ಪ್ರವಾಹಪೀಡಿತ ಪ್ರದೇಶಗಳಲ್ಲಿ ಪರಿಹಾರ ಕೇಂದ್ರಗಳಿಗೆ ಬಾರದವರಿಗೆ `ಕಾಳಜಿ ಕಿಟ್’
News

ಪ್ರವಾಹಪೀಡಿತ ಪ್ರದೇಶಗಳಲ್ಲಿ ಪರಿಹಾರ ಕೇಂದ್ರಗಳಿಗೆ ಬಾರದವರಿಗೆ `ಕಾಳಜಿ ಕಿಟ್’

August 9, 2022

ಬೆಂಗಳೂರು, ಆ.8(ಕೆಎಂಶಿ)- ಪ್ರವಾಹಪೀಡಿತ ಪ್ರದೇಶಗಳಲ್ಲಿ ಪರಿಹಾರ ಕೇಂದ್ರಗಳಲ್ಲಿ ಉಳಿದು ಕೊಳ್ಳದೇ ಇರುವವರಿಗೆ ಅಕ್ಕಿ, ಬೇಳೆ, ಅಡುಗೆ ಎಣ್ಣೆಯನ್ನು ಒಳಗೊಂಡ ಕಾಳಜಿ ಕಿಟ್‍ಗಳನ್ನು ವಿತರಿಸಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರವಾಹದ ಸಂದರ್ಭದಲ್ಲಿ ಸರ್ಕಾರ ಸ್ಥಾಪಿಸುವ ಪರಿಹಾರ ಕೇಂದ್ರಗಳಲ್ಲಿ ಉಳಿದುಕೊಳ್ಳುವ ಬದಲು ಹಲವರು ಸ್ನೇಹಿತರು, ಬಂಧುಗಳ ಮನೆಯಲ್ಲಿ ಆಶ್ರಯ ಪಡೆಯುತ್ತಾರೆ. ಹೀಗಾಗಿ ಅಂತಹವ ರಿಗೂ ಸಾವಿರ ರೂ ಮೌಲ್ಯದ ಕಾಳಜಿ ಕಿಟ್ ಗಳನ್ನು ಒದಗಿಸಲಾಗುವುದು ಎಂದು ತಿಳಿಸಿದರು.

ಪ್ರತಿ ಕಿಟ್‍ನಲ್ಲಿ ದಿನೋಪಯೋಗಿ ವಸ್ತುಗಳಿ ರುತ್ತವೆ. ನೆಂಟರು, ಸ್ನೇಹಿತರ ಮನೆಗಳಲ್ಲಿ ಉಳಿದು ಕೊಂಡವರಿಂದ ಅವರಿಗೂ ಭಾರವಾಗಬಾರದು ಮತ್ತು ಆ ಮೂಲಕ ಪ್ರವಾಹ ಸಂತ್ರಸ್ತರಿಗೆ ತಾವು ಅನಾಥರು ಎಂಬ ಭಾವನೆ ಬರಬಾರದು ಎಂಬುದು ಕಿಟ್ ನೀಡುವ ಉದ್ದೇಶ ಎಂದರು. ಕನಿಷ್ಠ ಹತ್ತು ದಿನ ಗಳಿಗೆ ಆಗುವಷ್ಟು ಆಹಾರ ಪದಾರ್ಥಗಳನ್ನು ಈ ಕಿಟ್‍ಗಳು ಒಳಗೊಂಡಿರುತ್ತವೆ. ಸರ್ಕಾರದ ಪರಿ ಹಾರ ಕೇಂದ್ರಗಳಲ್ಲಿ ಉಳಿದುಕೊಂಡು ಮರಳಿ ಮನೆಗೆ ಹೋಗುವವರಿಗೂ ಈ ಕಿಟ್ ನೀಡಲಾ ಗುವುದು ಎಂದು ಸ್ಪಷ್ಟಪಡಿಸಿದರು. ಇದೇ ರೀತಿ ಪ್ರವಾಸ ಸಂತ್ರಸ್ತರಿಗೆ ಕೊಡೆ, ಟಾರ್ಚು ಸೇರಿದಂತೆ ಮಳೆಯಿಂದ ಸಂರಕ್ಷಿಸಿಕೊಳ್ಳುವ ವಸ್ತುಗಳನ್ನು ನೀಡಲು ಯೋಚಿಸಲಾಗಿದ್ದು ಸದ್ಯದಲ್ಲೇ ಆ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ವಿವರ ನೀಡಿದರು. ಸರ್ಕಾರ ಸ್ಥಾಪಿಸುವ ಪರಿಹಾರ ಕೇಂದ್ರಗಳಲ್ಲಿ ಉಳಿದುಕೊಳ್ಳುವವರಿಗೆ ಪೌಷ್ಟಿಕ ಆಹಾರ ವನ್ನು ನೀಡಲು ಆದೇಶಿಸಲಾಗಿದ್ದು, ಅವರಿಗೆ ಉಪಾ ಹಾರ ಮತ್ತು ಊಟದ ಮೆನು ಹೇಗಿರಬೇಕು ಎಂಬ ಕುರಿತು ಸೂಚನೆ ನೀಡಲಾಗಿದೆ ಎಂದು ವಿವರಿಸಿದರು. ರಾಜ್ಯದ ಇಪ್ಪತ್ತೊಂದು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಕಂಡು ಬಂದಿದ್ದು ಸರ್ಕಾರ ಸಮರೋಪಾದಿಯಲ್ಲಿ ಪರಿಹಾರ ಕ್ರಮಗಳನ್ನು ಕೈಗೊಂಡಿದೆ. ಅದೇ ರೀತಿ ಬೆಳೆ ಹಾನಿಗೆ ಸಂಬಂಧಿ ಸಿದಂತೆ ನೀಡಲಾಗುವ ಪರಿಹಾರ ಧನದ ಪ್ರಮಾಣ ವನ್ನು ಈ ವರ್ಷದ ಮಟ್ಟಿಗೆ ಹೆಚ್ಚಳ ಮಾಡಲಾ ಗಿದೆ ಎಂದರು. ಈ ಬಾರಿ ಅತಿವೃಷ್ಟಿಯಿಂದ ಆಗಿರುವ ನಷ್ಟ ಎಷ್ಟು ಅನ್ನುವುದನ್ನು ಅಂದಾಜಿ ಸಲಾಗುತ್ತಿದ್ದು ಅದರ ವಿವರ ಬಂದ ಕೂಡಲೇ ಪರಿಹಾರ ನೀಡುವಂತೆ ಕೋರಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.

ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿದಂತೆ ಪರಿಹಾರ ನೀಡುವಾಗ ಮಾರ್ಗಸೂಚಿಗಿಂತ ಹೆಚ್ಚಿನ ಹಣ ವನ್ನು ಕಳೆದೆರಡು ವರ್ಷಗಳಲ್ಲಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಕಳೆದ ವರ್ಷವೊಂದರಲ್ಲೇ ಒಂದು ಸಾವಿರ ಕೋಟಿ ರೂಪಾಯಿಗಳನ್ನು ಹೆಚ್ಚು ವರಿಯಾಗಿ ಬಿಡುಗಡೆ ಮಾಡಿದೆ ಎಂದರು.

ಕಳೆದ ಸಾಲಿಗೆ ಸಂಬಂಧಿಸಿದಂತೆ 2445 ಕೋಟಿ ರೂಪಾಯಿಗಳನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದು, ನಾವು ಕೂಡ ದೇಶದ ಎಲ್ಲ ರಾಜ್ಯಗಳಿ ಗಿಂತ ಹೆಚ್ಚು ಪ್ರಮಾಣದ ಪರಿಹಾರವನ್ನು ಸಂತ್ರಸ್ತರಿಗೆ ನೀಡುತ್ತೇವೆ ಎಂದು ಕಂದಾಯ ಸಚಿವರು ಸ್ಪಷ್ಟ ಪಡಿಸಿದರು. ಅತಿವೃಷ್ಟಿಗೆ ಸಂಬಂಧಿಸಿದ ಪರಿಹಾರ ಕಾರ್ಯಗಳಿಗೆ ಹಣದ ಕೊರತೆ ಇಲ್ಲ ಎಂದು ಸ್ಪಷ್ಟಪಡಿಸಿದ ಅವರು, ಈ ಸಂಬಂಧ ಇರುವ ಜಿಲ್ಲಾಧಿಕಾರಿಗಳ ನಿಧಿಯಲ್ಲಿ 857 ಕೋಟಿ ರೂ. ಉಳಿದುಕೊಂಡಿದೆ ಎಂದರು. ಜಿಲ್ಲಾಧಿಕಾರಿಗಳ ನಿಧಿಗೆ ಹಣ ಪಡೆಯಲು ಹಿಂದಿನಂತೆ ಸರ್ಕಾರಕ್ಕೆ ಮನವಿ ಸಲ್ಲಿಸಬೇಕಿಲ್ಲ.

ಬದಲಿಗೆ ಸರ್ಕಾರವೇ ಮುಂಚಿತವಾಗಿ ಜಿಲ್ಲಾಧಿಕಾರಿಗಳ ನಿಧಿಗೆ ಹಣ ಬಿಡುಗಡೆ ಮಾಡುತ್ತಿದೆ ಎಂದು ಅವರು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಅರವತ್ತು ವರ್ಷಗಳ ಹಿಂದೆ ಕೆಆರ್‍ಎಸ್ ಅಣೆಕಟ್ಟು ಕಟ್ಟಲು ರಾಜ್ಯಕ್ಕೆ ಬಂದ ಏಳುನೂರಕ್ಕೂ ಹೆಚ್ಚು ಮಂದಿ ಶ್ರೀರಂಗಪಟ್ಟಣ ತಾಲೂಕಿನಲ್ಲಿದ್ದು ಅವರು ಹಾಲಿ ವಾಸವಾಗಿರುವ ಭೂಮಿಯ ಹಕ್ಕು ಪತ್ರ ನೀಡಲು ತೀರ್ಮಾನಿಸಲಾಗಿದೆ ಎಂದು ಹೇಳಿದರು. ಕೆಆರ್‍ಎಸ್ ಅಣೆಕಟ್ಟು ಕಟ್ಟಲೆಂದು ಬಂದವರು ಇಲ್ಲೇ ಉಳಿದುಕೊಂಡರೂ ಅವರನ್ನು ಯಾರೂ ಕೇಳಿರಲಿಲ್ಲ. ಆದರೆ ಅಂತಹ 747 ಮಂದಿಯನ್ನು ಗುರುತಿಸಿ ನೆಲೆ ಒದಗಿಸಲು ಸರ್ಕಾರ ತೀರ್ಮಾನಿಸಿತು ಎಂದರು.

Translate »