ಬಿಎಸ್‍ವೈ ಹುಟ್ಟುಹಬ್ಬ: ರೋಗಿಗಳಿಗೆ ಹಣ್ಣು-ಹಂಪಲು ವಿತರಣೆ
ಮೈಸೂರು ಗ್ರಾಮಾಂತರ

ಬಿಎಸ್‍ವೈ ಹುಟ್ಟುಹಬ್ಬ: ರೋಗಿಗಳಿಗೆ ಹಣ್ಣು-ಹಂಪಲು ವಿತರಣೆ

February 28, 2020

ತಿ.ನರಸೀಪುರ, ಫೆ.27(ಎಸ್.ಕೆ)- ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ 78ನೇ ಹುಟ್ಟುಹಬ್ಬದ ಅಂಗವಾಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಗುರುವಾರ ತಿ.ನರಸೀಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿದರು.

ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಕರೋಹಟ್ಟಿ ಮಹದೇವಯ್ಯ ಮಾತನಾಡಿ, ರೈತ ಹಾಗೂ ಜನಪರ ಹೋರಾಟದ ಮೂಲಕವೇ ರಾಜಕಾರಣ ಆರಂಭಿಸಿದ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯ ಕಂಡಂತಹ ಧೀಮಂತ ರಾಜಕಾರಣಿಯಾಗಿದ್ದಾರೆ. ಶಾಸಕರಾಗಿ, ವಿಪಕ್ಷ ನಾಯಕರಾಗಿ ರಾಜ್ಯದಲ್ಲಿ ಪ್ರಥಮ ಬಾರಿಗೆ ಬಿಜೆಪಿ ಅಧಿಕಾರಕ್ಕೆ ತಂದಂತಹ ಯಡಿಯೂರಪ್ಪ ಅವರು ಮುಂದಿನ ಮೂರು ವರ್ಷಗಳ ಕಾಲ ಉತ್ತಮ ಆಡಳಿತವನ್ನು ನೀಡಲಿ. ಜನಪರ ಬಜೆಟ್ ಮಂಡಿಸಲಿ ಎಂದು ಶುಭ ಹಾರೈಸಿದರು.

ಬಿಜೆಪಿ ಕ್ಷೇತ್ರಾಧ್ಯಕ್ಷ ಕೆ.ಸಿ.ಲೋಕೇಶ್, ಮಾಜಿ ಕ್ಷೇತ್ರ ಅಧ್ಯಕ್ಷ ಹೆಚ್.ಎಂ.ಪರಶಿವಮೂರ್ತಿ, ಜಿಲ್ಲಾ ಯುವ ಮೋರ್ಚಾದ ಮಾಜಿ ಕಾರ್ಯದರ್ಶಿ ಎಂ.ಮಿಥುನ್, ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ನಾಗೇಶ್‍ರಾವ್, ಮುಖಂಡರಾದ ಕುರುಬೂರು ಮಂಜುನಾಥ್, ಬಿ.ಪಿ.ಪರಶಿವಮೂರ್ತಿ, ಮರಡೀಪುರ ನಾಗರಾಜು, ಹೊಸಹಳ್ಳಿ ಚಿನ್ನಸ್ವಾಮಿ, ಮಹದೇವಯ್ಯ, ಕೊತ್ತೆಗಾಲ ಕಿಟ್ಟಿ, ಆರ್.ರಾಮಸ್ವಾಮಿ, ಎಸ್.ಲೋಕೇಶ್, ವಾಟಾಳು ಗುರುಪಾದ, ಬೆನಕನಹಳ್ಳಿ ಆನಂದ, ನಾಗಲಗೆರೆ ಶಿವಕುಮಾರ್, ಸೋಮಶೇಖರಪ್ಪ, ಅನಿಲ್, ಬಸವಲಿಂಗಸ್ವಾಮಿ, ಕಾರಾಪುರ ಪ್ರಭುಸ್ವಾಮಿ, ಚಂದು, ಗೂಳಿ ಮಹೇಶ್, ನಾಗರಾಜು, ತಿರುಮಕೂಡಲು ವಾಸು, ಕೂಡ್ಲೂರು ಮಲ್ಲಿಕಾರ್ಜುನ ಹಾಗೂ ಇನ್ನಿತರರು ಹಾಜರಿದ್ದರು.

ದೇವಾಲಯದಲ್ಲಿ ವಿಶೇಷ ಪೂಜೆ: ಪಟ್ಟಣದ ಪುರಾತನ ಪ್ರಸಿದ್ಧ ಶ್ರೀ ಗುಂಜಾ ನರಸಿಂಹಸ್ವಾಮಿ ದೇವಾಲಯದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ 78ನೇ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ವರುಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡರು ಬಿಎಸ್‍ವೈ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಮಾಜಿ ಅಧ್ಯಕ್ಷ ಎಂ.ವೆಂಕಟರಮಣ ಶೆಟ್ಟಿ, ಎಸ್‍ಟಿ ಮೋರ್ಚಾದ ಮಾಜಿ ಜಿಲ್ಲಾಧ್ಯಕ್ಷ ರಂಗುನಾಯಕ, ಮುಖಂಡರಾದ ಎಂ.ಮಿಥುನ್, ಅನಿಲ್ ಇನ್ನಿತರರು ಹಾಜರಿದ್ದರು.

Translate »