ಪರೀಕ್ಷೆ ಫಲಿತಾಂಶ ರದ್ದುಗೊಳಿಸಿ, ನ್ಯಾಯಾಂಗ ತನಿಖೆಗೆ ಆಗ್ರಹ
ಮೈಸೂರು

ಪರೀಕ್ಷೆ ಫಲಿತಾಂಶ ರದ್ದುಗೊಳಿಸಿ, ನ್ಯಾಯಾಂಗ ತನಿಖೆಗೆ ಆಗ್ರಹ

February 5, 2022

ಮೈಸೂರು,ಫೆ.4(ಪಿಎಂ)- ಬಮೂಲ್‍ನ ವಿವಿಧ ಹುದ್ದೆಗಳ ನೇಮಕಾತಿ ಸಂಬಂಧ ಮುಕ್ತ ವಿವಿ ನಡೆಸಿದ ಲಿಖಿತ ಪರೀಕ್ಷೆಯಲ್ಲಿ ಸುಮಾರು 20 ಕೋಟಿ ರೂ. ಮೊತ್ತದ ಹಗರಣ ನಡೆ ದಿದೆ ಎಂದು ಆರೋಪಿಸಿದ ಮೈಸೂರು ವಿವಿ ಸೆನೆಟ್ ಮತ್ತು ಸಿಂಡೀಕೇಟ್ ಮಾಜಿ ಸದಸ್ಯರೂ ಆದ ರಾಜ್ಯ ಒಕ್ಕಲಿಗರ ಸಂಘದ ಹಿರಿಯ ಸದಸ್ಯ ಡಾ.ಕೆ.ಮಹದೇವ್, ಈ ಪರೀಕ್ಷೆ ಫಲಿತಾಂಶ ರದ್ದುಗೊಳಿಸಿ, ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಬಮೂಲ್‍ನ (ಬೆಂಗ ಳೂರು ನಗರ, ಬೆಂಗಳೂರು ಗ್ರಾಮಾ ಂತರ ಹಾಗೂ ರಾಮನಗರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ) ಆಡಳಿತ ಮಂಡಳಿಯು ವಿವಿಧ ಹುದ್ದೆಗಳ ನೇಮಕಾತಿ ಸಂಬಂಧ ಲಿಖಿತ ಪರೀಕ್ಷೆ ನಡೆಸಲು ಮುಕ್ತ ವಿವಿಗೆ ಜವಾಬ್ದಾರಿ ನೀಡಿತ್ತು. ಆದರೆ ಮುಕ್ತ ವಿವಿ ಕುಲಪತಿ ಪ್ರೊ.ವಿದ್ಯಾಶಂಕರ್, ಪರೀಕ್ಷೆ ನಡೆಸಲು ಐವರನ್ನು ನಿಯೋಜಿಸಿಕೊಂಡು ಅಕ್ರಮ ನಡೆಸಿದ್ದಾರೆ ಎಂದು ಆರೋಪಿಸಿದರು.

ಹಣ ನೀಡಿದ ಅಭ್ಯರ್ಥಿಗಳನ್ನು ಪರೀಕ್ಷೆ ಯಲ್ಲಿ ಉತ್ತೀರ್ಣಗೊಳಿಸಲು ಅಕ್ರಮ ನಡೆಸಲಾಗಿದೆ. ಅಂತಹ ಅಭ್ಯರ್ಥಿಗಳಿಂದ ತಲಾ 15ರಿಂದ 20 ಲಕ್ಷ ರೂ. ಪಡೆದು ಕೊಂಡಿದ್ದಾರೆ. 10ರಿಂದ 20 ಕೋಟಿ ರೂ. ಮೊತ್ತದ ಹಗರಣ ಇದರಲ್ಲಿ ನಡೆ ದಿದೆ. ಇದರ ವಿರುದ್ಧ ತನಿಖೆ ನಡೆಸಲು ಸಹ ಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರಿಗೆ ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್ ದೂರು ನೀಡಿದ್ದರು ಎಂದರು.

ದೂರು ಸಂಬಂಧ ಸಚಿವರು ಸಹಕಾರ ಸಂಘಗಳ ನಿಬಂಧಕರ ಮೂಲಕ ತನಿಖೆ ನಡೆಸಲು ಕ್ರಮ ವಹಿಸಿದ್ದಾರೆ. ಈ ತನಿಖೆಗೆ ಮೂರು ಕಾಸಿನ ಬೆಲೆ ಇಲ್ಲ. ಕಾರಣ, ವಿವಿಯ ಒಬ್ಬ ಕುಲಪತಿ ವಿರುದ್ಧ ನ್ಯಾಯಾಧೀಶರು ಮಾತ್ರ ವಿಚಾರಣೆ ನಡೆಸಲು ಅವಕಾಶವಿದೆ. ಹೈ ಕೋರ್ಟ್, ಪ್ರಕರಣವೊಂದರಲ್ಲಿ ಇದನ್ನು ಉಲ್ಲೇಖಿಸಿದೆ ಎಂದು ಪ್ರತಿಪಾಸಿದರು.

ನಿಯಮಾವಳಿ ಉಲ್ಲಂಘಿಸಿ, 70ರಿಂದ 100 ಮಂದಿ ಬೋಧಕೇತರ ಸಿಬ್ಬಂದಿಯನ್ನು ಮುಕ್ತ ವಿವಿಯಲ್ಲಿ ನೇಮಕಾತಿ ಮಾಡಿಕೊಳ್ಳ ಲಾಗಿದೆ. ಆದರೆ ಅವರಿಗೆ ನೇಮಕಾತಿ ಪತ್ರ ನೀಡಿಲ್ಲ. ಇಲ್ಲಿ ಹಣದ ವ್ಯವಹಾರ ನಡೆದಿದೆ. ತಲಾ 5 ಲಕ್ಷ ರೂ. ಪಡೆದು ನೇಮಕಾತಿ ಮಾಡಿಕೊಳ್ಳಲಾಗಿದೆ. ಇದು ಸರ್ಕಾರಕ್ಕೆ ಗೊತ್ತಿಲ್ಲವೇ? ಕುಲಾಧಿಪತಿಗಳಾದ ರಾಜ್ಯ ಪಾಲರು, ಉನ್ನತ ಶಿಕ್ಷಣ ಸಚಿವರು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.

Translate »