ಚೈಲ್ಡ್‍ಲೈನ್ ಸಂಖ್ಯೆ 1098 ಗೊತ್ತಿಲ್ಲದಿದ್ದರೆ 100ಕ್ಕೆ ಕರೆ ಮಾಡಿ
ಮೈಸೂರು

ಚೈಲ್ಡ್‍ಲೈನ್ ಸಂಖ್ಯೆ 1098 ಗೊತ್ತಿಲ್ಲದಿದ್ದರೆ 100ಕ್ಕೆ ಕರೆ ಮಾಡಿ

June 13, 2018

ಮೈಸೂರು: ಬಾಲಕಾರ್ಮಿಕ ಪದ್ಧತಿ ಸಂಬಂಧ ಮಾಹಿತಿ ನೀಡುವ ಸಾರ್ವಜನಿಕರಿಗೆ ಪೊಲೀಸರು ಯಾವುದೇ ಕಿರಿಕಿರಿ ನೀಡುವುದಿಲ್ಲ ಎಂದು ಉಪಪೊಲೀಸ್ ಆಯುಕ್ತ ಎನ್.ವಿಷ್ಣುವರ್ಧನ್ ಭರ ವಸೆ ನೀಡಿದರು. ಮೈಸೂರಿನ ಜೆಎಲ್‍ಬಿ ರಸ್ತೆಯ ಇನ್ಸ್‍ಟಿಟ್ಯೂಟ್ ಆಫ್ ಇಂಜಿ ನಿಯರ್ಸ್ ಸಭಾಂಗಣದಲ್ಲಿ ಮಂಗಳ ವಾರ ಹಮ್ಮಿಕೊಂಡಿದ್ದ ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾ ಚರಣೆಯ ಅಧ್ಯಕ್ಷತೆ ವಹಿಸಿ ಮಾತ ನಾಡಿದ ಅವರು, ಬಾಲಕಾರ್ಮಿಕ ಪದ್ಧತಿ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರೆ ನಮಗೆಲ್ಲಿ ಕಿರಿಕಿರಿಯಾಗು ತ್ತದೆ ಎಂಬ ಆತಂಕ ಸಾರ್ವಜನಿಕರಿಗೆ ಬೇಡ. ಬೇಕಿದ್ದರೆ ತಮ್ಮ ಹೆಸರನ್ನೂ ಹೇಳುವುದು ಬೇಡ. ಮಾಹಿತಿ ನೀಡಿ ದರೆ ಅಷ್ಟೇ ಸಾಕು. ಮಾಹಿತಿ ನೀಡು ವವರು ಚೈಲ್ಡ್‍ಲೈನ್ ಸಂಖ್ಯೆ (1098) ಗೊತ್ತಿಲ್ಲವಾದರೂ ಪೊಲೀಸ್ ಕಂಟ್ರೋಲ್ ರೂಂ. ಸಂಖ್ಯೆ 100ಗೆ ಕರೆ ಮಾಡಿದರೆ ಸಾಕು. ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ನಮ್ಮ-ನಿಮ್ಮ ಕರ್ತವ್ಯ ಎಂದು ತಿಳಿಸಿದರು.

Translate »