ಕೋವಿಡ್ ಕಫ್ರ್ಯೂ ಕಟ್ಟುನಿಟ್ಟಿನ ಪಾಲನೆಗಾಗಿ ಮೈಸೂರು ನಗರ-ಜಿಲ್ಲೆಯಲ್ಲಿ ನಾಕಾಬಂದಿ
ಮೈಸೂರು

ಕೋವಿಡ್ ಕಫ್ರ್ಯೂ ಕಟ್ಟುನಿಟ್ಟಿನ ಪಾಲನೆಗಾಗಿ ಮೈಸೂರು ನಗರ-ಜಿಲ್ಲೆಯಲ್ಲಿ ನಾಕಾಬಂದಿ

April 28, 2021

ಮೈಸೂರು, ಏ.27(ಎಂಕೆ)- ಕೋವಿಡ್-19 ಎರಡನೇ ಅಲೆ ತಡೆಗಾಗಿ ರಾಜ್ಯ ಸರ್ಕಾರ 14 ದಿನಗಳ ಕಠಿಣ ಕೊರೊನಾ ಕಫ್ರ್ಯೂ ಜಾರಿಗೊಳಿಸಿದ ಹಿನ್ನೆಲೆ ಮೈಸೂರು ನಗರ ಮತ್ತು ಜಿಲ್ಲೆಯ ವಿವಿಧೆಡೆ ಪೊಲೀಸರು ಮಂಗಳವಾರ ರಾತ್ರಿಯಿಂದಲೇ ನಾಕಾಬಂದಿ ಬ್ಯಾರಿಕೇಡ್ ಅಳವಡಿಸಿ ಪ್ರತಿಯೊಂದು ವಾಹನವನ್ನೂ ತಡೆದು ತಪಾಸಣೆ ನಡೆಸಿದರು.

ರಾಜ್ಯದಲ್ಲಿ ಮಂಗಳವಾರ ರಾತ್ರಿ 9ರ ಬಳಿಕ ಜಾರಿಗೆ ಬಂದ `ಕೋವಿಡ್ ಕಫ್ರ್ಯೂ’ವನ್ನು ಕಟ್ಟುನಿಟ್ಟಾಗಿ ಜಿಲ್ಲೆಯಲ್ಲಿ ಜಾರಿಗೊಳಿಸಿದ ಪೊಲೀಸರು, ಈ ವೇಳೆ ಅನಗತ್ಯ ವಾಹನ ಸಂಚಾರಕ್ಕೆ ಕಡಿವಾಣ ಹಾಕಿದರು.

ನಗರದಲ್ಲಿ ಮಂಗಳವಾರ ರಾತ್ರಿ ಕಾರ್ಯಾಚರಣೆ ಗಿಳಿದ ಪೊಲೀಸರು, ಅಂಗಡಿ ಮುಂಗಟ್ಟುಗಳ ಬಾಗಿಲು ಮುಚ್ಚಿಸಿದರು. ನಗರದ ಕೆ.ಆರ್.ವೃತ್ತ, ಹಾರ್ಡಿಂಜ್ ವೃತ್ತ, ಮೇಟಗಳ್ಳಿ ಜಂಕ್ಷನ್, ರೈಲ್ವೆ ನಿಲ್ದಾಣ ಸೇರಿ ದಂತೆ ಪ್ರಮುಖ ವೃತ್ತಗಳು ಹಾಗೂ ಜಂಕ್ಷನ್‍ಗಳಲ್ಲಿ ಬ್ಯಾರಿಕೇಡ್‍ಗಳನ್ನು ಅಳವಡಿಸಿ ತಪಾಸಣೆ ನಡೆಸಿದರು. ಆಸ್ಪತ್ರೆ, ತುರ್ತು ಸೇವೆ ಹೊರತು ಉಳಿದೆಲ್ಲಾ ಚಟುವಟಿಕೆ ಗಳನ್ನು ಬಂದ್ ಮಾಡಿಸಿದರು.

ಸರ್ಕಾರದ ಮಾರ್ಗಸೂಚಿಯಂತೆ ಕೋವಿಡ್ ಕಫ್ರ್ಯೂ ಯಶಸ್ಸಿಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳ ಲಾಗಿದೆ. ಮೈಸೂರು ನಗರದಲ್ಲಿ 90 ಚೆಕ್ ಪಾಯಿಂಟ್ ಮಾಡಲಾಗಿದೆ. ಪ್ರತಿದಿನವೂ ಕಾರ್ಯಾಚರಣೆಯಲ್ಲಿ ಬದಲಾವಣೆ ಮಾಡಲಾಗುವುದು. ಅನಗತ್ಯವಾಗಿ ರಸ್ತೆಯಲ್ಲಿ ಅಡ್ಡಾಡುವವರ ವಿರುದ್ಧ ಪ್ರಕರಣ ದಾಖಲಿಸ ಲಾಗುವುದು. ಬೆಳಗ್ಗೆ 6ರಿಂದ 10ರವರೆಗಿನ ವ್ಯಾಪಾರ- ವಹಿವಾಟು ವೇಳೆ ಜನಸಂದಣಿ ಹೆಚ್ಚಿರುವ ಸ್ಥಳಗಳಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸಿ ದಟ್ಟಣೆ ನಿಯಂತ್ರಿಸ ಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಚಂದ್ರಗುಪ್ತ ‘ಮೈಸೂರು ಮಿತ್ರ’ನಿಗೆ ತಿಳಿಸಿದರು. ಇದೇ ರೀತಿ ಅಂತರಜಿಲ್ಲಾ ವಾಹನ ಸಂಚಾರಕ್ಕೂ ತಡೆ ಒಡ್ಡಿರು ವುದರಿಂದ ಜಿಲ್ಲಾದ್ಯಂತ ಪ್ರಮುಖ ಚೆಕ್‍ಪೋಸ್ಟ್‍ಗಳಲ್ಲಿ ಬ್ಯಾರಿಕೇಡ್ ಅಳವಡಿಸಿ, ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲು ಸಕಲ ತಯಾರಿ ಮಾಡಿಕೊಳ್ಳಲಾಗಿದೆ.

Translate »