ಎಲ್ಲರನ್ನೂ ಪ್ರೀತಿಸುವ ಹೃದಯ ವೈಶಾಲ್ಯತೆ  ಬೆಳೆಸಿಕೊಳ್ಳಬೇಕು: ಡಾ.ಈಶ್ವರ ಮಂಟೂರ
ಮೈಸೂರು

ಎಲ್ಲರನ್ನೂ ಪ್ರೀತಿಸುವ ಹೃದಯ ವೈಶಾಲ್ಯತೆ ಬೆಳೆಸಿಕೊಳ್ಳಬೇಕು: ಡಾ.ಈಶ್ವರ ಮಂಟೂರ

April 28, 2021

ಮೈಸೂರು,ಏ.27-ಎಲ್ಲರನ್ನೂ ಪ್ರೀತಿಸುವ ಹೃದಯ ವೈಶಾಲ್ಯತೆ ಬೆಳೆಸಿಕೊಳ್ಳಬೇಕು ಎಂದು ಖ್ಯಾತ ಪ್ರವಚನ ಕಾರರಾದ ಡಾ.ಈಶ್ವರ ಮಂಟೂರ ಹೇಳಿದರು.

ಮೈಸೂರು ಜೆಎಸ್‍ಎಸ್ ಮಹಾವಿದ್ಯಾಪೀಠದ ಶ್ರೀ ಶಿವ ರಾತ್ರೀಶ್ವರ ಧಾರ್ಮಿಕ ದತ್ತಿಯ ವತಿಯಿಂದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ದಿವ್ಯ ಸಾನ್ನಿಧ್ಯದಲ್ಲಿ ಏರ್ಪಡಿಸಿದ್ದ ‘ಜ್ಞಾನವಾರಿಧಿ-21’ ಡಿಜಿಟಲ್ ಸಾಪ್ತಾಹಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಮಾನವೀಯ ಮೌಲ್ಯಗಳು’ ವಿಷಯ ಕುರಿತು ಉಪನ್ಯಾಸ ನೀಡುತ್ತಾ ಇಂದಿನ ಸಮಾಜದಲ್ಲಿ ಮಾನವೀಯ ಮೌಲ್ಯಗಳು ಕಿಲುಬುಗಟ್ಟಿ ಹೋಗಿ ಎಲ್ಲೆಡೆ ಅಶಾಂತಿ ತುಂಬಿದೆ. ಅನುಕಂಪ ಕಡಿಮೆಯಾಗಿ ಅಮಾನ ವೀಯತೆ ಹೆಚ್ಚುತ್ತಿದೆ. ಪ್ರೀತಿ, ತ್ಯಾಗ, ಕರುಣೆ ಇಲ್ಲದಿದ್ದಾಗ ಅನೇಕ ಅನಾಹುತಗಳು ಸಂಭವಿಸುತ್ತವೆ. ತಲೆಯಲ್ಲಿ ಅಧ್ಯಾತ್ಮಿಕ ಜ್ಞಾನ, ಹೃದಯದಲ್ಲಿ ಪ್ರೇಮವನ್ನು ತುಂಬಿ ಕೊಂಡು ಸತ್ಯ-ಶುದ್ಧ ಕಾಯಕವನ್ನು ಮಾಡುವುದರಿಂದ ಅನಾಹುತಗಳು ಸಂಭವಿಸಲಾರವು.
12ನೇ ಶತಮಾನದಲ್ಲಿ ಮಹಾನ್ ಮಾನವತಾವಾದಿ ಬಸವಣ್ಣನವರ ನೇತೃತ್ವದಲ್ಲಿ ನಡೆದ ಹೋರಾಟ ಮಾನ ವೀಯ ಮೌಲ್ಯದ ಬೆಳಕಾಗಿತ್ತು. ಜಗತ್ತಿನಲ್ಲಿ ಅಧಿಕಾರ, ಅಂತಸ್ತು, ಆಯುಷ್ಯ ಯಾವುದೂ ಶಾಶ್ವತವಲ್ಲ. ಬೇಸಿಗೆ ಯಂತಹ ಸಂದರ್ಭದಲ್ಲಿ ಪ್ರಾಣಿ ಪಕ್ಷಿಗಳಿಗೆ ಆಹಾರ-ನೀರು ಇಡುವುದು. ದಿಕ್ಕಿಲ್ಲದವರಿಗೆ ದಿಕ್ಕು ತೋರುವುದು. ಗುರು-ಹಿರಿಯರಲ್ಲಿ ಭಕ್ತಿ-ಶ್ರದ್ಧೆ ಯಿಡುವುದು. ಮಾತೃಭಾಷೆ, ನೆಲ-ಜಲಗಳನ್ನು ಗೌರವಿಸುವುದು, ಇವೆಲ್ಲ ಮಾನವೀಯ ಮೌಲ್ಯಗಳ ಹಲ ವಾರು ಮುಖಗಳು. ಗಿಡವನ್ನು ನೆಡದಿ ದ್ದರೂ ಪರವಾಗಿಲ್ಲ ಆದರೆ ಇದ್ದ ಗಿಡವನ್ನು ಕೀಳದೆ ಅದಕ್ಕೆ ನೀರೆರೆಯಬೇಕು. ವಚನಗಳು ಮಾನವೀಯತೆಯನ್ನು ಹೇಳುವ ಸೂತ್ರಗಳು. ಶರಣರ ಅನುಭಾವದ ನುಡಿಗಳೇ ಕನ್ನಡಮ್ಮನ ಒಡವೆಗಳು ಎಂದು ಗೊರುಚರವರು ಹೇಳು ತ್ತಾರೆ. ರಾಜೇಂದ್ರ ಶ್ರೀಗಳು ಗ್ರಾಮೀಣ ಭಾಗದ ವಿದ್ಯಾರ್ಥಿ ಗಳು ಶಿಕ್ಷಣದಿಂದ ವಂಚಿತರಾಗಬಾರದೆಂದು ಶ್ರಮಪಟ್ಟು ವಿದ್ಯಾರ್ಥಿನಿಲಯ ಮತ್ತು ಶಾಲೆಗಳನ್ನು ತೆರೆದಿದ್ದು ಮಾನವೀ ಯತೆಯ ಮತ್ತೊಂದು ಮುಖ. ನೋಡಲು ಸುಂದರ ವಾಗಿದ್ದು ಪ್ರೀತಿ, ಔದಾರ್ಯದಂತಹ ಗುಣಗಳು ಇಲ್ಲದಿದ್ದ ಮೇಲೆ ಸೌಂದರ್ಯವಿದ್ದು ಏನು ಪ್ರಯೋಜನ. ಕೋವಿಡ್ ನಂತಹ ಸಂಕಷ್ಟದ ಸಂದರ್ಭದಲ್ಲಿ ತಮ್ಮ ಪ್ರಾಣದ ಹಂಗನ್ನು ತೊರೆದು ವಾರಿಯರ್ಸ್‍ಗಳು ಬೇರೆಯವರ ಜೀವ ಉಳಿಸಲು ಹೋರಾಡುತ್ತಿರುವ ಮಾನವೀಯ ಮೌಲ್ಯ ವನ್ನು ನಾವು ಸದಾ ಸ್ಮರಿಸಬೇಕು. ಮಾನವೀಯತೆಯ ಮೇಲೆ ಅನುಭವ ಮಂಟಪದ ಮಹಲನ್ನು ಕಟ್ಟಿದವರು ಬಸವಣ್ಣನವರು. ಕಾಯಕ ದಾಸೋಹದ ಮಹತ್ವ ತಿಳಿಸಿ ಕೊಟ್ಟ ಬಸವಾದಿ ಶರಣರು ಪ್ರಾತಃಸ್ಮರಣೀಯರು. ಅವರು ಬಿದ್ದವರನ್ನು ಎತ್ತಲಿಕ್ಕೆ ದುಡಿದವರು ಎಂದು ತಿಳಿಸಿದರು.

ಆನ್‍ಲೈನ್ ಮೂಲಕ ನಡೆದ ಕಾರ್ಯಕ್ರಮದಲ್ಲಿ ಆಧ್ಯಾ ತ್ಮಿಕ ಜಿಜ್ಞಾಸುಗಳು, ಸಾರ್ವಜನಿಕರು ಭಾಗವಹಿಸಿದ್ದರು. ಶ್ರೀಮತಿ ಸುಧಾ ಕೃಷ್ಣ ಪ್ರಾರ್ಥಿಸಿದರು. ಡಾ. ದೇವನೂರು ಮಹೇಂದ್ರಮೂರ್ತಿ ಕಾರ್ಯಕ್ರಮ ನಿರ್ವಹಿಸಿದರು.

ಈ ಉಪನ್ಯಾಸದಲ್ಲಿ ಕಲೆ, ಸಾಹಿತ್ಯ, ಸಂಸ್ಕøತಿ, ಶಿಕ್ಷಣ, ವಿಜ್ಞಾನ, ತಂತ್ರಜ್ಞಾನ, ಧರ್ಮ, ಅಧ್ಯಾತ್ಮ, ಯೋಗ, ಆರೋಗ್ಯ, ಜೀವನಶೈಲಿ ಮುಂತಾದ ವಿಷಯಗಳು ಮತ್ತು ಪ್ರಚಲಿತ ವಿದ್ಯಮಾನಗಳನ್ನು ಕುರಿತು ದೇಶ ಮತ್ತು ವಿದೇಶದ ವಿವಿಧ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸಗಳನ್ನು ಆಯೋ ಜಿಸಲಾಗಿದೆ. ಆನ್‍ಲೈನ್ ಮೂಲಕ ನಡೆಯುವ ಈ ಉಪ ನ್ಯಾಸ ಕಾರ್ಯಕ್ರಮವು ಸಾಕಷ್ಟು ಜನಪ್ರಿಯಗೊಂಡಿದೆ.

Translate »