ಕಾಯಕ ವರ್ಗಗಳ ಅಭಿವೃದ್ಧಿಗೆ ನಿಗಮಮಂಡಳಿ ಸ್ಥಾಪನೆ ಅಗತ್ಯ
ಮಂಡ್ಯ

ಕಾಯಕ ವರ್ಗಗಳ ಅಭಿವೃದ್ಧಿಗೆ ನಿಗಮಮಂಡಳಿ ಸ್ಥಾಪನೆ ಅಗತ್ಯ

March 2, 2020

ಕೆ.ಆರ್.ಪೇಟೆ,ಮಾ.1-ರಾಜ್ಯದಲ್ಲಿನ ಎಲ್ಲಾ ಕಾಯಕ ವರ್ಗಗಳ ಅಭಿವೃದ್ಧಿ ದೃಷ್ಟಿಯಿಂದ ಪ್ರತ್ಯೇಕ ನಿಗಮ-ಮಂಡಳಿ ಸ್ಥಾಪನೆ ಮಾಡಬೇಕು ಎಂದು ರಾಜ್ಯ ಕಾಯಕ ಸಮುದಾಯಗಳ ಒಕ್ಕೂಟದ ಸಂಚಾಲಕ ಹಾಗೂ ರಾಜ್ಯ ಬಿಜೆಪಿ ಮುಖಂಡ ರಘು ಕೌಟಿಲ್ಯ ಹೇಳಿದರು.

ಪಟ್ಟಣದ ಹಳೇ ಕಿಕ್ಕೇರಿ ರಸ್ತೆಯಲ್ಲಿ ತಾಲೂಕು ಮಡಿವಾಳರ ಸಂಘವು ಆಯೋಜಿಸಿದ್ದ ಶಿವಶರಣ ಮಡಿವಾಳ ಮಾಚಿದೇವರ ಜಯಂತ್ಯೋತ್ಸವ ಕಾರ್ಯಕ್ರಮ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಗಣ್ಯರಿಗೆ ಹಮ್ಮಿ ಕೊಂಡಿದ್ದ ಅಭಿನಂದನಾ ಸಮಾರಂಭ ದಲ್ಲಿ ಕಾಯಕ ಸಮುದಾಯಗಳ ಅಭಿ ವೃದ್ಧಿ ಮತ್ತು ಅವರ ಸ್ಥಿತಿಗತಿ ಕುರಿತು ಅವರು ಮಾತನಾಡಿದರು.

ನಿಗಮ ಮಂಡಳಿ ಸ್ಥಾಪನೆ ಮಾಡಿದರೆ, ಆ ಸಮುದಾಯಗಳ ಸಮಗ್ರ ಅಭಿವೃದ್ಧಿ ಸಾಧ್ಯವಾಗುತ್ತದೆ. ಕಾಯಕ ಸಮುದಾಯ ಗಳಲ್ಲಿ ಕೀಳರಿಮೆ ದೂರ ಮಾಡಲು ಹಾಗೂ ಕಾಯಕ ಸಮುದಾಯಗಳ ಮೇಲೆ ದೌರ್ಜನ್ಯಗಳು ನಡೆದರೆ ಅವರ ರಕ್ಷಣೆಗೆ ಸೂಕ್ತ ಕಾನೂನು ಅಗತ್ಯವಾಗಿದೆ. ಈ ಮೂಲಕ ಕಾಯಕ ಸಮುದಾಯಗಳು ನೆಮ್ಮದಿಯ ಜೀವನ ನಡೆಸಲು ಅವಕಾಶ ಕಲ್ಪಿಸಬೇಕಾದ ಜವಾಬ್ದಾರಿ ಸರ್ಕಾರಗಳು ಹಾಗೂ ಜನಪ್ರತಿನಿಧಿಗಳ ಮೇಲಿದೆ ಎಂದರು.

ಸಮಾಜದಲ್ಲಿ ದುಡಿಯುವ ವರ್ಗ ಗಳಿಗೆ ಸೇರಿದ ಜನರ ಹಿತವನ್ನು ಕಾಪಾ ಡಲು ನಮ್ಮನ್ನಾಳುವ ಸರ್ಕಾರಗಳು ಹಾಗೂ ಜನಪ್ರತಿನಿಧಿಗಳು ಮುಂದಾಗ ದಿದ್ದರೆ ದುಡಿಯುವ ವರ್ಗಗಳಿಗೆ ಸೇರಿದ ಕಾಯಕ ವೃತ್ತಿ ಮಾಡುವ ಜನರು ತಮಗೆ ಬೇಕಾದ ಜನಪ್ರತಿನಿಧಿಯನ್ನು ಆಯ್ಕೆ ಮಾಡಿಕೊಳ್ಳುವ ಸಾಮಥ್ರ್ಯವನ್ನು ಹೊಂದಿದ್ದಾರೆ. ಅವರು ಮನಸ್ಸು ಮಾಡಿ ದರೆ ಒಬ್ಬ ಜನಪ್ರತಿನಿಧಿಯನ್ನು ಆಯ್ಕೆ ಮಾಡುವ ಇಲ್ಲವೇ ಸೋಲಿಸುವ ಸಾಮಥ್ರ್ಯ ಹಾಗೂ ಶಕ್ತಿಯನ್ನು ಹೊಂದಿ ದ್ದಾರೆ. ಹಾಗಾಗಿ, ಸಣ್ಣ ಸಮುದಾಯ ಗಳನ್ನು ಲಘುವಾಗಿ ಪರಿಗಣಿಸದೇ ಗಂಭೀರವಾಗಿ ವಿಶ್ವಾಸಕ್ಕೆ ತೆಗೆದುಕೊಂಡು ಸಣ್ಣ ಸಮುದಾಯಗಳ ಅಭಿವೃದ್ಧಿಗೆ ಜನಪ್ರತಿ ನಿಧಿಗಳು ಹಾಗೂ ರಾಜಕೀಯ ಪಕ್ಷಗಳು ಮುಂದಾಗಬೇಕು ಎಂದು ಒತ್ತಾಯಿಸಿದರು.

ತಾಲೂಕು ಮಡಿವಾಳರ ಸಂಘದ ಅಧ್ಯಕ್ಷ ಎಸ್.ಪಿ.ಸಿದ್ದೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್ ಮಡಿ ವಾಳ ಮಾಚಿದೇವರ ಭಾವಚಿತ್ರವನ್ನು ಅನಾವರಣ ಮಾಡಿದರು.

ಕಾರ್ಯಕ್ರಮದಲ್ಲಿ ಸಚಿವ ಡಾ.ನಾರಾ ಯಣಗೌಡರ ಧರ್ಮಪತ್ನಿ ದೇವಕಿನಾರಾ ಯಣಗೌಡ, ಮಾಜಿ ಶಾಸಕ ಬಿ.ಪ್ರಕಾಶ್, ಜಿಪಂ ಉಪಾಧ್ಯಕ್ಷೆ ಗಾಯತ್ರಿರೇವಣ್ಣ, ಸದಸ್ಯರಾದ ಬಿ.ಎಲ್.ದೇವರಾಜು, ರಾಮ ದಾಸ್, ತಾಪಂ ಅಧ್ಯಕ್ಷೆ ಜಯಲಕ್ಷ್ಮೀ ಸ್ವಾಮಿನಾಯಕ್, ಸದಸ್ಯ ಬಿ.ಎನ್. ದಿನೇಶ್, ಜಿಪಂ ಮಾಜಿ ಉಪಾಧ್ಯಕ್ಷ ಎಸ್.ಅಂಬರೀಶ್, ಮಂಡ್ಯ ನಗರಸಭೆಯ ಮಾಜಿ ಉಪಾಧ್ಯಕ್ಷೆ ಇಂದಿರಾ ಸತೀಶಬಾಬು, ಜೆಡಿಎಸ್ ಮುಖಂಡ ಎಸ್.ಎಲ್.ಮೋಹನ್, ಸೆಸ್ಕ್ ಎಇಇ ಕೃಷ್ಣ, ಸಹಾಯಕ ಎಂಜಿನಿಯರ್ ರಘು, ಮಡಿವಾಳರ ಸಂಘದ ತಾಲೂಕು ಅಧ್ಯಕ್ಷ ಶೀಳನೆರೆ ಸಿದ್ಧೇಶ್, ಗೌರವಾಧ್ಯಕ್ಷ ಹೆಚ್.ಎಸ್.ರಘು, ಗೌರವ ಸಲಹೆಗಾರ ಪಿ.ಜೆ.ವೆಂಕಟರಾಮ್, ಉಪಾಧ್ಯಕ್ಷರಾದ ಲೋಕೇಶ್, ಕೆ.ಜೆ.ಚಂದ್ರಶೇಖರ್, ಮಣಿಯಮ್ಮ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಸಾವಿರಾರು ಜನರು ಜಯಂತ್ಯೋತ್ಸವ ದಲ್ಲಿ ಭಾಗವಹಿಸಿದ್ದರು.

Translate »