ಹಾಸ£: ಯಾರು ಪುಸ್ತಕ ವನ್ನು ಓದುವುದಿಲ್ಲ ಅವರು ಸಮಾಜಕ್ಕೆ ಹೊರೆ ಆಗಿರುತ್ತಾರೆ. ಹಾಗಾಗಿ, ಎಲ್ಲರೂ ಪುಸ್ತಕ ಓದುವ ಅಭ್ಯಾಸ ರೂಢಿಸಿ ಕೊಳ್ಳುವ ಜೊತೆಗೆ ಮನೆಯಲೊಂದು ನಿಮ್ಮದೆಯಾದ ಚಿಕ್ಕ ಗ್ರಂಥಾಲಯ ನಿರ್ಮಿಸಿ ಎಂದು ಉಪವಿಭಾಗಾಧಿಕಾರಿ ಹೆಚ್. ಎಲ್.ನಾಗರಾಜು ಸಲಹೆ ನೀಡಿದರು.
ನಗರದ ಶಂಕರಮಠ ರಸ್ತೆಯಲ್ಲಿರುವ ಅಕ್ಷರ ಬುಕ್ ಹೌಸ್ ವತಿಯಿಂದ ಎಸ್‍ಎಸ್ ಎಲ್‍ಸಿ ಪರೀಕ್ಷೆಯಲ್ಲಿ ಶೇ. 90ಕ್ಕಿಂತ ಹೆಚ್ಚು ಅಂಕ ಪಡೆದವರಿಗೆ ಹಮ್ಮಿಕೊಳ್ಳಲಾಗಿದ್ದ ಅಕ್ಷರ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜಕ್ಕೆ ಪೂರಕವಾಗಿರುವ ಪುಸ್ತಕ ವನ್ನು ಹೆಚ್ಚು ಓದಬೇಕು. ಯಾರು ಹೆಚ್ಚಿನ ಪುಸ್ತಕ ಓದುತ್ತಾರೆ ಅವರಿಗೆ ಒಳ್ಳೆಯ ಸ್ನೇಹಿ ತರು ಸಿಗುತ್ತಾರೆ ಎಂದು ತಿಳಿಸಿದರು.
ಮಕ್ಕಳನ್ನು ಪೋಷಕರು ತಮ್ಮ ಕಣ್ಣು ಗಳಂತೆ ರಕ್ಷಣೆ ಮಾಡಿಕೊಂಡು ಶಿಕ್ಷಣ ನೀಡುತ್ತಾರೆ. ಮಕ್ಕಳು ದೊಡ್ಡವರಾದ ಮೇಲೆ ಪೋಷಕರನ್ನು ದೇವರಂತೆ ಕಾಣಬೇಕು. ಮಕ್ಕಳು ದೇಶದ ಇತಿಹಾಸದ ಬಗ್ಗೆ ಓದಬೇಕು. ಓದುವುದರಿಂದ ನಿಮ್ಮ ಸಾಮಥ್ರ್ಯ ಹೆಚ್ಚಾಗು ತ್ತದೆ ಎಂದು ಕಿವಿಮಾತು ಹೇಳಿದರು.
ಹಾಸನ ಜಿಲ್ಲೆಯು ಅಭಿವೃದ್ಧಿ ಹೊಂದು ತ್ತಿದ್ದು, ಮುಂದಿನ ದಿನಗಳಲ್ಲಿ 2ನೇ ಬೆಂಗ ಳೂರು ಆಗಲಿದೆ. ಇಡೀ ಸಮಾಜದ ಎಲ್ಲಾ ವಿಷಯ ತಿಳಿಯಲು ದಿನದÀ ಒಂದು ಗಂಟೆ ಪುಸ್ತಕ ಓದಲು ಮೀಸಲಿಡಬೇಕು. ಇಂದಿನ ಮಕ್ಕಳಿಗೆ ಸಾಮಾನ್ಯ ಜ್ಞಾನ ಇಲ್ಲ. ವ್ಯಾಪಾಕ ಜ್ಞಾನ ಬರಲು ಪುಸ್ತಕದ ಕಡೆ ಗಮನ ನೀಡಬೇಕು. ಮೌಲ್ಯಯುತವಾದ ವಾತಾವರಣವನ್ನು ಅಕ್ಷರ ಬುಕ್ ಹೌಸ್ ನಿರ್ಮಿಸುತ್ತಿದೆ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ ಮಾತ ನಾಡಿ, ಕನ್ನಡ ಸಾಹಿತ್ಯ ಪರಿಷತ್‍ನಲ್ಲಿ ಪ್ರತಿವರ್ಷ ಇಂತಹ ಪ್ರತಿಭಾನ್ವಿತ ವಿದ್ಯಾರ್ಥಿ ಗಳನ್ನು ಸನ್ಮಾನಿಸಿ ಗೌರವಿಸಲಾಗುತ್ತಿದೆ. ಅದರಂತೆ ಮುಂದಿನ ತಿಂಗಳು ಹೆಚ್ಚು ಅಂಕ ಪಡೆದವರನ್ನು ಗೌರವಿಸುವ ಕಾರ್ಯಕ್ರಮ ಆಯೋಜಿಸಲಾಗುವುದು. ಸುಧಾ ನಾರಾಯಣಮೂರ್ತಿ ಮತ್ತು ಭಾರತ ರತ್ನ ಪಡೆದ ಸಿ.ಎನ್.ರಾವ್ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸ ಲಾಗುವುದು ಎಂದರು.
ಸಾಹಿತಿ ಗಿರಿಮನೆ ಶ್ಯಾಮರಾವ್ ಮಾತ ನಾಡಿ, ಎಸ್‍ಎಸ್‍ಎಲ್‍ಸಿ ನಂತರ ಮುಂದಿನ ಶಿಕ್ಷಣದ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಆಸಕ್ತಿಯನ್ನು ಗುರುತಿಸುವುದು ತುಂಬ ಕಷ್ಟ. ಮಕ್ಕಳ ಪ್ರತಿಭೆಯನ್ನು ಏನೆಂಬುದನ್ನು ತಿಳಿಯಬೇಕು. ಓದುವಿನ ಜೊತೆಗೆ ಪುಸ್ತಕದ ಜ್ಞಾನ ಇರಬೇಕು. ತಮ್ಮ ಮಕ್ಕಳಿಗೆ ಮತ್ತೊ ಬ್ಬರು ಬಂದ ರ್ಯಾಂಕ್ ಬಗ್ಗೆ ಹೇಳಿ ಒತ್ತಡ ತರಬಾರದು. ಮೊಬೈಲ್ ಬಳಕೆ ಎಂಬುದು ಹೆಚ್ಚು ಇರಬಾರದು ಎಂದು ಎಚ್ಚರಿಸಿದರು.
ಅಕ್ಷರ ಬುಕ್ ಹೌಸ್‍ನ ಗಂಗಾಧರ್ ಮಾತನಾಡಿ, ಇಡೀ ಹಾಸನದಲ್ಲಿ ಇರುವ ಕೆರೆ ಪುನಶ್ಚೇತನಕ್ಕೆ ಉಪವಿಭಾಗಾಧಿಕಾರಿ ನಾಗರಾಜು ಅವÀರು ನಿಂತಿದ್ದಾರೆ. ಎಲ್ಲರೂ ಗಿಡಗಳನ್ನು ನೆಡಬೇಕು ಎಂದ ಅವರು, ಶಿಕ್ಷಣ ಎಂಬುದು ಹೆಚ್ಚು ಅಂಕಪಡೆಯು ವುದಕ್ಕಾಗಿ ಸಿಮೀತವಾಗಬಾರದು. ದೇಶದ ಬಗ್ಗೆ ಮಕ್ಕಳು ಕನಸು ಕಾಣಬೇಕು ಎಂದರು.
ನೀಟ್ ಪರೀಕ್ಷೆಯಲ್ಲಿ ಟಾಪ್ 10ರ ಸ್ಥಾನ ರಾಜ್ಯಕ್ಕೆ ಇಲ್ಲ ಎಂದು ಬೇಸರ ವ್ಯಕ್ತಪಡಿ ಸಿದ ಅವರು, ಶಿಕ್ಷಣವನ್ನು ಕೆಲಸಕ್ಕೆ ಸೇರು ತ್ತೀವಿ ಎಂದುಕೊಳ್ಳದೇ ಮತ್ತೊಬ್ಬರಿಗೆ ಕೆಲಸ ಕೊಡುತ್ತೀವಿ ಎನ್ನುವ ಛಲವನ್ನು ಬೆಳೆಸಿಕೊಂಡು ಕಲಿಯಬೇಕು. ಪ್ರತಿ ಮನೆಯಲ್ಲೂ ಒಂದು ಚಿಕ್ಕದಾದ ಗ್ರಂಥಾ ಲಯ ಸ್ಥಾಪಿಸುವುದರ ಮೂಲಕ ಜ್ಞಾನ ಪಡೆಯುವುದರ ಜೊತೆಗೆ ಮತ್ತೊಬ್ಬರ ಜ್ಞಾನ ವೃದ್ಧಿಗೆ ಸಹಕಾರಿಯಾಗಿ ಎಂದು ಕರೆ ನೀಡಿದರು.
ಅಕ್ಷರ ಬುಕ್ ಹೌಸ್ ಮತ್ತು ಟೈಮ್ಸ್ ಗ್ರೂಪ್‍ನ ಸಂಸ್ಥಾಪಕರಾದ ಸುರೇಂದ್ರ ಮಾತನಾಡಿದರು. ಎಸ್‍ಎಸ್‍ಎಲ್‍ಸಿ ಪರೀಕ್ಷೆ ಯಲ್ಲಿ ಶೇ. 90ಕ್ಕಿಂತ ಹೆಚ್ಚು ಅಂಕ ಪಡೆದ ವರಿಗೆ ಇದೆ ವೇಳೆ ಸರ್ಟಿಫಿಕೆಟ್, ಶಾಲು ಹೊದಿಸಿ ಹಾಗೂ ಪುಸ್ತಕಗಳ ರೂಪದಲ್ಲಿ ಬಹುಮಾನ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಸಾಪ ಗೌರವಾಧ್ಯಕ್ಷ ರವಿನಾಕಲಗೂಡು, ಕಾಮತ್, ಅಕ್ಷರ ಬುಕ್ ಹೌಸ್ ಮ್ಯಾನೇಜರ್ ಮಂಜು ನಾಥ್, ಶ್ರೀನಾಥ್, ಕಾಲೇಜೀನ ಉಪನ್ಯಾಸ ಕರು ಮತ್ತು ಸಿಬ್ಬಂದಿ ವರ್ಗ ಇತರರು ಉಪ ಸ್ಥಿತರಿದ್ದರು. ಜಾವಗಲ್ ಪ್ರಸನ್ನ ನಿರೂಪಿಸಿದರು.