ಚಾಮರಾಜನಗರ, ನ.3- ತಾಲೂಕಿನ ಅಮಚ ವಾಡಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ 5 ಕೆರೆಗಳಿಗೆ ನೀರು ತುಂಬಿಸದೆ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ಮಲತಾಯಿ ಧೋರಣೆ ಮಾಡುತ್ತಿದ್ದಾರೆ ಎಂದು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶಶಿಕಲಾ ಸೋಮಲಿಂಗಪ್ಪ ದೂರಿದರು. ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಿಲಗೆರೆ ಕೆರೆ, ನರಸಮಂಗಲ ಕೆರೆ, ದೊಡ್ಡಕೆರೆ, ಮೇಲೂರು ಕೆರೆ, ಮೂರು ತೂಬಿನ ಕೆರೆ, ಎಣ್ಣೆಹೊಳೆ ಕೆರೆಗಳಿಗೆ ನೀರು ಬಿಡದೆ ವಡ್ಡಗೆರೆ ಕೆರೆಗೆ ಬಿಟ್ಟಿದ್ದಾರೆ. ಅಲ್ಲದೇ…
ಗ್ರಾಪಂ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಶ್ರಮಿಸಿ
November 4, 2020ಗುಂಡ್ಲುಪೇಟೆ, ನ.3(ಸೋಮ್.ಜಿ)- ಕಾಂಗ್ರೆಸ್ ಕಾರ್ಯ ಕರ್ತರು ಮತ್ತು ಮುಖಂಡರು ಒಗ್ಗಟ್ಟಿನಿಂದ ಬಿಜೆಪಿ ಸರ್ಕಾರದ ವೈಫÀಲ್ಯ ಗಳು ಹಾಗೂ ಕಾಂಗ್ರೆಸ್ ಅವಧಿಯಲ್ಲಿ ಕೈಗೊಂಡ ಅಭಿವೃದ್ಧಿಗಳ ಬಗ್ಗೆ ಜನತೆಗೆ ಮನವರಿಕೆ ಮಾಡುವ ಮೂಲಕ ಗ್ರಾಪಂ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನವನ್ನು ಪಡೆಯಲು ಶ್ರಮಿಸಬೇಕು ಎಂದು ಯುವ ಕಾಂಗ್ರೆಸ್ ಮುಖಂಡ ಹೆಚ್.ಎಂ.ಗಣೇಶ್‍ಪ್ರಸಾದ್ ಹೇಳಿದರು. ತಾಲೂಕಿನ ಹಾಲಹಳ್ಳಿ ಗ್ರಾಮದಲ್ಲಿ ಬೇಗೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಒಬ್ಬರಿಗೂ ಉದ್ಯೋಗ ನೀಡದೆ ಸುಳ್ಳು…
ಗುಂಡ್ಲುಪೇಟೆಯಲ್ಲಿ ಜ್ಞಾನ ಸೂರ್ಯ ಆಧ್ಯಾತ್ಮಿಕ ಭವನ ಲೋಕಾರ್ಪಣೆ
November 4, 2020ಗುಂಡ್ಲುಪೇಟೆ, ನ.3- ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯಾ ವಿಶ್ವವಿದ್ಯಾಲಯ ಆಧ್ಯಾತ್ಮಿಕ ಸೇವಾ ಕೇಂದ್ರದ ವತಿಯಿಂದ ಗುಂಡ್ಲುಪೇಟೆ ಪಟ್ಟಣದ ಶ್ವೇತಾದ್ರಿ ಲೇಔಟ್ ನಲ್ಲಿ ನಿರ್ಮಿಸÀಲಾಗಿರುವ ಜ್ಞಾನ ಸೂರ್ಯ ಆಧ್ಯಾತ್ಮಿಕ ಭವನವನ್ನು ಮೈಸೂರು ಉಪವಲಯ ಪ್ರಜಾಪಿತ ಬ್ರಹ್ಮ ಕುಮಾರಿ ಈಶ್ವರಿಯಾ ವಿಶ್ವವಿದ್ಯಾಲಯದ ಮುಖ್ಯ ಸಂಚಾ ಲಕರಾದ ರಾಜಯೋಗಿನಿ ಬಿ.ಕೆ.ಲಕ್ಷ್ಮೀಜಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಆಧ್ಯಾತ್ಮಿಕ ಮಾರ್ಗವು ಮನುಷ್ಯನನ್ನು ಜೀವನದ ಪರಮ ಗುರಿಯತ್ತ ಕೊಂಡೊ ಯ್ಯಲು ಇರುವಂತಹ ಉತ್ತಮ ದಾರಿಯಾಗಿದೆ. ಭೂಮಿ ಯಲ್ಲಿ ನಾವು ಜನಿಸಿರುವುದು ಮನುಷ್ಯರಾಗಲು ಎನ್ನುವ ದಾರ್ಶನಿಕರ ವಾಣಿಯಂತೆ…
ಕಿತ್ತೂರು ರಾಣಿ ಚೆನ್ನಮ್ಮ ಮಹಿಳೆಗೆ ಆದರ್ಶ ಜಿಪಂ ಅಧ್ಯಕ್ಷರಾದ ಎಂ.ಅಶ್ವಿನಿ ಅಭಿಮತ
October 24, 2020ಚಾಮರಾಜನಗರ, ಅ.23-ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಅವರು ತೋರಿದ ಧೈರ್ಯ, ಸಾಹಸ ಹಾಗೂ ಆತ್ಮವಿಶ್ವಾಸ ನಾಡಿನ ಪ್ರತಿಯೊಬ್ಬ ಮಹಿಳೆಗೂ ಆದರ್ಶ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕೆÀ್ಷ ಎಂ.ಅಶ್ವಿನಿ ಅಭಿಪ್ರಾಯಪಟ್ಟರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ಸರಳವಾಗಿ ಆಯೋಜಿಸಿದ್ದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ, ರಾಣಿ ಚೆನ್ನಮ್ಮ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ರಾಣಿ ಚೆನ್ನಮ್ಮ ಅವರು…
ರಾಮಸಮುದ್ರ ನಿವಾಸಿಗಳ ಪ್ರತಿಭಟನೆ
October 24, 2020ಚಾಮರಾಜನಗರ ಅ.23(ಎಸ್‍ಎಸ್)-ದಸರಾ ಆಚರಣೆ ಹಿನ್ನೆಲೆಯಲ್ಲಿ ನಗರದಲ್ಲಿ ಮಾಡಲಾಗಿರುವ ವಿದ್ಯುತ್ ದೀಪಾ ಲಂಕಾರದಲ್ಲಿ ರಾಮಸಮುದ್ರ ಬಡಾವಣೆ ನಿರ್ಲಕ್ಷ್ಯ ಖಂಡಿಸಿ ಹಾಗೂ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಮಸಮುದ್ರ ಅಭಿವೃದ್ಧಿ ಹೋರಾಟ ಸಮಿತಿಯಿಂದ ಗುರುವಾರ ಪ್ರತಿಭಟಿಸಲಾಯಿತು. ನೂತನವಾಗಿ ಅಸ್ಥಿತ್ವಕ್ಕೆ ಬಂದಿರುವ ರಾಮಸಮುದ್ರ ಅಭಿವೃದ್ಧಿ ಸಮಿತಿ ಆಶ್ರಯ ದಲ್ಲಿ ಬಡಾವಣೆಯ ಹಲವು ನಿವಾಸಿಗಳು ಬಡಾವಣೆಯ ಬಸವಭವನದ ಬಳಿ ಜಮಾ ಯಿಸಿದರು. ಬಳಿಕ ಮೆರವಣಿಗೆ ಮೂಲಕ ತರಳಿ ಜಿಲ್ಲಾಡಳಿತ ಆವರಣದಲ್ಲಿ ಪ್ರತಿಭ ಟಿಸಿದರು. ಮೆರವಣಿಗೆ ವೇಳೆ ನಗರಸಭೆ ಹಾಗೂ ಜಿಲ್ಲಾಡಳಿತ ವಿರುದ್ಧ ಘೋಷಣೆ…
ದೇವಾಲಯಗಳ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳಿಸಲು ಡಿಸಿ ಸೂಚನೆ
October 24, 2020ಚಾಮರಾಜನಗರ, ಅ.23-ಜಿಲ್ಲೆಯ ಪ್ರಸಿದ್ಧ ದೇವಾಲಯಗಳ ಬಾಕಿ ಅಭಿವೃದ್ಧಿ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅಧಿಕಾರಿಗಳಿಗೆ ಸೂಚಿಸಿದರು. ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಧಾರ್ಮಿಕ ಪರಿಷತ್ತು ರಚನೆಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಯಳಂದೂರು ತಾಲೂಕಿನ ಬಿಳಿಗಿರಿರಂಗನಾಥಸ್ವಾಮಿ ದೇವಾಲಯದ ಬ್ರಹ್ಮರಥ ನಿರ್ಮಾಣ ಹಾಗೂ ಬಿಳಿಗಿರಿ ಭವನ ವಸತಿ ಗೃಹ ಕಾಮಗಾರಿಯನ್ನು ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸಬೇಕು. ಕೊಳ್ಳೇಗಾಲ ತಾಲೂಕಿನ ಶಿವನಸಮುದ್ರದ ರಂಗನಾಥಸ್ವಾಮಿ ಮತ್ತು ಸಮೂಹ ದೇವಾಲಯಗಳ ಅಭಿವೃದ್ಧಿ ಹಾಗೂ ವಸತಿ ಗೃಹಗಳ ನಿರ್ಮಾಣ ಕಾಮಗಾರಿಗಳನ್ನು ತ್ವರಿತವಾಗಿ…
ಸುಳ್ವಾಡಿ ಕಿಚ್ಚುಗುತ್ ಮಾರಮ್ಮ ದೇವಾಲಯದಲ್ಲಿ ಪೂಜಾ ಕೈಂಕರ್ಯ ಆರಂಭ
October 22, 202022 ತಿಂಗಳು ಬಳಿಕ ಮಾರಮ್ಮನ ದರ್ಶನ ಹಸಿರು ತೋರಣಗಳಿಂದ ಕಂಗೊಳಿಸುತ್ತಿರುವ ದೇವಾಲಯ ಹನೂರು, ಅ.21(ಸೋಮು)- ತಾಲೂಕಿನ ಕಿಚ್ಚುಗುತ್ ಮಾರಮ್ಮ ದೇವಾಲಯ ಪುನಾರಂಭಕ್ಕೆ ಸಂಬಂಧಿಸಿದಂತೆ ಪಾಪ ಪ್ರಾಯಶ್ಚಿತ, ಹೋಮ, ಹವನ, ಕುಂಭಾಭಿಷೇಕ ಸೇರಿದಂತೆ 4 ದಿನಗಳ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯ ಗಳು ಬುಧವಾರ ಸಂಜೆ 5.30ರಿಂದ ಪ್ರಾರಂಭವಾಗಿದೆ. ಕಳೆದ 22 ತಿಂಗಳ ನಂತರ ವಿಷ ಪ್ರಸಾದ ದುರಂತದ ಬಳಿಕ ತಾಲೂಕಿನ ಸುಳವಾಡಿ ಕಿಚ್ಚುಗುತ್ತಿ ಮಾರಮ್ಮನ ದರ್ಶನಕ್ಕೆ ಇಂದಿನ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದೆ. ಮೊದಲ ದಿನದ ಧಾರ್ಮಿಕ…
ಗುಂಡ್ಲುಪೇಟೆ: ಜಿಟಿಟಿಸಿ ನೂತನ ಕಟ್ಟಡ ಉದ್ಘಾಟನೆ
October 22, 2020ಚಾಮರಾಜನಗರ, ಅ.21- ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಕೌಶಲಾಭಿವೃದ್ಧಿ ಇಲಾಖೆ ಆಶ್ರಯದಲ್ಲಿ ಗುಂಡ್ಲುಪೇಟೆಯ ದುಂದಾಸನಪುರದಲ್ಲಿರುವ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದ ತರಬೇತಿ ಮತ್ತು ಆಡಳಿತ ವಿಭಾಗದ ನೂತನ ಕಟ್ಟಡ ಉದ್ಘಾಟನೆ ಬುಧವಾರ ನೆರವೇರಿತು. ಉಪಮುಖ್ಯಮಂತ್ರಿಗಳು ಹಾಗೂ ಉನ್ನತ ಶಿಕ್ಷಣ, ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ, ಕೌಶಲಾಭಿವೃದ್ದಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ ಅವರು ವಚ್ರ್ಯುವಲ್ ಮೂಲಕ ಬೆಂಗಳೂರಿನಿಂದ ನೂತನ ಕಟ್ಟಡವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಗುಂಡ್ಲುಪೇಟೆಯ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ…
ಜನಪ್ರತಿನಿಧಿಗಳ ವಿರುದ್ಧ ಅವಹೇಳನಕಾರಿ ಫಲಕ ಅಳವಡಿಕೆ: ಕಾಂಗ್ರೆಸ್ ಪ್ರತಿಭಟನೆ
October 22, 2020ಕೊಳ್ಳೇಗಾಲ, ಅ.21(ನಾಗೇಂದ್ರ)- ತಾಲೂಕಿನ ಹಲವು ಗ್ರಾಮಗಳ ಮುಖ್ಯ ರಸ್ತೆಯ ಬದಿಯಲ್ಲಿ ಜನಪ್ರತಿನಿಧಿಗಳ ಕುರಿತು ಅವಹೇಳನಕಾರಿ ಫಲಕ ಅಳವಡಿಸಿರುವ ಕಿಡಿಗೇಡಿಗಳ ಬಂಧಿಸುವಂತೆ ಆಗ್ರಹಿಸಿ ಪಟ್ಟಣ ದಲ್ಲಿ ಕಾಂಗ್ರೆಸ್ ಮುಖಂಡರು ಪ್ರತಿಭಟಿಸಿದರು. ಪಟ್ಟಣದ ನಾಗಪ್ಪ ವೃತ್ತದ ಬಳಿ ಸಮಾ ವೇಶಗೊಂಡ ಪ್ರತಿಭಟನಾಕಾರರು, ಫಲಕ ಅಳವಡಿಸಿರುವವರು ಹಾಗೂ ಫಲಕ ನಿರ್ಮಿಸಿದವರ ವಿರುದ್ಧ ಕ್ರಮ ಕೈಗೊಳ್ಳ ಬೇಕು ಎಂದು ಘೋಷಣೆ ಕೂಗಿ, ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಗ್ರಾಮಾಂತರ ಠಾಣೆಯಲ್ಲಿ ಫಲಕ ಅಳವಡಿಸಿರುವವರ ವಿರುದ್ಧ ಕ್ರಮ ಕೈಗೊಳ್ಳ ಬೇಕು ಎಂದು…
ಸಂಚಾರಿ ನಿಯಮ ಉಲ್ಲಂಘಿಸಿದ ಯುವಕನ ಮೇಲೆ ಪೇದೆಯಿಂದ ಹಲ್ಲೆ ಪೇದೆ ವಿರುದ್ಧ ಸಂಬಂಧಿಕರ ಪ್ರತಿಭಟನೆ
October 22, 2020ಕೊಳ್ಳೇಗಾಲ, ಅ.21(ನಾಗೇಂದ್ರ)- ಸಂಚಾರಿ ನಿಯಮವನ್ನು ಉಲ್ಲಂಘಿಸಿದ ಯುವಕನ ಮೇಲೆ ಪೊಲೀಸ್ ಪೇದೆ ಯೊಬ್ಬರು ಹಲ್ಲೆ ನಡೆಸಿದ್ದು, ಇದನ್ನು ಖಂಡಿಸಿ ಯುವಕನ ಸಂಬಂಧಿಕರು, ಸ್ನೇಹಿತರು ಪಟ್ಟಣದ ಗ್ರಾಮಾಂತರ ಠಾಣೆಯ ಮುಂಭಾಗ ಬುಧವಾರ ಪ್ರತಿಭಟನೆ ನಡೆಸಿದರು. ಘಟನೆಯ ವಿವರ: ನಗರದ ನಾಗಪ್ಪ ವೃತ್ತದ ಬಳಿ ಸಂಚಾರಿ ನಿಯಮ ಉಲ್ಲಂ ಘಿಸುವವರನ್ನು ತಡೆದು ಪೊಲೀಸರು ದಂಡ ವಿಧಿಸುತ್ತಿದ್ದರು. ಈ ವೇಳೆ ಮುಡು ಗುಂಡ ಗ್ರಾಮದ ಯುವಕ ಮಲ್ಲೇಶ್ ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸಿಕೊಂಡು ಬರು ತ್ತಿರುವುದನ್ನು ಕಂಡ ಪೇದೆಯೊಬ್ಬರು ಆತನನ್ನು ತಡೆದು…