ದಿ ಕಾಸ್ಮೊಪಾಲಿಟನ್ ಕ್ಲಬ್ ಅಧ್ಯಕ್ಷರಾಗಿ ಸಿ.ನಾರಾಯಣಗೌಡ ಸೇರಿ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರ ಪದಗ್ರಹಣ
ಮೈಸೂರು

ದಿ ಕಾಸ್ಮೊಪಾಲಿಟನ್ ಕ್ಲಬ್ ಅಧ್ಯಕ್ಷರಾಗಿ ಸಿ.ನಾರಾಯಣಗೌಡ ಸೇರಿ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರ ಪದಗ್ರಹಣ

April 28, 2021

ಮೈಸೂರು,ಏ.27(ಪಿಎಂ)-ಮೈಸೂರಿನ ದಿ ಕಾಸ್ಮೊಪಾಲಿಟನ್ ಕ್ಲಬ್ ಅಧ್ಯಕ್ಷರಾಗಿ ಸಿ.ನಾರಾಯಣಗೌಡ ಸೇರಿದಂತೆ ನೂತನ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಇತ್ತೀಚೆಗೆ ಅಧಿಕಾರ ಸ್ವೀಕರಿಸಿದರು.
ಏ.18ರಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಸಿ.ನಾರಾಯಣಗೌಡರು ಪುನರಾಯ್ಕೆಗೊಂಡರೆ, ಉಳಿದ ಪದಾಧಿ ಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿ ದ್ದರು. ಇತ್ತೀಚೆಗೆ ಕ್ಲಬ್‍ನ ಆವರಣದಲ್ಲಿ ನೂತನ ಪದಾಧಿಕಾರಿಗಳು ಮತ್ತು ಕಾರ್ಯ ಕಾರಿ ಸಮಿತಿ ಸದಸ್ಯರು ಅಧಿಕಾರ ಸ್ವೀಕರಿಸಿ ದರು. ಅಧ್ಯಕ್ಷ ಸಿ.ನಾರಾಯಣಗೌಡ, ಉಪಾ ಧ್ಯಕ್ಷ ಎಸ್.ದ್ವಾರಕಿ, ಕಾರ್ಯದರ್ಶಿ ಹೆಚ್. ಎನ್.ಜಯಪಾಲ್, ಖಜಾಂಚಿ ವೀರೇಶ್, ಕಾರ್ಯಕಾರಿ ಸಮಿತಿ ಸದಸ್ಯರಾದ ಜಿ. ಸಂಜಯ್, ಜಿ.ಮಧುಸೂದನ್, ಎಸ್. ಸಂದೀಪ್, ಎಂ.ಜೆ.ಚರಣ್, ಎಂ.ಎನ್. ನಂದೀಶ್, ಎಂ.ಎಸ್.ಜಯಪ್ರಕಾಶ್ ಹಾಗೂ ಕೆ.ಆರ್. ಶಾಂತಮೂರ್ತಿ ಅಧಿಕಾರ ಸ್ವೀಕರಿಸಿದರು.

Translate »