ಅಮಿತ್ ಶಾ, ಬಿಎಸ್‍ವೈ ಭೇಟಿ: ಆಪರೇಷನ್ ಕಮಲ ಸಾಧ್ಯತೆ
ಮೈಸೂರು

ಅಮಿತ್ ಶಾ, ಬಿಎಸ್‍ವೈ ಭೇಟಿ: ಆಪರೇಷನ್ ಕಮಲ ಸಾಧ್ಯತೆ

June 26, 2018

ಬೆಂಗಳೂರು: ಮೈತ್ರಿ ಸರ್ಕಾರದ ಬಜೆಟ್ ಮಂಡನೆ ಹಾಗೂ ರೈತರ ಸಾಲ ಮನ್ನಾಕ್ಕೆ ಸಂಬಂಧಿ ಸಿದಂತೆ ಮುಖ್ಯ ಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದ ರಾಮಯ್ಯ ನಡುವೆ ಜಟಾಪಟಿ ನಡೆ ಯುತ್ತಿರುವುದರ ನಡುವೆಯೇ ಬಿಜೆಪಿ ಪರಿಸ್ಥಿತಿಯ ಲಾಭ ಪಡೆಯಲು ಮುಂದಾಗಿದೆ.

ಇಂದು ಗುಜರಾತ್‍ನ ಅಹಮದ ಬಾದ್‍ನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಪಕ್ಷದ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ರಾಜ್ಯದ ಮೈತ್ರಿ ಸರ್ಕಾರ ಕಚ್ಚಾಟದಿಂದ ಕುಸಿದು ಬಿದ್ದರೆ ಪರ್ಯಾಯ ಸರ್ಕಾರ ರಚನೆ ಸಂಬಂಧ ಚರ್ಚೆ ನಡೆಸಿದ್ದಾರೆಂದು ಬಲ ಮೂಲಗಳು ತಿಳಿಸಿವೆ. ಇದಕ್ಕಾಗಿ ಮುಂಬರುವ ದಿನಗಳಲ್ಲಿ ಆಪರೇಷನ್ ಕಮಲ ಆರಂಭಿಸುವ ಸಂಬಂಧವು ಚರ್ಚೆಗಳು ನಡೆದಿವೆ ಎಂದು ಹೇಳಲಾಗುತ್ತಿವೆ.

Translate »