ಬುಲೆಟ್ ಪ್ರಕಾಶ್… ನನಸಾಗದ ಕನಸು
ಸಿನಿಮಾ

ಬುಲೆಟ್ ಪ್ರಕಾಶ್… ನನಸಾಗದ ಕನಸು

April 11, 2020

ಆತನದು ದಢೂತಿ ದೇಹ, ಆದರೂ ವಯಸ್ಸು ಕೇವಲ 44 ವರ್ಷ. ನೂರಾರು ಆಸೆಗಳನ್ನು ಹೊತ್ತಿದ್ದ ಆ ಜೀವ ತನ್ನಾಸೆಗಳನ್ನು ಈಡೇರಿಸಿಕೊಳ್ಳುವ ಮೊದಲೇ ಇಹಲೋಕ ತ್ಯಜಿಸಿದೆ. ಚಿಕ್ಕ ವಯಸ್ಸಿನಲ್ಲೇ ಕನ್ನಡದ ಖ್ಯಾತ ಹಾಸ್ಯನಟ ಬುಲೆಟ್ ಪ್ರಕಾಶ್ ಸಾವನ್ನಪ್ಪಿz್ದÁರೆ. ಕಿಡ್ನಿ ಮತ್ತು ಲಿವರ್ ವೈಫಲ್ಯದಿಂದಾಗಿ ಅವರ ಪ್ರಾಣ ಪಕ್ಷಿ ಹಾರಿ ಹೋಗಿದೆ. ಈ ಮೂಲಕ ಕನ್ನಡ ಚಿತ್ರರಂಗ ಮತ್ತೊಬ್ಬ ಪ್ರತಿಭಾವಂತ ಹಾಸ್ಯ ಕಲಾವಿದನನ್ನು ಕಳೆದುಕೊಂಡಿದೆ. ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಸಹ ಅನಾಥರನ್ನಾಗಿಸಿ ಬುಲೆಟ್ ತನ್ನ ಸೌಂಡ್ ನಿಲ್ಲಿಸಿದ್ದಾರೆ. ಸುಮಾರು 325ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದ ಬುಲೆಟ್ ಪ್ರಕಾಶ್ ಅವರು ಐತಲಕಡಿ ಎಂಬ ಚಿತ್ರವನ್ನು ನಿರ್ಮಿಸಿ ತುಂಬಾ ಲಾಸ್ ಮಾಡಿಕೊಂಡಿದ್ದರು. ನಟ ದರ್ಶನ್, ದುನಿಯಾ ವಿಜಯ್, ನೆನಪಿರಲಿ ಪ್ರೇಮ್, ಮಂಡ್ಯ ರಮೇಶ್ ಸೇರಿದಂತೆ ಕನ್ನಡದ ಸಾಕಷ್ಟು ಕಲಾವಿದರ ಜೊತೆ ತೀರ ಆತ್ಮೀಯತೆಯನ್ನು ಹೊಂದಿದ್ದ ಬುಲೆಟ್ ಇತ್ತೀಚೆಗೆ ದರ್ಶನ್‍ರಿಂದ ದೂರಾಗಿದ್ದರು, ಆದರೆ ನಾನು ಒಮ್ಮೆ ದರ್ಶನ್ ಅವರ ಚಿತ್ರವನ್ನು ಡೈರೆಕ್ಟ್ ಮಾಡಿಯೇ ತೀರುತ್ತೇನೆ ಎಂದು ಸ್ನೇಹಿತರ ಬಳಿ ಹಲವಾರು ಸಲ ಹೇಳಿಕೊಂಡಿದ್ದರು.

ಕನ್ನಡ ಬೆಳ್ಳಿತೆರೆಯ ಮೇಲೆ ತನ್ನ ವಿಭಿನ್ನ ಹಾವ-ಭಾವಗಳಿಂದಲೇ ಪ್ರೇP್ಷÀಕರನ್ನು ನಕ್ಕು-ನಗಿಸುತ್ತಿದ್ದ ಬುಲೆಟ್ ಪ್ರಕಾಶ್, ನಿಜ ಜೀವನದಲ್ಲಿ ಬಹಳ ಸೀರಿಯಸ್ ಮನುಷ್ಯ. ಹೌದು, ಬುಲೆಟ್ ಪ್ರಕಾಶ್ ಸದಾ ಯೋಚನೆ ಮಾಡುವಂಥ, ಭವಿಷ್ಯದ ಬಗ್ಗೆ ನೂರಾರು ಕನಸುಗಳನ್ನು ಕಟ್ಟಿಕೊಂಡಿದ್ದ ವ್ಯಕ್ತಿಯಾಗಿದ್ದರು. ಬುಲೆಟ್ ಪ್ರಕಾಶ್ ಅವರನ್ನು ಹತ್ತಿರದಿಂದ ನೋಡಿದಂಥ ಅವರ ಗೆಳೆಯರು ಸಹ ಇದನ್ನೇ ಹೇಳುತ್ತಾರೆ. ಆದರೆ ಬುಲೆಟ್ ಪ್ರಕಾಶ್ ಅವರಿಗೆ ತಾನು ಒಮ್ಮೆ ಯಾದರೂ ಜನರಿಂದ ಆಯ್ಕೆಯಾಗಿ ಶಾಸಕನಾಗಿ ಸೇವೆ ಸಲ್ಲಿಸಬೇಕು ಎಂಬ ಒಂದು ಮಹತ್ತರವಾದ ಕನಸಿತ್ತು, ಆದರೆ ಅದನ್ನು ಈಡೇರಿಸಿಕೊಳ್ಳದೇ ಇಹಲೋಕ ತ್ಯಜಿಸಿz್ದÁರೆ. ಸದ್ಯ ಬಿಜೆಪಿ ಕಾರ್ಯಕರ್ತನಾಗಿದ್ದ ಅವರು ಕಳೆದ ಚುನಾವಣೆಯಲ್ಲಿ ಪ್ರಚಾರವನ್ನೂ ಸಹ ಮಾಡಿದ್ದರು. ಬುಲೆಟ್ ಅವರ ತಾಯಿ ಗೌರಮ್ಮ 1989ರಲ್ಲಿ ಕಾಪೆರ್Çರೇಟರ್ ಆಗಿದ್ದರು. ಹಾಗೂ ಬಿಜೆಪಿಯ ಹಿರಿಯ ಸದಸ್ಯರೂ ಆಗಿದ್ದರು.

ಒಂದು ಕಾಲದಲ್ಲಿ ನಟ ದರ್ಶನ್ ಅಭಿನಯಿಸುವ ಪ್ರತಿಯೊಂದು ಸಿನಿಮಾದಲ್ಲಿಯೂ ಬುಲೆಟ್ ಪ್ರಕಾಶ್ ಅವರಿಗೆ ಒಂದು ಪಾತ್ರ ಮೀಸಲಾಗಿರುತ್ತಿತ್ತು. ಆದರೆ ಇತ್ತೀಚೆಗೆ ಇಬ್ಬರೂ ದೂರಾಗಿದ್ದರು. ಐರಾವತ ಅವರಿಬ್ಬರೂ ಜೊತೆಯಾಗಿ ಕಾಣಿಸಿಕೊಂಡ ಕೊನೇಚಿತ್ರ. ತಾನು ದರ್ಶನ್ ಅವರನ್ನು ಹಾಕಿಕೊಂಡು ಸಿನಿಮಾ ನಿರ್ದೇಶಿಸಬೇಕು ಎಂಬ ಆಸೆ ಬುಲೆಟ್ ಪ್ರಕಾಶ್ ಅವರಿಗೆ ಮೊದಲಿಂದಲೂ ಇತ್ತು, ತಾನು ದರ್ಶನ್ ಅವರ ಕಾಲ್‍ಶೀಟ್ ಪಡೆದಿರುವುದಾಗಿಯೂ ಎಲ್ಲರ ಬಳಿ ಹೇಳಿಕೊಂಡಿದ್ದರು. ಇದು ದರ್ಶನ್ ಸಹೋದರ ದಿನಕರ್ ಮತ್ತು ಬುಲೆಟ್ ನಡುವೆ ದೊಡ್ಡ ಜಗಳ ಹುಟ್ಟಲು ಕಾರಣವಾಯಿತು. ದಿನಕರ್ ತಮ್ಮನ್ನು ಹೊಡೆದಿz್ದÁಗಿಯೂ ಬುಲೆಟ್ ಹೇಳಿಕೆ ನೀಡಿದರು. ಈ ಘಟನೆಯ ನಂತರ ದರ್ಶನ್ ಹಾಗೂ ಬುಲೆಟ್ ದೂರಾಗಿದ್ದರು. ಕಳೆದಸಲ ಬುಲೆಟ್ ಪ್ರಕಾಶ್ ಆಸ್ಪತ್ರೆ ಸೇರಿದಾಗ ದರ್ಶನ್ ಅವರನ್ನು ಭೇಟಿಮಾಡಿ ಆರೋಗ್ಯ ವಿಚಾರಿಸಿ, ಧೈರ್ಯ ತುಂಬಿದ್ದರು. ಆದರೆ ದರ್ಶನ್ ಸಿನಿಮಾ ನಿರ್ದೇಶಿಸಬೇಕು ಎಂಬ ಅವರ ಮತ್ತೊಂದು ಆಸೆ ಈಡೇರಲೇ ಇಲ್ಲ. ಆದರೆ ದರ್ಶನ್ ಹಿಂದಿನದ್ಯಾವುದನ್ನೂ ಮನಸ್ಸಿನಲ್ಲಿಟ್ಟುಕೊಳ್ಳದೆ, ಈಗ ಬುಲೆಟ್ ಪ್ರಕಾಶ್ ಕುಟುಂಬಕ್ಕೆ ಆಸರೆಯಾಗಿ ನಿಂತಿz್ದÁರೆ. ಬುಲೆಟ್ ಪ್ರಕಾಶ್ ಅವರ ಮಗಳ ಮದುವೆ ಯನ್ನು ಮಾಡಿಕೊಡುವ ದೊಡ್ಡ ಜವಾಬ್ದಾರಿಯನ್ನು ತನ್ನ ಹೆಗಲಿಗೆ ಹಾಕಿಕೊಂಡಿz್ದÁರೆ.

ಗೆಳೆಯರ ಕಂಬನಿ : ಬುಲೆಟ್ ಪ್ರಕಾಶ್ ಅವರ ಅಗಲಿಕೆಗೆ ಹಲವಾರು ಕಲಾವಿದರು ಕಂಬನಿ ಮಿಡಿದಿದ್ದಾರೆ. ಕಿಚ್ಚ ಸುದೀಪ್ ಟ್ವೀಟ್ ಮಾಡಿ, ಬುಲೆಟ್ ಪ್ರಕಾಶ್ ಇನ್ನಿಲ್ಲ ಎನ್ನುವ ಸುದ್ದಿ ಕೇಳಿ ತುಂಬ ದುಃಖವಾಗುತ್ತಿದೆ. ಚಿತ್ರರಂಗದವರು ಕೊನೆಯ ಬಾರಿಗೆ ನೋಡಲು ಅವರ ಮನೆಗೆ ಹೋಗಲು ಸಾಧ್ಯವಿಲ್ಲ ಎನ್ನುವ ದುಃಖ ಇನ್ನೂ ಹೆಚ್ಚಾಗಿದೆ. ತುಂಬ ಫನ್ ಮತ್ತು ಅಧ್ಬುತ ನಟ. ನಿಮ್ಮ ಜಾಗ ತುಂಬಲು ಯಾರಿಂದನೂ ಸಾಧ್ಯವಿಲ್ಲ. ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ ಗೆಳೆಯ. ಆತ್ಮಕ್ಕೆ ಶಾಂತಿ ಸಿಗಲಿ. ಯಾವಾಗಲೂ ನಿಮ್ಮನ್ನು ಪ್ರೀತಿಸುತ್ತೇನೆ ಎಂದು ಹೇಳಿz್ದÁರೆ. ನಟ ದರ್ಶನ್ ಕೂಡ ಹಾಸ್ಯ ಕಲಾವಿದರಾದ ಬುಲೆಟ್ ಪ್ರಕಾಶ್ ಇಂದು ನಮ್ಮಿಂದ ದೈಹಿಕವಾಗಿ ದೂರವಾಗಿz್ದÁರೆ. ಈ ನಷ್ಟವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ದೇವರು ಅವರ ಕುಟುಂಬಕ್ಕೆ ನೀಡಲಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ಟ್ವೀಟ್ ಮಾಡಿದ್ದಾರೆ. ಸದಾ ಜೊತೆಯಾಗಿದ್ದ ಆತ್ಮೀಯ, ಒಮ್ಮೆಲ್ಲೇ ಬಾರದ ಲೋಕಕ್ಕೆ ಪಯಣ ಬೆಳೆಸಿz್ದÁನೆ.

ನನಗೆ ಬುಲೆಟ್ ಪ್ರಕಾಶ್ ಇನ್ನಿಲ್ಲ ಎಂಬುವ ನೋವನ್ನು ಪದಗಳಲ್ಲಿ ಬರೆಯಲು ಸಾಧ್ಯವಿಲ್ಲ. ಬುಲೆಟ್ ಕುಟುಂಬಕ್ಕೆ ಆ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಭಗವಂತ ನೀಡಲಿ. ಮತ್ತೆ ಹುಟ್ಟಿ ಬಾ ಗೆಳೆಯ” ಎಂದು ಆತ್ಮೀಯ ಗಳೆಯ ನಟ ದುನಿಯ ವಿಜಯ್ ಅವರು ಟ್ವೀಟ್ ಮಾಡಿz್ದÁರೆ.

Translate »