ಮೈಸೂರಲ್ಲಿ ಆರ್‍ಟಿ-ಪಿಸಿಆರ್ ಟೆಸ್ಟ್, ಕೊರೊನಾ ಲಸಿಕೆಗೂ ಭಾರೀ ಬೇಡಿಕೆ
ಮೈಸೂರು

ಮೈಸೂರಲ್ಲಿ ಆರ್‍ಟಿ-ಪಿಸಿಆರ್ ಟೆಸ್ಟ್, ಕೊರೊನಾ ಲಸಿಕೆಗೂ ಭಾರೀ ಬೇಡಿಕೆ

April 28, 2021

ಮೈಸೂರು,ಏ.27(ಆರ್‍ಕೆ)- ದಿನದಿಂದ ದಿನಕ್ಕೆ ಕೊರೊನಾ ಪಾಸಿಟಿವ್ ಪ್ರಕರಣ ಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗು ತ್ತಿರುವುದರಿಂದ ಆತಂಕಗೊಂಡಿರುವ ಜನ ಆರ್‍ಟಿ-ಪಿಸಿಆರ್ ಪರೀಕ್ಷೆ ಮತ್ತು ಕೊರೊನಾ ಲಸಿಕೆ ಪಡೆಯಲು ದಿನಗಳೆ ದಂತೆ ಮುಗಿಬೀಳುತ್ತಿದ್ದಾರೆ.
ಪ್ರತಿ ನಿತ್ಯ ಸಾವಿರಾರು ಪಾಸಿಟಿವ್ ಪ್ರಕ ರಣ ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಆತಂಕಗೊಂಡಿರುವ 45 ವರ್ಷ ಮೇಲ್ಪಟ್ಟ ನಾಗರಿಕರು ಇಂದು ತಮ್ಮ ಹತ್ತಿರದ ಆರೋಗ್ಯ ಕೇಂದ್ರಗಳಿಗೆ ತೆರಳಿ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಲು ಮುಂದಾಗಿದ್ದರು.

ಮೈಸೂರಿನ ಪುರಭವನ, ಚಿಕ್ಕಗಡಿ ಯಾರ, ಕೆ.ಆರ್. ಆಸ್ಪತ್ರೆ, ಜಿಲ್ಲಾ ಕೋವಿಡ್ ಆಸ್ಪತ್ರೆ ಸೇರಿದಂತೆ ವಿವಿಧ ಕೇಂದ್ರ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿನ ಪರೀಕ್ಷೆ ಮಾಡಿಸಿಕೊಳ್ಳುವವರ ಸಂಖ್ಯೆ ಇಂದಿನಿಂದ ದಿಢೀರ್ ಹೆಚ್ಚಾಗಿದೆ.

ಇದುವರೆಗೆ ಜನರೇ ಬಾರದೆ ನರ್ಸ್ ಗಳು, ಡೇಟಾ ಎಂಟ್ರಿ ಆಪರೇಟರ್‍ಗಳು ಹಾಗೂ ಗ್ರೂಪ್ ‘ಡಿ’ ನೌಕರರು ಕಾಯುತ್ತಿ ದ್ದರು. ಮೈಸೂರು ಮಹಾನಗರ ಪಾಲಿಕೆ, ಆರೋಗ್ಯ ಇಲಾಖೆ ಅಧಿಕಾರಿಗಳು ಆರ್‍ಟಿ -ಪಿಸಿಆರ್ ಟೆಸ್ಟ್ ಮಾಡಿಸಿಕೊಳ್ಳಿ ಎಂದು ಎಲ್ಲಾ ಬಡಾವಣೆಗಳಲ್ಲಿ ಜಾಗೃತಿ ಮೂಡಿಸುತ್ತಿದ್ದಾಗ್ಯೂ ಜನರಿಂದ ನಿರೀಕ್ಷಿತ ಪ್ರತಿಕ್ರಿಯೆ ಬರುತ್ತಿರಲಿಲ್ಲ.

ನಿನ್ನೆ (ಏ.26) ಅಧಿಕ ಸಂಖ್ಯೆಯಲ್ಲಿ ಪಾಸಿ ಟಿವ್ ಪ್ರಕರಣ ವರದಿಯಾಗಿದ್ದಲ್ಲದೇ ಕೊರೊನಾದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆಯೂ ಹೆಚ್ಚಾಗುತ್ತಿರುವುದು ಹಾಗೂ ಖ್ಯಾತ ಚಿತ್ರ ನಿರ್ಮಾಪಕ, ನಟಿ ಮಾಲಾಶ್ರೀ ಅವರ ಪತಿ ರಾಮು ಕೊರೊನಾಗೆ ಬಲಿ ಯಾದ ವಿಷಯ ತಿಳಿಯುತ್ತಿದ್ದಂತೆಯೇ ಭಯಭೀತರಾದ ಜನರು, ಆರ್‍ಟಿ-ಪಿಸಿಅರ್ ಟೆಸ್ಟ್ ಮತ್ತು ಕೊರೊನಾ ಲಸಿಕೆ ಪಡೆಯಲು ಸ್ವಯಂಪ್ರೇರಿತವಾಗಿ ಮುಗಿಬೀಳುತ್ತಿರು ವುದು ಮೈಸೂರಲ್ಲಿ ಕಂಡುಬಂದಿತು.

ಕೆಆರ್‍ಎಸ್ ರಸ್ತೆಯ ಜಿಲ್ಲಾ ಕೋವಿಡ್, ಬೃಂದಾವನದ ಸರ್ಕಾರಿ ಆಯುರ್ವೇದ ಪಂಚಕರ್ಮ ಹೈಟೆಕ್ ಆಸ್ಪತ್ರೆ, ಕೆ.ಆರ್. ಆಸ್ಪತ್ರೆ, ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ಹೋಬಳಿ ಮಟ್ಟದ, ತಾಲೂಕು ಸಾರ್ವಜನಿಕ ಆಸ್ಪತ್ರೆ ಗಳು ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಲಸಿಕೆ ಪಡೆಯಲು ಜನರು ಮುಂದಾಗಿದ್ದರಿಂದ ಇಂದು ಈ ಹಿಂದಿ ಗಿಂತ ಹೆಚ್ಚು ಮಂದಿಗೆ ಲಸಿಕೆ ನೀಡಿದಂತಾ ಗಿದೆ. ಮೈಸೂರು ಮಹಾನಗರ ಪಾಲಿಕೆ, ಆರೋಗ್ಯ ಇಲಾಖೆ, ಜಿಲ್ಲಾಡಳಿತವು ಬೇಡಿಕೆಗೆ ತಕ್ಕಂತೆ ಕೊರೊನಾ ಪರೀಕ್ಷೆ ಮತ್ತು ಲಸಿಕೆ ನೀಡಲು ತಯಾರಿ ನಡೆಸುತ್ತಿದ್ದು, ಮೇ 1ರಿಂದ 18ರಿಂದ 44 ವರ್ಷದವರಿಗೂ ಲಸಿಕೆ ನೀಡುತ್ತಿದ್ದು, ಅದಕ್ಕೆ ನೋಂದಣಿ ಹಾಗೂ ಲಸಿಕೆ ಹಾಕಲು ಸಿದ್ಧತೆ ನಡೆಲಾಗುತ್ತಿದೆ.

Translate »