ಕಾದು ನೋಡುತ್ತೇವೆ ಎಂದ ಬಿಎಸ್‍ವೈ
ಹಾಸನ

ಕಾದು ನೋಡುತ್ತೇವೆ ಎಂದ ಬಿಎಸ್‍ವೈ

July 8, 2019

ಹಾಸನ, ಜು.7- ಮೈತ್ರಿ ಸರ್ಕಾರಕ್ಕೆ ಸಂಕಷ್ಟ ತಂದೊಡ್ಡಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರ ರಾಜೀನಾಮೆ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿ ರುವ ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು, ಪಕ್ಷ ಸದ್ಯಕ್ಕೆ ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ. ಕಾದು ನೋಡುತ್ತೇನೆ. ಹೈಕಮಾಂಡ್ ಸೂಚನೆ ಯಂತೆ ನಡೆಯುತ್ತೇವೆ ಎಂದಿದ್ದಾರೆ.

ಚನ್ನರಾಯಪಟ್ಟಣ ತಾಲೂಕು ಬಾಗೂರಿನಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯದಲ್ಲಿ ವಿಧಾನಸಭೆಗೆ ಮಧ್ಯಂತರ ಚುನಾವಣೆ ಸಾಧ್ಯತೆ ಇಲ್ಲವೇ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದರು.

ಡಿಕೆಶಿ ಉಚ್ಚಾಟನೆ ಆಗ್ರಹ: ಸ್ಪೀಕರ್ ಕೊಠಡಿಯ ಲ್ಲಿಯೇ ಶಾಸಕರ ರಾಜೀನಾಮೆ ಪತ್ರದ ಸ್ವೀಕೃತಿ ಪತ್ರವನ್ನು ಹರಿದು ದುರ್ವರ್ತನೆ ತೋರಿದ ಸಚಿವ ಡಿ.ಕೆ.ಶಿವ ಕುಮಾರ್ ನಡೆ ಖಂಡನಾರ್ಹ. ಅವರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಛಾಟನೆ ಮಾಡಬೇಕು. ಗೂಂಡಾ ಪ್ರವೃತ್ತಿ ತೋರಿದ, ಸಂವಿಧಾನಕ್ಕೆ ವಿರೋಧವಾಗಿ ವರ್ತಿಸಿದ ಸಚಿವರ ವಿರುದ್ಧ ಪೆÇಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಬೇಕು ಎಂದು ಬಿಜೆಪಿ ಮುಖಂಡ ಎ.ಮಂಜು ಆಗ್ರಹಿಸಿದರು.

ಚನ್ನರಾಯಪಟ್ಟಣದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯದ ಮೈತ್ರಿ ಸರಕಾರ ವನ್ನು ಬಿಜೆಪಿ ಅಸ್ಥಿರಗೊಳಿಸುತ್ತಿಲ್ಲ. ಮೈತ್ರಿಯಲ್ಲಿನ ಒಡಕೇ ಈಗಿನ ಸ್ಥಿತಿಗೆ ಕಾರಣ ಎಂದರು.

Translate »