ಕೊರೊನಾಗೆ ತಿಥಿ ಮಾಡಿ, ಅತಿಥಿಯಾಗಬೇಡಿ
ಸಿನಿಮಾ

ಕೊರೊನಾಗೆ ತಿಥಿ ಮಾಡಿ, ಅತಿಥಿಯಾಗಬೇಡಿ

April 11, 2020

ಕೊರೊನಾ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಅನೇಕ ಸೆಲಬ್ರಿಟಿಗಳು ಕರೆ ಕೊಟ್ಟಿದ್ದಾರೆ, ಅಂತೆಯೇ ನಟ ಕ್ರೇಜಿಸ್ಟಾರ್ ರವಿಚಂದ್ರನ್ ಕೂಡ ವೀಡಿಯೋದ ಮೂಲಕ ಒಂದಷ್ಟು ವಿಚಾರ ಹಂಚಿಕೊಂಡಿ ದ್ದಾರೆ. ಅವರು ಹೇಳಿದ್ದಿಷ್ಟು: ಕೊರೊನಾಗೆ ಬೆಂಕಿ ಹಚ್ಚಬೇಕು ಎಂದರೆ, ನಿಮ್ಮನೆ ದೀಪ ಆರಬಾರದು ಎಂದರೆ ನೀವಷ್ಟೂ ಜನ ಮನೆಯಲ್ಲಿರಬೇಕು. ದೇವಸ್ಥಾನಗಳೆಲ್ಲವೂ ಮುಚ್ಚಿದೆ ಅಂದರೆ ದೇವರು ಇಲ್ಲ ಅಂತಾನಾ ? ಡಾಕ್ಟರ್ ಗಳಲ್ಲಿ, ನರ್ಸ್‍ಗಳಲ್ಲಿ, ಪೆÇಲೀಸರಲ್ಲಿ ಹಾಗೂ ಸೇವೆ ಮಾಡು ತ್ತಿರುವ ಎಲ್ಲರಲ್ಲೂ ಆ ದೇವರು ಇz್ದÁನೆ. ಆತನ ಮೇಲೆ ನಿಮಗೆ ನಂಬಿಕೆ ಇದ್ದರೆ ನೀವು ಮಾಡಬೇಕಿರುವುದು ಇಷ್ಟೇ.

ಅಷ್ಟೂ ಜನಕ್ಕೆ ಒಂದು ಸಲ್ಯೂಟ್, ನಮಸ್ಕಾರ, ಒಂದು ಫ್ಲೈಯಿಂಗ್ ಕಿಸ್ ಕೊಡಿ. ಅವರ ಋಣವನ್ನು ನಾವು ಯಾವತ್ತೂ ತೀರಿಸಲು ಆಗೊಲ್ಲ. ಎಷ್ಟು ಜನ್ಮವೆತ್ತಿದರೂ ತೀರಿಸಲು ಆಗೊಲ್ಲ. ಅದನ್ನು ತೀರಿಸಬೇಕು ಅಂತ ನಿಮಗೆ ಇದ್ದರೆ ನೀವು ಮನೆಯಲ್ಲಿರಿ. ಅವರನ್ನು ಕೊರೊನಾ ಜೊತೆ ಹೋರಾಡಲು ಬಿಡಿ. ನಿಮ್ಮ ಜೊತೆ ಹೋರಾಡುವುದಲ್ಲ ಅವರ ಕೆಲಸ. ಕೊರೊನಾಗೆ ತಿಥಿ ಮಾಡಬೇಕು ಎಂದರೆ ನೀವು ಕೊರೊನಾಗೆ ಅತಿಥಿಯಾಗಬಾರದು. ಮನುಷ್ಯನಿಗೆ ಕಷ್ಟ ಬಂದಾಗಲೇ ಅದನ್ನು ಅವನು ಹೇಗೆ ನಿಭಾಯಿಸುತ್ತಾನೆ ಅನ್ನೋದರ ಮೇಲೆ ಅವರ ವ್ಯಕ್ತಿತ್ವ ಗೊತ್ತಾಗೋದು. ಅಂತಹ ಒಂದು ಪರೀಕ್ಷೆ ನಮ್ಮೆಲ್ಲರಿಗೂ ಬಂದಿದೆ. ಪರೀಕ್ಷೆಯನ್ನು ಪಾಸು ಮಾಡಬೇಕು ಎಂದರೆ ನೀವೆಲ್ಲರೂ ಮನೆಯಲ್ಲಿ ಇರಬೇಕು. ಸೋಷಿಯಲ್ ಡಿಸ್ಟೆನ್ಸ್ ಫಾಲೋ ಮಾಡಬೇಕು. ಫೇಲ್ ಆಗಬೇಕು ಎಂದರೆ ನಿಮ್ಮಿಷ್ಟ. ನೀವು ಮನೆಯಿಂದ ಹೊರಬನ್ನಿ. ನಿಮಗೆ ನಿಮ್ಮ ಹೆಸರು ಕೂಡ ನೆನಪಿರೊಲ್ಲ. ಏಕೆಂದರೆ ಅದೊಂದು ಪೇಷೆಂಟ್ ನಂಬರ್ ಆಗಿಬಿಡುತ್ತದೆ. ನೀವು ಪೇಷೆಂಟ್ ಆಗಲು ಬಯಸಿದ್ದೀರಾ ಅಥವಾ ಮನೆಯಲ್ಲಿ ಪೇಷೆನ್ಸಿನಿಂದ ಇರಲು ಬಯಸಿದ್ದೀರಾ?. ಮತ್ತೊಮ್ಮೆ ಸೇವೆ ಮಾಡುತ್ತಿರುವ ಪ್ರತಿಯೊಬ್ಬರಿಗೂ ನಮ್ಮ ಕಡೆಯಿಂದೊಂದು ಸಲ್ಯೂಟ್ ಎಂದು ರವಿಚಂದ್ರನ್ ಹೇಳಿz್ದÁರೆ. ಈ ವಿಡಿಯೋದಲ್ಲಿ ಅವರ ಮಕ್ಕಳಾದ ಮನುರಂಜನ್ ಮತ್ತು ವಿಕ್ರಂ ಕೂಡ ಕಾಣಿಸಿ ಕೊಂಡಿz್ದÁರೆ.

Translate »