ಮೈಸೂರಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ
ಮೈಸೂರು

ಮೈಸೂರಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ

June 13, 2018

ಮೈಸೂರು: ಮಾಜಿ ಮುಖ್ಯಮಂತ್ರಿ, ಆಡಳಿತ ಪಕ್ಷದ ನಾಯಕ ಸಿದ್ದರಾಮಯ್ಯ ಮಂಗಳವಾರ ಮೈಸೂರಿಗೆ ಆಗಮಿಸಿದ್ದು, ಚುನಾವಣೆಯ ಒಂದು ತಿಂಗಳ ಬಳಿಕ ಟಿ.ಕೆ.ಲೇಔಟ್‍ನಲ್ಲಿ ರುವ ತಮ್ಮ ಮನೆಗೆ ಆಗಮಿಸಿದ ಅವರಿಗೆ ಮನೆಯ ಬಳಿ ಕೆಲ ಕಾಂಗ್ರೆಸ್ ಮುಖಂಡರು ಬರಮಾಡಿಕೊಂಡರು.

ಅವರು ಸಿಎಂ ಆಗಿದ್ದಾಗ ಪಕ್ಷದ ಮುಖಂಡರು, ಕಾರ್ಯಕರ್ತರಿಂದ ಭಾರೀ ಜನಜಂಗುಳಿಯಿಂದ ತುಂಬಿರುತ್ತಿದ್ದ ಅವರ ಮನೆಯಲ್ಲಿ ಈಗ ಕೆಲವೇ ಮುಖಂಡರು ಕಂಡು ಬಂದರು. ಅವರ ಪುತ್ರ ಶಾಸಕ ಡಾ.ಯತೀಂದ್ರ, ಮಾಜಿ ಶಾಸಕರಾದ ಸತ್ಯ ನಾರಾಯಣ, ಬನ್ನೂರು ಕೃಷ್ಣಪ್ಪ ಇನ್ನಿ ತರರು ಸಿದ್ದರಾಮಯ್ಯರನ್ನು ಸ್ವಾಗತಿಸಿದರು.

ಅಧಿಕಾರ ಇದ್ದಾಗ ಮನೆಯ ಮುಂದೆ ಅಹವಾಲುಗಳನ್ನು ಹಿಡಿದು ತುಂಬಿರು ತ್ತಿದ್ದ ಜನಜಂಗುಳಿ ಸಿದ್ದರಾಮಯ್ಯ ಮನೆ ಮುಂದೆ ಇಂದು ಕಂಡು ಬರಲಿಲ್ಲ. ಪೊಲೀಸರೂ ನಿರಾಳವಾಗಿದ್ದರು. ಸಿದ್ದ ರಾಮಯ್ಯರನ್ನು ಕಾಣಲು ಬರುತ್ತಿದ್ದವರು ಯಾವ ತಡೆಯೂ ಇಲ್ಲದೇ ಮನೆಯ ಒಳಗೆ ಹೋಗಿ ಬರುವುದು ಮಾಡುತ್ತಿದ್ದರು.
ಸಿರಿ ಬಂದೋರಿಗೆ ಜನ ಕಣ್ಣಿಗೆ ಕಾಣಲ್ಲ

ಸಿದ್ದರಾಮಯ್ಯರನ್ನು ಕಾಣಲು ಬಂದಿದ್ದ ಹಿಂದುಳಿದ ವರ್ಗಗಳ ಇಲಾಖೆ ಸಚಿವ ಸಿ.ಪುಟ್ಟರಂಗಶೆಟ್ಟಿ, ಸಿದ್ದರಾಮಯ್ಯರ ಕಾಲು ಮುಟ್ಟಿ ನಮಸ್ಕರಿಸಿದರು. ಈ ವೇಳೆ ಸಿದ್ದರಾಮಯ್ಯ ಪುಟ್ಟರಂಗಶೆಟ್ಟಿ ಅವರನ್ನು ಆತ್ಮೀಯತೆಯಿಂದ ತಮ್ಮದೇ ಧಾಟಿಯಲ್ಲಿ ಮಾತನಾಡಿಸಿದರು. ಅಧಿಕಾರ ಸ್ವೀಕಾರ ಮಾಡಿದ್ದೀರಾ? ಅಧಿಕಾರಿಗಳ ಸಭೆ ನಡೆಸಿ ದ್ದೀರಾ? ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪುಟ್ಟರಂಗಶೆಟ್ಟಿ, ‘ಅಧಿಕಾರ ತೆಗೆದುಕೊಂಡಿದ್ದು, ನಾಳೆ ಅಧಿಕಾರಿಗಳ ಸಭೆ ನಡೆಸಲಿದ್ದೇನೆ’ ಎಂದರು.
ಮಾತು ಮುಂದುವರೆಸಿದ ಸಿದ್ದರಾಮಯ್ಯ, ‘ಅಧಿಕಾರ ಬಂದ ಮೇಲೆ ಎಲ್ಲರೂ ಕಣ್ಣಿಗೆ ಕಾಣ್ತಾ ಇದ್ದಾರಾ, ಇಲ್ಲವಾ? ಸಿರಿ ಬಂದೋ ರಿಗೆ ಜನ ಕಣ್ಣಿಗೆ ಕಾಣಲ್ಲ…’ ಎಂಬ ಗಾದೆ ಯನ್ನು ಉಲ್ಲೇಖಿಸಿ, ನೀನು ಆ ರೀತಿ ಆಗ ಬೇಡ ಎಂದು ಬುದ್ಧಿ ಮಾತು ಹೇಳಿದರು.

ಬಳಿಕ ಸಂಸದ ಆರ್.ಧ್ರುವನಾರಾಯಣ್, ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಇನ್ನಿತರ ಮುಖಂಡರು ಬಂದು ಸೇರಿಕೊಂಡರು.
ಒಂದೆಡೆ ಸಿಎಂ ಮುಖಂಡರೊಡನೆ ಮಾತುಕತೆಯಲ್ಲಿದ್ದರೆ, ಇನ್ನೊಂದೆಡೆ ಅವರ ಪುತ್ರ, ಶಾಸಕ ಡಾ.ಯತೀಂದ್ರ ಸಿದ್ದ ರಾಮಯ್ಯ, ವರುಣಾ ಕ್ಷೇತ್ರದ ಜನರಿಂದ ಅಹವಾಲು ಸ್ವೀಕರಿಸಿ ಅದಕ್ಕೆ ಸಂಬಂಧಿಸಿ ದಂತೆ ಸಲಹೆಗಳನ್ನು ನೀಡುತ್ತಿದ್ದರು.

Translate »