ಭಾರತೀಯ ಸಂಸ್ಕøತಿ ಶ್ರೀಮಂತಗೊಳಿಸಲು ಕರೆ
ಮಂಡ್ಯ

ಭಾರತೀಯ ಸಂಸ್ಕøತಿ ಶ್ರೀಮಂತಗೊಳಿಸಲು ಕರೆ

March 2, 2020

ಪಾಂಡವಪುರ, ಮಾ.1- ಭಾರತೀಯ ಸಂಸ್ಕøತಿ ಕೂಡಿಬಾಳುವ ಸಂಸ್ಕøತಿಯಾ ಗಿದ್ದು, ನಮ್ಮ ಸಂಸ್ಕøತಿಯನ್ನು ಮತ್ತಷ್ಟು ಶ್ರೀಮಂತಗೊಳಿಸಬೇಕಾಗಿದೆ ಎಂದು ಡಾ.ಶ್ರೀ ತ್ರಿನೇತ್ರಮಹಂತ ಶಿವಯೋಗಿ ಸ್ವಾಮೀಜಿ ತಿಳಿಸಿದರು.

ತಾಲೂಕಿನ ಬೇಬಿಬೆಟ್ಟದಲ್ಲಿ ನಡೆದ ಬಾರಿ ದನಗಳ ಜಾತ್ರಾಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಭಾಗ ವಹಿಸಿ ಉತ್ತಮ ರಾಸುಗಳಿಗೆ ಬಹುಮಾನ ವಿತರಣೆ ಮಾಡಿದ ಬಳಿಕ ಮಾತನಾಡಿದ ಅವರು, ನಮ್ಮಲ್ಲಿ ಭಾರತೀಯ ಸಂಸ್ಕøತಿ ಶ್ರೀಮಂತವಾದದ್ದು. ಆದರೆ, ನಮ್ಮಲ್ಲಿ ಇತ್ತೀಚಿನ ದಿನಗಳಲ್ಲಿ ಕೂಡಿಬಾಳುವ ಸಂಸ್ಕøತಿ ಮರೆಯಾಗುತ್ತಿದೆ. ಎಲ್ಲಿ ನೋಡಿ ದರು ಒಂಟಿತನ ಕಾಣುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಗ್ರಾಮೀಣ ಪ್ರದೇಶದಲ್ಲಿ ಎತ್ತು, ಹಸುಗಳನ್ನು ಸಾಕಾಣಿಕೆ ಮಾಡುವುದು ಕಷ್ಟ ವಾಗುತ್ತಿದೆ. ಮೊದಲು ಪ್ರತಿ ಮನೆಗೂ ಹಸು-ಕರು ಇರಬೇಕು ಎಂಬ ಪದ್ಧತಿ ಇತ್ತು. ಆದರೆ, ಪ್ರಸ್ತುತ ರಾಸುಗಳನ್ನು ಸಾಕಾಣಿಕೆ ಮಾಡುವುದು ಕಷ್ಟವಾಗಿಬಿಟ್ಟಿದೆ ಎಂದು ತಿಳಿಸಿದರು.

ಸಿಇಓ ಯಾಲಕ್ಕಿಗೌಡ ಮಾತನಾಡಿ, ಬೇಬಿಬೆಟ್ಟದ ಜಾತ್ರೆ ರೈತರಿಗೆ ಮನರಂಜನೆ ಹಾಗೂ ರೈತರಿಗೆ ಪ್ರೋತ್ಸಾಹ ನೀಡುವ ಜಾತ್ರೆಯಾಗಿದೆ. ಜಾತ್ರೆಯಲ್ಲಿ ಭಾಗವಹಿ ಸುವ ಉತ್ತಮ ರಾಸುಗಳಿಗೆ ಚಿನ್ನದ ನಾಣ್ಯವನ್ನು ಬಹುಮಾನವಾಗಿ ನೀಡುತ್ತಿ ರುವ ರಾಜ್ಯದ ಮೊದಲ ಜಾತ್ರೆ ಇದಾ ಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ವಿಜೃಂಭಣೆಯಿಂದ ಈ ಜಾತ್ರೆ ನಡೆಯು ವಂತಾಗಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಗುರುಸಿದ್ದೇಶ್ವರ ಸ್ವಾಮೀಜಿ, ಜಿಪಂ ಸದಸ್ಯರಾದ ಸಿ.ಅಶೋಕ್, ಶಾಂತಲರಾಮಕೃಷ್ಣೇಗೌಡ, ತಾಪಂ ಅಧ್ಯಕ್ಷೆ ಗಾಯಿತ್ರಿ, ಮನ್‍ಮುಲ್ ಅಧ್ಯಕ್ಷ ರಾಮಚಂದ್ರು ತಾಪಂ ಮಾಜಿ ಅಧ್ಯಕ್ಷ ಪೂರ್ಣಿಮಾ ವೆಂಕಟೇಶ್, ಸದಸ್ಯ ರಾದ ಸಿ.ಎಸ್.ಗೋಪಾಲೇಗೌಡ, ಗ್ರಾಪಂ ಅಧ್ಯಕ್ಷೆ ವರಲಕ್ಷ್ಮೀಸೋಮಶೇಖರ್, ತಾಪಂ ಇಓ ಆರ್.ಪಿ.ಮಹೇಶ್, ಪಿಎಲ್‍ಡಿ ಬ್ಯಾಂಕ್ ನಿರ್ದೇಶಕ ಸಿ. ಪ್ರಕಾಶ್, ಪಶು ಇಲಾಖೆಯ ಉಪನಿರ್ದೇ ಶಕ ಪದ್ಮನಾಭ, ಸಹಾಯಕ ನಿರ್ದೇಶಕ ನಟರಾಜು, ಮುಖಂಡ ನಾಗಣ್ಣ, ಪಶು ಇಲಾಖೆ ಪ್ರಕಾಶ್, ಪಿಡಿಓಗಳಾದ ನಾರಾ ಯಣ್, ತಮ್ಮಣ್ಣೇಗೌಡ, ಕೆ.ಮಹೇಶ್, ರಾಜು ಸೇರಿದಂತೆ ಹಲವರು ಹಾಜರಿದ್ದರು.

ಬಹುಮಾನ ವಿಜೇತರ ವಿವರ
ಹಾಲುಹಲ್ಲಿನ ಬೀಜದ ಹೋರಿಗಳ ವಿಭಾಗ: ಬೋರೇಗೌಡ(ಮಳವಳ್ಳಿ), ರಾಜೇಶ್ (ಹೊಸಮಾವಿನಕೆರೆ ಕೆ.ಆರ್.ಪೇಟೆ), ರಾಮಚಂದ್ರು (ನುನ್ನುರು, ಚನ್ನಪಟ್ಟಣ).

ಎರಡುಹಲ್ಲಿನ ಬೀಜದ ಹೋರಿಗಳ ವಿಭಾಗ: ರವೀಶ್(ಕುರಬನಹಳ್ಳಿ, ಕೆ.ಆರ್. ಪೇಟೆ), ಕುಮಾರ(ಹೊಸಮಾವಿನಕೆರೆ ಕೆ.ಆರ್.ಪೇಟೆ), ಗೋಪಾಲೇಗೌಡ (ಹೊಸ ಮಾವಿನಕೆರೆ ಕೆ.ಆರ್.ಪೇಟೆ). ನಾಲ್ಕುಹಲ್ಲಿನ ಬೀಜದ ಹೋರಿಗಳ ವಿಭಾಗ:ದೇವರಾಜು (ಬ್ಯಾಟರಾಯನ ಕೊಪ್ಪಲು ಪಾಂಡವ ಪುರ), ಸೋಮೇಗೌಡ(ಕುರುಬಹಳ್ಳಿ ಕೆ.ಆರ್. ಪೇಟೆ), ಪಟೇಲ್ ಬಿನ್ ಚಲುವೇಗೌಡ (ಹಳೆ ಮಾನವಿನಕೆರೆ ಕೆ.ಆರ್‍ಪೇಟೆ). ಆರುಹಲ್ಲಿನ ಬೀಜದ ಹೋರಿಗಳ ವಿಭಾಗ: ರಾಮೇಗೌಡ (ಮೋದೂರು ಕೆ.ಆರ್. ಪೇಟೆ), ರುದ್ರೇಶ್ (ಹಳ್ಳಿಕೆರೆ ಹುಣ ಸೂರು). ಬಾಯಿಗೂಡಿದ ಬೀಜದ ಹೋರಿಗಳ ವಿಭಾಗ: ಸಿದ್ದರಾಜು (ಮೆಣಸಿನಹಳ್ಳಿ, ಚನ್ನ ಪಟ್ಟಣ). ಹಾಲುಹಲ್ಲಿನ ಜೋಡಿ ಕಡಸುಗಳ ವಿಭಾಗ: ವಿಜಯಕ್‍ಕುಮಾರ್ (ಬಿ.ಹೆಚ್.ಕಾಲೊನಿ ಮಂಡ್ಯ), ಮಾದೇ ಗೌಡ (ಬಸವನಪುರ ಟಿ.ನರಸೀಪುರ ತಾ), ತಿಮ್ಮೇಗೌಡ(ಸಿ.ಹಳ್ಳಿ). ಎರಡು ಹಲ್ಲಿನ ಜೋಡಿ ಹಸುಗಳು: ವೆಂಕಟೇಗೌಡ (ಹತ್ತಹಳ್ಳಿ), ನಂದೀಶ್(ನೆರಳಕೆರೆ), ಯೋಗೇಶ್(ಬೂಕನಕೆರೆ). ನಾಲ್ಕುಹಲ್ಲಿನ ಜೋಡಿ ಹಸುಗಳು: ಮಣಿಮಹದೇವು (ಬಿ.ಸಿ.ಹಳ್ಳಿ), ಡಿ.ಎಂ.ಸಿದ್ದೇಗೌಡ (ಬಸವನಹಳ್ಳಿ), ಪ್ರದೀಪ್(ತಡಗವಾಡಿ). ಆರುಹಲ್ಲಿನ ಜೋಡಿ ಹಸುಗಳು: ಲೋಕೇಶ್(ಚಾಮನಹಳ್ಳಿ), ನಾಗಣ್ಣ (ಕ್ಯಾತನಹಳ್ಳಿ ಮಳವಳ್ಳಿ), ನಟರಾಜು (ಬನ್ನೂರು). ಬಾಯಿಗೂಡಿದ ಜೋಡಿ ಹಸುಗಳು: ಮಂಜು (ಚಾಮನಹಳ್ಳಿ ಕೊಪ್ಪಲು), ಬಸವಣ್ಣ(ಕಳ್ಳಿಪುರ), ಗುರುದತ್(ಚಳ್ಳಕೆರೆ). ಬಾಯಿಗೂಡಿದ ಜೋಡಿ ಎತ್ತುಗಳ ವಿಭಾಗ: ಡಾ. ರಾಹುಲ್‍ಗೌಡ(ಬನ್ನೂರು ಟಿ.ನರಸೀ ಪುರು), ಕೃಷ್ಣೇಗೌಡ(ತಿಮ್ಮನಕೊಪ್ಪಲು, ಪಾಂಡವಪುರ), ಸೋಮಶೇಖರ್ (ತಾಳಶಾಸನ,ಪಾಂಡವಪುರ), ರವಿ (ಪಾಂಡವಪುರ), ದೇವರಾಜು (ಅರಕೆರೆ ಬೆಟ್ಟಹಳ್ಳಿ ಶ್ರೀರಂಗಪಟ್ಟಣ), ಎಸ್.ಕೆ. ಶಂಕರೇಗೌಡ(ಸುಂಕಾತೊಣ್ಣೂರು ಪಾಂಡವಪುರ), ತಿಬ್ಬೇಗೌಡ(ಬನ್ನೂರು).

ಹಾಲುಹಲ್ಲಿನ ಜೋಡಿ ಕರುಗಳ ವಿಭಾಗ: ಎನ್.ಸಿ.ಶಶಾಂಕ್(ನೆಲಮನೆ), ಎಸ್.ಪಿ.ರಮೇಶ್‍ರಾಜ್(ಸಿದ್ದಯ್ಯನಕೊಪ್ಪಲು), ನಯನ್‍ಕುಮಾರ್(ಇಟ್ಟಿಗೂಡುಮೈಸೂರು), ಮನೋಜ್‍ಗೌಡ(ಕೆನ್ನಾಳು), ಬೋರಲಿಂಗಯ್ಯ(ಚಿಕ್ಕೇಗೌಡನಕೊಪ್ಪಲು). ಎರಡುಹಲ್ಲಿನ ಜೋಡಿ ಎತ್ತುಗಳ ವಿಭಾಗ: ಕೃಷ್ಣ(ಮಂಗಳವಾರಪೇಟೆ ಚನ್ನಪಟ್ಟಣ), ಸುನೀಲ್‍ಕುಮಾರ್(ಹೊಸಕೆರೆ ಮದ್ದೂರು), ಎನ್.ಹರೀಶ್ (ಬೇವಿನ ಕುಪ್ಪೆ), ಪಟೇಲ್‍ಶಿವರುದ್ರೇಗೌಡ (ಕಲ್ಲಹಳ್ಳಿ ಮಂಡ್ಯ), ನಾಗರಾಜು(ಬಿಳಿಕೆರೆ ಹುಣ ಸೂರು),. ನಾಲ್ಕುಹಲ್ಲಿನ ಜೋಡಿಎತ್ತುಗಳ ವಿಭಾಗ: ಎಂ.ಎಸ್.ಕಿರಣ್(ಗಾಂಧಿನಗರ ಮಂಡ್ಯ), ಎಚ್.ಸಿ.ಲಿಂಗರಾಜು (ಹೊಳಲುಮಂಡ್ಯ), ನಡಕೇರೀಗೌಡ (ಬೇವಿನ ಕುಪ್ಪೆಪಾಂಡವಪುರ), ತಮ್ಮಣ್ಣ (ಪಾಂಡವಪುರ), ಡಿ.ಟಿ.ಧರ್ಮ (ಡೊದ್ದಬ್ಯಾಡರಹಳ್ಳಿ, ಪಾಂಡವಪುರ). ಆರುಹಲ್ಲಿನ ಜೋಡಿ ಎತ್ತುಗಳ ವಿಭಾಗ: ಚಂದ್ರೇಗೌಡ(ಹೂವಿನಹಳ್ಳಿ ನಾಗ ಮಂಗಲ), ಟಿಲ್ಲರ್‍ನಾಗಣ್ಣ(ನೆಲೆಮನೆ ಶ್ರೀರಂಗ ಪಟ್ಟಣ), ಪೈಲ್ವಾನ್ ಶಿವಕುಮಾರ್ (ಗಂಜಾಂ ಶ್ರೀರಂಗಪಟ್ಟಣ), ಕೆಮ್ಮನರಸೇ ಗೌಡ(ಮೂಡಲಕೊಪ್ಪಲು ಪಾಂಡವಪುರ), ರಮೇಶ್(ಕೆ.ಪಾಳ್ಯ ಕನಕಪುರ).

Translate »