ಜಿಲ್ಲೆಯಲ್ಲಿ ಮನೆಗಳವು, ವರ್ತಕರ ಲೂಟಿ
ಹಾಸನ

ಜಿಲ್ಲೆಯಲ್ಲಿ ಮನೆಗಳವು, ವರ್ತಕರ ಲೂಟಿ

May 3, 2019

ಹಾಸನ: ರಾಜ್ಯದಲ್ಲಿ ಈಗ ಎಲ್ಲೆಲ್ಲೂ ಸರಗಳವು, ಮನೆಗಳವು ಸುದ್ದಿಗಳೇ ಕೇಳಿಬರುತ್ತಿವೆ. ಮೊನ್ನೆ ಗುರು ವಾರ ಮೈಸೂರಿನಲ್ಲಿ ಮುಂಜಾನೆ ಕೇವಲ ಒಂದೂವರೆ ಗಂಟೆ ಅವಧಿಯಲ್ಲೇ ಪಲ್ಸರ್ ಬೈಕ್‍ನಲ್ಲಿ ಬಂದ ಖದೀಮ ರಿಬ್ಬರು ನಗರದ 5 ಕಡೆ ಸರಗಳವು ನಡೆಸಿ ಪರಾರಿಯಾಗಿದ್ದಾರೆ.

ಹಾಸನ ಜಿಲ್ಲೆಯಲ್ಲಿಯೂ ಮನೆಗಳವು, ಸರಗಳವು ಪ್ರಕರಣಗಳು ನಿರಂತರ ನಡೆ ಯುತ್ತಲೇ ಇವೆ. ಅರಸೀಕೆರೆ, ಚನ್ನರಾಯ ಪಟ್ಟಣದಲ್ಲಿ ಈ ವಾರದಲ್ಲಿ 2 ಮನೆಗಳವು ನಡೆದಿದ್ದರೆ, ಮತ್ತೊಂದೆಡೆ ಹಗಲಲ್ಲೇ ಚಿನ್ನ ವರ್ತಕನಿಂದ ಕಳ್ಳರು 15 ಲಕ್ಷ ರೂ. ದೋಚಿದ್ದಾರೆ.

ಚ.ಪಟ್ಟಣ: 15 ಲಕ್ಷ ರೂ. ಚಿನ್ನಾಭರಣವಿದ್ದ ಕೈಚೀಲ ಎಗರಿಸಿದ ಬೈಕ್ ಸವಾರರು
ಚನ್ನರಾಯಪಟ್ಟಣ ವರದಿ: ಚನ್ನರಾಯ ಪಟ್ಟಣದಲ್ಲಿ ಚಿನ್ನಾಭರಣ ವರ್ತಕರೊಬ್ಬ ರನ್ನು ಹಿಂಬಾಲಿಸಿ ಬಂದು ಹೊಂಚು ಹಾಕಿದ್ದ ಖದೀಮರು, ಕೊನೆಗೂ ವರ್ತಕ ರ ಮನೆ ಬಳಿಯೇ 15 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತು ನಗದು ಇದ್ದ ಕೈಚೀಲ ವನ್ನು ವ್ಯಾಪಾರಿಯ ಕಣ್ಣೆದುರಿಗೇ ಅಪಹರಿಸಿಕೊಂಡು ಹೋಗಿದ್ದಾರೆ.ಚನ್ನರಾಯಪಟ್ಟಣದ ವಿವೇಕ ನಗರದ ಚಿನ್ನಾಭರಣ ವರ್ತಕ ಸಿ.ಬಿ.ರಾಜು ಅವರೇ ನಗ-ನಗದು ಕಳೆದುಕೊಂಡವರು.

ರಾಜು ತಮ್ಮ ಮನೆ ಮುಂದೆ ಮೋಟಾರ್ ಬೈಕ್ ನಿಲ್ಲಿಸಿ ಗೇಟ್ ತೆರೆಯು ತ್ತಿದ್ದಾಗ ಅವರನ್ನೇ ಹಿಂಬಾಲಿಸಿಕೊಂಡು ಬೈಕ್‍ನಲ್ಲಿ ಬಂದಿದ್ದ ಖದೀಮರು ನಗದು, ಚಿನ್ನಾಭರಣ ಗಳು ಇದ್ದ ಬ್ಯಾಗನ್ನು ಎಗರಿಸಿಕೊಂಡು ಹೋಗಿದ್ದಾರೆ. ರಾಜು ಅವರು ಚನ್ನರಾಯ ಪಟ್ಟಣದ ಬಾಗೂರು ವೃತ್ತದಲ್ಲಿ ಚಿನ್ನಾ ಭರಣ ಅಂಗಡಿ ಇಟ್ಟುಕೊಂಡಿದ್ದಾರೆ. ಬುಧವಾರ ಬೆಳಿಗ್ಗೆ 10ಕ್ಕೆ ಅಂಗಡಿ ವ್ಯಾಪಾರ ಮಗಿಸಿ 500 ಗ್ರಾಂ ಚಿನ್ನಾಭರಣ ಮತ್ತು 15 ಸಾವಿರ ನಗದನ್ನು ಬ್ಯಾಗ್‍ನಲ್ಲಿಟ್ಟುಕೊಂಡು ಮನೆಯ ಬಳಿ ಬೈಕ್ ನಿಲ್ಲಿಸಿ, ಮನೆಯ ಗೇಟ್ ತೆಗೆಯಲು ಹೋದರು. ಹಿಂದಿ ನಿಂದ ಪಲ್ಸರ್ ಬೈಕ್‍ನಲ್ಲಿ ಬಂದ ದುಷ್ಕರ್ಮಿ ಗಳು ರಾಜು ಅವರು ಬೈಕ್ ಹ್ಯಾಂಡಲ್ ನಲ್ಲಿ ತೂಗುಬಿಟ್ಟಿದ್ದ ನಗದು ಮತ್ತು ಚಿನ್ನಾ ಭರಣವಿದ್ದ ಬ್ಯಾಗನ್ನು ಎಗರಿಸಿ ಪರಾರಿ ಯಾಗಿದ್ದಾರೆ. ನಗರ ಪೆÇಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

ಚಲ್ಯದಲ್ಲಿ ಮನೆಗಳವು; 30 ಸಾವಿರ ರೂ. ಕಳ್ಳರ ಪಾಲು
ಚನ್ನರಾಯಪಟ್ಟಣ ತಾಲೂಕಿನ ಶ್ರವಣ ಬೆಳಗೊಳ ಹೋಬಳಿಯಲ್ಲಿರುವ ಚಲ್ಯ ಗ್ರಾಮದಲ್ಲಿ ಮನೆಗಳವು ನಡೆದಿದೆ.ಮನೆಯಲ್ಲಿ ಯಾರೂ ಇಲ್ಲ ಎಂಬು ದನ್ನು ಅರಿತ ಕಳ್ಳರು ಮನೆಯ ಬೀಗ ಮುರಿದು ಒಳನುಗ್ಗಿ ನಗದು ಮತ್ತು ಚಿನ್ನಾಭರಣ ಕಳವು ಮಾಡಿದ್ದಾರೆ.

ಗ್ರಾಮದ ಸಿ.ಎನ್.ಲೋಕೇಶ್ ಕುಟುಂಬ ಸಮೇತ ಮೈಸೂರಿನ ವಿಜಯನಗರದ 4ನೇ ಹಂತದಲ್ಲಿ ವಾಸವಾಗಿದ್ದಾರೆ. ಹಾಗಾಗಿ, ಚಲ್ಯದಲ್ಲಿನ ಮನೆಗೆ ವಾರಕ್ಕೊಮ್ಮೆ ಬಂದು ಹೋಗುತ್ತಾರೆ. ಇತ್ತೀಚೆಗೆ ಊರಿಗೆ ಬಂದಿದ್ದ ಸಮಯ ದಲ್ಲಿ ಕಳವು ಪ್ರಕರಣ ಬೆಳಕಿಗೆ ಬಂದಿದೆ. 5 ಸಾವಿರ ರೂ. ನಗದು, 24 ಸಾವಿರ ರೂ. ಬೆಲೆಯ ಚಿನ್ನಾಭರಣ ಕಳವಾಗಿದೆ.
ಶ್ರವಣಬೆಳಗೊಳ ಪೆÇಲೀಸ್ ಠಾಣೆ ಯಲ್ಲಿ ಮನೆಗಳವು ಪ್ರಕರಣ ದಾಖ ಲಾಗಿದ್ದು, ತನಿಖೆ ಮುಂದುವರಿದಿದೆ.

Translate »