ಮೈಸೂರು ಸಹವಾಸ ಸಾಕಪ್ಪಾ ಸಾಕು
ಮೈಸೂರು

ಮೈಸೂರು ಸಹವಾಸ ಸಾಕಪ್ಪಾ ಸಾಕು

April 28, 2021

ಮೈಸೂರು, ಏ.27(ವೈಡಿಎಸ್)- `ಹುಟ್ಟೂರಲ್ಲೇ ಕೂಲಿ ಕೆಲಸ ಮಾಡಿ ಯಾದರೂ ಜೀವನ ಸಾಗಿಸುತ್ತೇವೆ. ಮತ್ತೆ ಮೈಸೂರಿಗೆ ಬರುವುದಿಲ್ಲ’…
ಹೀಗೆ ಹತಾಶೆ, ಬೇಸರ, ನೋವಿನಿಂದ ಪ್ರತಿಕ್ರಿಯಿಸಿದವರು ತಮಿಳುನಾಡು ಮೂಲದ ಒಬ್ಬ ಕೂಲಿ ಕಾರ್ಮಿಕ.

`ಮೂರು ವರ್ಷಗಳ ಹಿಂದೆ ಕೆಲಸ ಹುಡುಕಿ ಕೊಂಡು ಕುಟುಂಬ ಸಮೇತ ಮೈಸೂರಿಗೆ ಬಂದೆವು. ಹೆಬ್ಬಾಳ್‍ನ ಬಾಡಿಗೆ ಮನೆ ಯಲ್ಲಿ ವಾಸವಾಗಿದ್ದೆವು. ಕಳೆದ ವರ್ಷ ಲಾಕ್‍ಡೌನ್ ಆದಾಗ ವಾಪಸ್ ಊರಿಗೆ ಹೋಗಿ ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದೆವು. ಕೊರೊನಾ ಹಾವಳಿ ಕಡಿಮೆ ಯಾಗಿದ್ದರಿಂದ ನಾಲ್ಕು ತಿಂಗಳ ಹಿಂದೆ ಮತ್ತೆ ಮೈಸೂರಿಗೆ ಬಂದಿದ್ದೆವು.

ಈಗ ಮತ್ತೆ ಕೊರೊನಾ ಸೋಂಕು ಹೆಚ್ಚಾಗುತ್ತಿದೆ. 14 ದಿನಗಳ ಕಫ್ರ್ಯೂ ವಿಧಿಸಿದ್ದಾರೆ. ಕೆಲಸ ಇಲ್ಲದಂತಾಗಿದೆ. ಹಾಗಾಗಿ ವಾಪಸ್ ತಮ್ಮೂರಿಗೆ ಹೋಗುತ್ತಿದ್ದೇವೆ. ಮತ್ತೆ ಮೈಸೂರಿಗೆ ಬರುವುದಿಲ್ಲ’ ಎಂದು ಬಹಳ ಬೇಸರ ದಿಂದ ನುಡಿದರು.

Translate »