ಕಣ್ಸನ್ನೆ ಬೆಡಗಿಯ ಕನ್ನಡ ಪ್ರೀತಿ !
ಸಿನಿಮಾ

ಕಣ್ಸನ್ನೆ ಬೆಡಗಿಯ ಕನ್ನಡ ಪ್ರೀತಿ !

April 11, 2020

ಮಲಯಾಳಂನ ಒರು ಆಡಾರ ಲವ್ ಎಂಬ ಚಿತ್ರದಲ್ಲಿ ತನ್ನ ಒಂದೇ ಒಂದು ಕಣ್ಸನ್ನೆಯ ಮೂಲಕ ಇಡೀ ಚಿತ್ರೋದ್ಯಮವನ್ನೇ ಬೆಚ್ಚಿ ಬೀಳಿಸಿದ ಚೆಲುವೆ ಪ್ರಿಯಾ ಪ್ರಕಾಶ್ ವಾರಿಯರ್. ಈ ಒಂದು ದೃಶ್ಯದ ಮೂಲಕ ರಾತ್ರೋ ರಾತ್ರಿ ಪ್ರಪಂಚದಾದ್ಯಂತ ಜನಪ್ರಿಯತೆ ಗಳಿಸಿದ ಈ ಚೆಲುವೆ ಈಗ ಕನ್ನಡ ಚಿತ್ರರಂಗಕ್ಕೂ ಲಗ್ಗೆಯಿಟ್ಟಿದ್ದಾಳೆ. ನಿರ್ಮಾಪಕ ಕೆ.ಮಂಜು ಅವರ ಪುತ್ರ ಶ್ರೇಯಸ್ ಮಂಜು ನಾಯಕರಾಗಿ ನಟಿಸುತ್ತಿರುವ ‘ವಿಷ್ಣು ಪ್ರಿಯ’ ಚಿತ್ರದ ಮೂಲಕ ಈಕೆ ಕನ್ನಡ ಚಿತ್ರರಂಗಕ್ಕೂ ಎಂಟ್ರಿ ಕೊಟ್ಟಿz್ದÁರೆ. ಈಗಾಗಲೇ ಮಲಯಾಳಂ ಹಾಗೂ ತಮಿಳಿನಲ್ಲಿ ಕೆಲ ಹಿಟ್ ಸಿನಿಮಾಗಳನ್ನು ನಿರ್ದೇಶಿಸಿ ಗುರ್ತಿಸಿಕೊಂಡಿರುವ ವಿ.ಕೆ.ಪ್ರಕಾಶ್ ಎಂಬುವರು ಈ ಚಿತ್ರವನ್ನು ನಿರ್ದೇಶಿ ಸುತ್ತಿz್ದÁರೆ. ‘ವಿಷ್ಣು ಪ್ರಿಯ’ ಚಿತ್ರದ ಮೊದಲ ಲುಕ್ ಮೊನ್ನೆ ಬಿಡುಗಡೆ ಯಾಗಿದೆ. ಈ ಸಂತಸವನ್ನು ನಾಯಕಿ ಪ್ರಿಯಾ ಪ್ರಕಾಶ ವಾರಿಯರ್ ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಕನ್ನಡದಲ್ಲೇ ಹಂಚಿಕೊಂಡಿರುವುದು ವಿಶೇಷ.

90ರ ದಶಕದಲ್ಲಿ ನಡೆದಂಥ ನೈಜ ಘಟನೆಯೊಂದನ್ನು ನಿರ್ದೇಶಕ ಪ್ರಕಾಶ್ ಅವರು ಈ ಚಿತ್ರದ ಮೂಲಕ ಹೇಳುತ್ತಿz್ದÁರೆ. ಈ ಕಥೆಯ ಎಳೆಯನ್ನು ನಿರ್ದೇಶಕರಿಗೆ ನಿರ್ಮಾಪಕ ಕೆ.ಮಂಜು ಅವರೇ ಹೇಳಿದ್ದರು. ಕ್ರೈಂ, ಥ್ರಿಲ್ಲಿಂಗ್ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಪ್ರಿಯಾ ಪ್ರಕಾಶ್ ವಾರಿಯರ್ ಶ್ರೇಯಸ್ ನಾಯಕಿ ಯಾಗಿ ಅಭಿನಯಿಸಿದ್ದಾರೆ. ‘ನನ್ನ ಎ¯್ಲÁ ಕನ್ನಡದ ಪ್ರೀತಿಯ ಅಭಿಮಾನಿಗಳಿಗೆ ನಿಮ್ಮ ಪ್ರಿಯಾ ಮಾಡುವ ನಮಸ್ಕಾರಗಳು. ನನ್ನ ಮೊದಲನೇ ಕನ್ನಡದ ಸಿನಿಮಾ ವಿಷ್ಣು ಪ್ರಿಯದ ಫಸ್ಟ್ ಲುಕ್ ಬಿಡುಗಡೆಯಾಗಲಿದೆ, ಎಲ್ಲರೂ ದಯವಿಟ್ಟು ಶೇರ್ ಮಾಡಿ ಹಾಗೂ ಸಪೆÇೀರ್ಟ್ ಮಾಡಿ….ನಿಮ್ಮೆಲ್ಲರ ಪ್ರೀತಿ ಹಾಗೂ ಆಶೀರ್ವಾದ ಸದಾ ನನ್ನ ಮೇಲೆ ಮತ್ತು ನಮ್ಮ ಸಿನಿಮಾ ತಂಡದ ಮೇಲೆ ಸದಾ ಇರಲಿ’ ಎಂದು ಪ್ರಿಯಾ ಪ್ರಕಾಶ್ ವಾರಿಯರ್ ಅವರು ಕನ್ನಡದಲ್ಲಿ ಪೆÇೀಸ್ಟ್ ಪ್ರಕಟಿಸಿ ಕನ್ನಡಿಗರ ಮನ ಗೆದ್ದಿz್ದÁರೆ.

ವಿಷ್ಣುಪ್ರಿಯ ಚಿತ್ರದಲ್ಲಿ ಪ್ರಿಯಾ ವಾರಿಯರ್ ಅವರು ತಮ್ಮದೇ ಹೆಸರಿನ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿz್ದÁರೆ. ಈ ಚಿತ್ರದ ಮುಹೂರ್ತದ ಸಂದರ್ಭದಲ್ಲಿ ಮಾತನಾಡಿದ್ದ ಅವರು, ಕನ್ನಡ ಸಿನಿಮಾಗಳ ಬಗ್ಗೆ ನನಗೆ ತಿಳಿದಿದೆ. ಇಲ್ಲಿ ವಿಭಿನ್ನ ಚಿತ್ರಗಳನ್ನು ಮಾಡುತ್ತಿz್ದÁರೆ. ಹಾಗಾಗಿ ಕನ್ನಡ ಚಿತ್ರರಂಗದಿಂದ ಆಫರ್ ಬಂದಾಗ ಹಿಂದೆ ಮುಂದೆ ಯೋಚಿಸದೆ ಒಪ್ಪಿಕೊಂಡೆ ಎಂದು ಹೇಳಿದ್ದರು. ಈ ಸಿನಿಮಾವನ್ನು ನಿರ್ಮಾಪಕ ಕೆ.ಮಂಜು ಅವರು ಮಲಯಾಳಂ, ತಮಿಳು ಹಾಗೂ ತೆಲುಗಿನಲ್ಲಿ ಕೂಡ ಬಿಡುಗಡೆ ಮಾಡಲು ಪ್ಲಾನ್ ಮಾಡಿಕೊಂಡಿz್ದÁರೆ.

Translate »