇದೇ ವೇಳೆ ಮೈಸೂರು ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹೆಚ್.ಜಿ ಗಿರಿಧರ್ ಮಾತನಾಡಿ, ಜನಸೇವೆಯೇ ಜನಾರ್ಧನ ಸೇವೆ ಎಂದು ಸೇವೆ ಮಾಡುತ್ತಿರುವ ಮುಖ್ಯ ಮಂತ್ರಿ ಯಡಿಯೂರಪ್ಪ, ರಾಷ್ಟ್ರದ ರಕ್ಷಣೆ ಮತ್ತು ದೇಶದ ಭವಿಷ್ಯದ ಹಿತದೃಷ್ಟಿಯಿಂದ ಕಾರ್ಯ ನಿರ್ವಹಿಸುತ್ತಿರುವ ಅಮಿತ್ ಶಾ ಅಂತವರಿಗೆ ಕೊರೊನಾ ಬಂದಿದೆ. ಮಾನ ಸಿಕ ಸ್ಥೈರ್ಯ ಹಾಗೂ ಆರೋಗ್ಯ ಕಾಳಜಿ ನಮ್ಮಲ್ಲಿದ್ದರೆ ಯಾವ ರೋಗರುಜಿನ ಬಂದರೂ ವಾಸಿಯಾಗುತ್ತದೆ. ಹಾಗಾಗಿ ರಾಜ್ಯದಲ್ಲೂ ಸಹ ಸೋಂಕಿತರ ಸಂಖ್ಯೆ ಹೆಚ್ಚಾಗ ದಂತೆ ಸಾಮಾಜಿಕ ಅಂತರ, ಸ್ಯಾನಿಟೈಸರ್, ಮಾಸ್ಕ್ ಬಳಕೆ, ಬಿಸಿನೀರು ಕುಡಿಯುವುದು, ರೋಗನಿರೋಧಕ ಹೆಚ್ಚಿ ಸುವ ವಿಟಮಿನ್ ಸಿ ಪೌಷ್ಟಿಕಾಂಶ ಆಹಾರ ಪದಾರ್ಥ ಸೇವಿಸಬೇಕು ಎಂದು ಹೇಳಿದರು.

ಬಿ.ಎಸ್.ಯಡಿಯೂರಪ್ಪ ಅಭಿಮಾನಿ ಬಳಗದ ಸದಸ್ಯರು, ಮಹಿಳಾ ಮುಖಂಡರಾದ ಲಕ್ಷ್ಮಿದೇವಿ, ಯುವ ಮುಖಂಡ ಗೋಕುಲ್ ಗೋವರ್ಧನ್, ಕೇಬಲ್ ಮಹೇಶ್, ವಿಕ್ರಮ್ ಅಯ್ಯಂಗಾರ್, ಬಿಜೆಪಿ ನರಸಿಂಹರಾಜ ಯುವ ಮೋರ್ಚಾ ಅಧ್ಯಕ್ಷ ಲೋಹಿತ್, ಮಧು ಎನ್.ಪೂಜಾರ್, ಚಕ್ರ ಪಾಣಿ, ಶಂಭು ಪಟೇಲ್ ಇನ್ನಿತರರಿದ್ದರು.

Translate »