ಹರಿಪ್ರಿಯಾ ಮನೇಲಿ ನಡೆದ ಕೊಡೋ ತಗೊಳ್ಳೋ
ಸಿನಿಮಾ

ಹರಿಪ್ರಿಯಾ ಮನೇಲಿ ನಡೆದ ಕೊಡೋ ತಗೊಳ್ಳೋ

April 11, 2020

ನಮ್ಮನೇಲಿ ಇಂದು ನಡೀತು, ಕೊಡೋ ತಗೊಳೋ ಮಾತುಕತೆ. ನಿಮ್ಮೆಲ್ಲರ ಆಶೀರ್ವಾದ ಇರಲಿ. ಹೀಗಂತ ಮೊನ್ನೆ ಸ್ಯಾಂಡಲïವುಡ್‍ನ ಬ್ಯೂಟಿಕ್ವೀನ್ ಅಂತಲೇ ಹೆಸರಾದ ಹರಿಪ್ರಿಯಾ ಅವರು ಟ್ವೀಟ್ ಮಾಡಿದ್ದರು. ಅವರ ಈ ಟ್ವೀಟ್ ನೋಡಿದ ಹರಿಪ್ರಿಯಾ ಅಭಿಮಾನಿಗಳ ಹಾರ್ಟ್ ಬ್ರೇಕ್ ಆಗಿದ್ದಂತೂ ನಿಜ, ಸದ್ಯ ಯಶಸ್ಸಿನ ಉತ್ತುಂಗದಲ್ಲಿರುವ ಈ ನಟಿಗೆ ಮದುವೆ ಫಿಕ್ಸ್ ಆಯ್ತೇನೋ ಎಂದೇ ಎಲ್ಲರೂ ತಿಳಿದುಕೊಂಡಿದ್ದರು. ಆದರೆ ವಿಷಯ ಬೇರೇನೇ ಇತ್ತು, ಅದೇನೆಂದು ಹೇಳುತ್ತೇವೆ ಮುಂದೆ ನೋಡಿ, ಹರಿಪ್ರಿಯಾ ಅವರು ಮಾಡಿದ ಈ ಟ್ವೀಟ್ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಪ್ರಮಾಣದಲ್ಲಿ ಚರ್ಚೆ ನಡೆದಿತ್ತು. ಆದರೆ ಅದರೊಂದಿಗೆ ಹರಿಪ್ರಿಯಾ ಅವರು ಒಂದು ಸಮಜಾಯಿಷಿ ಯನ್ನು ನೀಡಿz್ದÁರೆ. ಅದನ್ನು ಓದಿದಾಗಲೇ ಈ ಕೊಡೋ ತಗೊಳ್ಳೋ ವಿಷಯದ ಹಿಂದಿರುವ ಮರ್ಮ ಏನೆಂಬುದು ಅರ್ಥವಾಗುತ್ತದೆ.

ಈಗ ಎಲ್ಲಿ ನೋಡಿದ್ರೂ ಬರೀ ಕೊಡೋ ತಗೋಳೋ ಬಗ್ಗೆಯೇ ಮಾತುಕತೆÀ ನಡೀತಿದೆ. ಇಡೀ ದೇಶಾನೇ ಲಾಕ್‍ಡೌನ್ ಆಗಿದೆ, ಫಿಕ್ಸ್ ಆಗಿರೋ ಮದ್ವೆಗಳೇ ಮುಂದಕ್ಕೆ ಹೋಗಿವೆ, ಈಗ ಅದ್ಯಾರಪ್ಪಾ ಕೊಡೋ ತಗೊಳೋ ವಿಷಯ ಮಾತಾಡ್ತಾರೆ ಅಂದ್ಕೋಬೇಡಿ. ಪರಿಸ್ಥಿತಿ ಹೇಗೇ ಇದ್ರೂ ಆ ಒಂದು ಮಾತುಕತೆ ನಡೀತಿರೋದಂತೂ ಪಕ್ಕಾ. ನಮ್ಮನೇಲೇ ಅಂಥ ಮಾತುಕತೆ ಖಂಡಿತ ನಡೆದಿದೆ. ಹಹಹ, ಮದ್ವೆ ವಿಷಯ ಅಂದ್ಕೊಂಡ್ರಾ ? ಅಲ್ವೇ ಅಲ್ಲ. ಅದ್ಕೆ ಕಾರಣ, ಅದೇ ಕೊರೊನಾ !!

ನೀವು ಲವ್ ಇನ್ ದ ಟೈಮ್ ಆಫ್ ಕಾಲರಾ ಅನ್ನೋ ನಾವೆಲ್ ಬಗ್ಗೆ ಕೇಳಿದ್ದೀರಲ್ವ ? ಅದೇ ಥರ ಇದು ಎಕ್ಸ್‍ಚೇಂಜ್ ಇನ್ ದ ಟೈಮ್ ಆಫ್ ಕೊರೊನಾ ಅಂತ ಹೇಳ್ಬೋದು. ಯಾಕ್ ಗೊತ್ತಾ? ಈಗ ಎಲ್ಲ ಬಂದ್ ಆಗಿದೆ. ಎಷ್ಟೇ ದುಡ್ ಕೊಡ್ತೀವಿ ಅಂದ್ರೂ ಕೆಲ ವಸ್ತುವಂತೂ ಸಿಗ್ತಾನೇ ಇಲ್ಲ. ಕೆಲ ದಿನಸಿ ಅಂಗಡಿಗಳು ಓಪನ್ ಇದ್ರೂ ಸ್ಟಾಕ್ ಇರಲ್ಲ. ಹಿಂದಿನ ಕಾಲದಲ್ಲಿ ಬಾಟರರ್ ಸಿಸ್ಟಮ್ ಅಂತ ಇತ್ತಂತಲ್ವಾ, ಆ ಥರ ನಮ್ ಮನೇಲೂ ಕೊಡೋ ತಗೊಳೋ ಮಾತುಕತೆ ಈ ಕ್ವಾರಂಟೈನ್ ಟೈಮ್‍ನಲ್ಲಿ ನಡೆದಿತ್ತು. ನನ್ ಫ್ರೆಂಡ್ ಮನೆಯಲ್ಲಿ ನಾಯಿಗಳಿಗೆ ಡಾಗ್‍ಫುಡ್ ಇರ್ಲಿಲ್ಲ. ಅವರು ನಮ್‍ಮನೆ ಅಕ್ವೇರಿಯಮ್ಮನಲ್ಲಿರೋ ಮೀನುಗಳಿಗೆ ಫಿಷ್‍ಫುಡ್ ಕೊಟ್ಟು ಡಾಗ್‍ಫುಡ್ ತಗೊಂಡ್ ಹೋದ್ರು. ಹಾಗೇ ತುಂಬಾ ಕಡೆ ಈಗ ಹಲವಾರು ವಸ್ತುಗಳ ಎಕ್ಸ್‍ಚೇಂಜ್ ಮಾಡ್ಕೊಂಡಿದ್ ಕೇಳಿz್ದÉ.

ಇಷ್ಟೇ ಅಲ್ಲ.. ಇತ್ತೀಚೆಗೆ ನಮ್ಮ ಸಂಬಂಧಿಕರ ಮನೇಲಿ ತರಕಾರಿ ಖಾಲಿಯಾಗಿತ್ತು. ಅವರು ನಮ್ಮನೆಗೆ ಬಂದು ಹಣ್ಣು ತಂದುಕೊಟ್ಟು ತರಕಾರಿ ತಗೊಂಡು ಹೋದ್ರು. ಹೀಗೆ ನಿಮ್ಮಲ್ಲೂ ತುಂಬಾ ಜನರ ಮನೇಲಿ ಆಗಿದೆ ಅಲ್ವಾ? ಈ ಥರ ಎಕ್ಸ್‍ಚೇಂಜ್‍ಗೆ ಹಳ್ಳಿ ಕಡೆ ಸಾಟಿ ವಿನಿಮಯ ಅಂತಾರಂತೆ. ನೋಡಿ.. ನಮ್ಮ ಹಳೇ ಪದ್ಧತಿಗೆ ಸರಿಸಾಟಿ ಯಾವುದೂ ಇಲ್ಲ.

ಹಣ ಒಂದಿದ್ರೆ ಸಾಕು, ಏನು ಬೇಕಾದ್ರೂ ತಗೋಬಹುದು ಅನ್ನೋದು ಖಂಡಿತ ಸುಳ್ಳು. ಹಣಕ್ಕಿಂತ ಆ ದಿನದ ಅಗತ್ಯತೆ ಪೂರೈಸಿ ಕೊಳ್ಳೋದೇ ಮುಖ್ಯ ಅಂತ ಇದರಿಂದ ಎಲ್ಲರಿಗೂ ಗೊತ್ತಾಗ್ತಿದೆ ಅನ್ನೋದೇ ಸಮಾಧಾನದ ವಿಷಯ. ಹೀಗೆ ಲಾಕ್‍ಡೌನ್‍ನ ಮಧ್ಯೆಯೂ ನಡೆಯುತ್ತಿರುವ ಕೊಡೋ, ತಗೊಳ್ಳೋ ಮಾತುಕತೆಯ ಬಗ್ಗೆ ನಟಿ ಹರಿಪ್ರಿಯಾ ಅವರು ತಮ್ಮ ಬ್ಲಾಗ್‍ನಲ್ಲಿ ಅರ್ಥಗರ್ಭಿತವಾಗಿ ಬರೆದುಕೊಂಡಿ z್ದÁರೆ.

ಖ್ಯಾತ ಚಿತ್ರನಟ ಧನಂಜಯ್ ಅವರು ಬೆಂಗಳೂರಿನ ವಿವಿಧ ಬಡಾವಣೆಯಲ್ಲಿ ಬಡವರಿಗೆ ಆಹಾರ ಪದಾರ್ಥಗಳನ್ನು ವಿತರಿಸಿದರು. ಮತ್ತೊಂದು ಚಿತ್ರದಲ್ಲಿ ನಟ ಭಯಂಕರ ಚಿತ್ರತಂಡದ ವತಿಯಿಂದ ನಟ, ನಿರ್ದೇಶಕ ಪ್ರಥಮ್ ತುಮಕೂರು ಜಿಲ್ಲೆಯಲ್ಲಿ ಪೊಲೀಸ್, ವೈದ್ಯಕೀಯ ಸಿಬ್ಬಂದಿ, ಪೌರಕಾರ್ಮಿಕರು ಸೇರಿದಂತೆ ಹಲವರಿಗೆ ದಿನಸಿ ಹಾಗೂ ತರಕಾರಿಗಳನ್ನು ಅವರವರ ಮನೆ ಬಾಗಿಲಿಗೆ ತಲುಪಿಸಿದರು.

Translate »