ವಿವಿಧತೆಯಲ್ಲಿ ಏಕತೆ ಚಾಂದ್‍ಬಾಷಾ ಕವಿತೆಗಳ ವಿಶಿಷ್ಟತೆ: ಡಾ.ಎಂ.ನೀಲಗಿರಿ ತಳವಾರ್
ಮೈಸೂರು

ವಿವಿಧತೆಯಲ್ಲಿ ಏಕತೆ ಚಾಂದ್‍ಬಾಷಾ ಕವಿತೆಗಳ ವಿಶಿಷ್ಟತೆ: ಡಾ.ಎಂ.ನೀಲಗಿರಿ ತಳವಾರ್

June 13, 2018

ಮೈಸೂರು: ದೇಶ, ಧರ್ಮ, ಜಾತಿ, ಭಾಷೆಗಳ ವಿಷಯದಲ್ಲಿ ಸಮಾಜ ವನ್ನು ಛಿದ್ರಗೊಳಿಸುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಚಾಂದ್‍ಬಾಷಾ ಅವರ ಕವಿತೆಗಳು ವಿವಿಧತೆಯಲ್ಲಿ ಏಕತೆಯನ್ನು ಪ್ರತಿಬಿಂಬಿಸುತ್ತವೆ ಎಂದು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಡಾ. ಎಂ.ನೀಲಗಿರಿ ತಳವಾರ್ ನುಡಿದರು.

ಅವರು ಇತ್ತೀಚೆಗೆ ನಗರದ ಇನ್ಸ್‍ಟಿ ಟ್ಯೂಷನ್ ಆಫ್ ಇಂಜಿನಿಯರ್ಸ್ ಸಭಾಂಗಣದಲ್ಲಿ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಇಂಚರ ಸಾಂಸ್ಕøತಿಕ ಪ್ರತಿಷ್ಠಾನ ಆಯೋಜಿಸಿದ್ದ ಸಮಾರಂಭ ದಲ್ಲಿ ಕವಿ ಚಾಂದ್‍ಬಾಷಾ ಅವರ `ಚಿತ್ತ ಚಿತ್ತಾರ’ ಹಾಗೂ `ಬಹುರೂಪಿ ಪ್ರೀತಿ’ ಕವನ ಸಂಕಲನ ಹಾಗೂ `ನೀಲಿಮ ಆಗಸದಿ’ ಧ್ವನಿಸಾಂದ್ರಿಕೆ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಕೃತಿ ಕುರಿತಂತೆ ಮಾತ ನಾಡುತ್ತಿದ್ದರು. ಕವಿ ಸಹಜವಾದ ಮನೋ ಧರ್ಮದ ಜೊತೆಗೆ ಏಕತೆಯ ಸಂದೇಶ ಸಾರುವ ಮನೋಧರ್ಮವೂ ಕವಿತೆಯಲ್ಲಿ ಅಡಕವಾಗಿದೆ. ಉರ್ದು ಮಾತೃಭಾಷೆ ಯಾಗಿದ್ದರೂ ಕನ್ನಡದಲ್ಲಿ ಅಚ್ಚುಕಟ್ಟಾಗಿ ಬರೆವ ಕಲೆಯನ್ನು ಬಾಷಾ ಮೈಗೂಡಿಸಿ ಕೊಂಡಿದ್ದಾರೆ. ಶಬ್ದ ಚಮತ್ಕಾರದ ಕುಸುರಿ ಕೆಲಸವೂ ಅಲ್ಲಲ್ಲಿ ಕಾಣಸಿಗುತ್ತದೆ ಎಂದರು.
`ನೀಲಿಮ ಆಗಸದಿ’ ಧ್ವನಿಸಾಂದ್ರಿಕೆ ಲೋಕಾರ್ಪಣೆ ಮಾಡಿದ ಮಹಾಕವಯಿತ್ರಿ ಡಾ. ಲತಾ ರಾಜಶೇಖರ್ ಮಾತನಾಡಿ, ಚಾಂದ್‍ಬಾಷಾ ಅವರ ಕವಿತೆಗೂ ಸುಸಂಸ್ಕøತ ಮನೋಭಾವವನ್ನು ಬಿಂಬಿಸುವ ಕವಿತೆ ಗಳು, ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿ ಸಿದ ಖ್ಯಾತ ಕನ್ನಡ ಕವಿಗಳಾದ ಪ್ರೊ. ನಿಸಾರ್ ಅಹಮ್ಮದ್, ಅಕಬರ ಆಲಿ ಯಂತಹವರ ಪರಂಪರೆಯನ್ನು ಮುಂದು ವರೆಸಿಕೊಂಡು ಹೋಗುವಲ್ಲಿ ಶ್ರಮಿಸಿ ದ್ದಾರೆ. ಸಾಹಿತ್ಯ ಮತ್ತು ಸಂಗೀತದ ಸಂಗಮ ವಾದ ಕಾರ್ಯಕ್ರಮ ಇದಾಗಿದ್ದು, ಮೌಲ್ಯ ಗಳು ಕುಸಿಯುತ್ತಿರುವ ಸಂದರ್ಭದಲ್ಲಿ ಮೌಲ್ಯಗಳನ್ನು ಎತ್ತಿ ಹಿಡಿವ ಇಂತಹ ಸಾಹಿತ್ಯ ರಚನೆ ಅಗತ್ಯವಾಗಿದೆ. ಸಂಗೀತ ಮನಸ್ಸನ್ನು ಆಹ್ಲಾದಗೊಳಿಸುತ್ತದೆ ಎಂದರು.

ಚಿತ್ತ ಚಿತ್ತಾರ ಕೃತಿ ಕುರಿತಂತೆ ಮಾತ ನಾಡಿದ ಲೇಖಕಿ ಉಷಾ ನರಸಿಂಹನ್ ಮಾತನಾಡಿ, ಕನ್ನಡ ಸಾರಸ್ವತ ಲೋಕದ ಖ್ಯಾತರ ಪ್ರಶಂಸೆ ಪಡೆದ ಕೃತಿ ಕವಿಯ ಸೌಜನ್ಯ ಮತ್ತು ಸಜ್ಜನಿಕೆಗೆ ಸಾಕ್ಷಿಗಳಾಗಿವೆ. ಆಕರ್ಷಕ ಮುಖಪುಟ, ಶೀರ್ಷಿಕೆ ಮತ್ತು ಅರ್ಥವತ್ತಾದ ಕವಿತೆಗಳಿಂದ ಸಂಕಲನ ಸುಪುಷ್ಟವಾಗಿದೆ ಹಾಗೂ ಭಾವಸಾಂದ್ರಿಕೆ ಯಲ್ಲಿ ತೇಲಿಸುತ್ತವೆ. ಕೌಟುಂಬಿಕ ಚೌಕಟ್ಟಿ ನಲ್ಲಿ ಸಭ್ಯತೆಯ ಶಿಷ್ಟಾಚಾರದ ಒಳಗೆ ಪ್ರೇಮ, ಪ್ರೀತಿ, ಕೋಮಲತೆ, ಚೆಲುವು, ಸಹೃದಯತೆಯಂತಹ ಭಾವಗಳನ್ನು ಚಿತ್ರಿಸಿದ್ದಾರೆ. ಮಾನವ ಸಂಬಂಧಗಳನ್ನು ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ. ಪ್ರತಿಮೆಗಳಲ್ಲಿ ಮಾತನಾಡುವ ಶಕ್ತಿಯನ್ನು ಕಾವ್ಯ ಪರಂಪರೆಯ ಅಧ್ಯಯನದಿಂದಾಗಿ ಇನ್ನಷ್ಟು ಬೆಳೆಸಿಕೊಂಡರೆ ಮತ್ತಷ್ಟು ಸಶಕ್ತ ಕವಿಯಾಗಬಲ್ಲರು ಎಂದರು. ಕಾವೇರಿ ಗ್ರಾಮೀಣ ಬ್ಯಾಂಕ್‍ನ ಪ್ರಧಾನ ಕಚೇರಿ ಅಧ್ಯಕ್ಷ ಎಂ.ಭುವನೇಂದ್ರ ಠಾಕೂರ್ ಕೃತಿಗಳನ್ನು ಲೋಕಾರ್ಪಣೆ ಗೊಳಿಸಿ ಮಾತನಾಡಿದರು. ಕವಿ ಚಾಂದ್‍ಬಾಷಾ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಮಾತನಾಡಿದ ಡಾ. ಕೆ.ರಘುರಾಮಯ್ಯ ವಾಜಪೇಯಿ, ಸಂಸ್ಕಾರ ಮತ್ತು ಭಾವಗಳಿಂದ ಮಾತ್ರ ಉತ್ತಮ ಕವಿತೆ ರಚನೆ ಸಾಧ್ಯ. ಕನ್ನಡದ ಉರ್ದು ಮಾತೃಭಾಷೆಯಾಗುಳ್ಳ ಕನ್ನಡದ ಹಿರಿಯ ಕವಿಗಳ ಪರಂಪರೆಯನ್ನು ಮುಂದು ವರೆಸಿಕೊಂಡು ಬಂದಿರುವ ಚಾಂದ್‍ಬಾಷಾ ಅವರ ಕವಿತೆಗಳು ಈ ದೃಷ್ಟಿಯಿಂದ ಗಮನಾರ್ಹ ಎಂದರು. ಜಿಲ್ಲಾ ಕಸಾಪ ಅಧ್ಯಕ್ಷ ಡಾ. ವೈ.ಡಿ.ರಾಜಣ್ಣ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಸಂಧ್ಯಾ ಪ್ರಾರ್ಥಿಸಿ ದರು. ಇಂಚರ ಸಾಂಸ್ಕøತಿಕ ಪ್ರತಿ ಷ್ಠಾನದ ಅಧ್ಯಕ್ಷ ರಂಗನಾಥ್ ಮೈಸೂರು ಸ್ವಾಗತಿಸಿದರು. ಸಂಜಯ್ ಕಾರ್ಯಕ್ರಮ ನಿರೂಪಿಸಿದರು.

Translate »