ಚಾಮರಾಜನಗರ, ಏ.19- ಜಿಲ್ಲೆಯ ಎಲ್ಲಾ 7 ಮಂಡಲಗಳ ಕಾರ್ಯಕರ್ತರು, ಮುಖಂಡರು, ಪದಾಧಿಕಾರಿಗಳು ಜಿಲ್ಲಾ ದ್ಯಂತ ಸಾವಿರಾರು ಬಡಕುಟುಂಬಗಳಿಗೆ ಆಹಾರ ಪೊಟ್ಟಣ ಹಾಗೂ ಪಡಿತರ ಕಿಟ್ ಗಳನ್ನು ವಿತರಿಸಿದುದಾಗಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಗಲ ಶಿವ ಕುಮಾರ್ ತಿಳಿಸಿದ್ದಾರೆ. ಲಾಕ್‍ಡೌನ್ ಆದ ದಿನದಿಂದ ಏ.17 ರವರೆಗೂ ಚಾಮ ರಾಜನಗರ, ಗುಂಡ್ಲುಪೇಟೆ, ಯಳಂ ದೂರು, ಕೊಳ್ಳೇಗಾಲ, ಹನೂರು ತಾಲೂಕಿ ನಾದ್ಯಂತ 30 ಸಾವಿರಕ್ಕೂ ಹೆಚ್ಚು ಆಹಾರ ಪೊಟ್ಟಣ, 10 ಸಾವಿರಕ್ಕೂ ಹೆಚ್ಚು ಪಡಿತರ ಕಿಟ್, 18 ಸಾವಿರಕ್ಕೂ ಹೆಚ್ಚು…
ಕೆಂದಾರೆ ಹಳ್ಳದಲ್ಲಿ ಆನೆ ಕಳೇಬರ ಪತ್ತೆ
April 19, 2020ಹನೂರು,ಏ.18-ಮಲೆ ಮಹದೇಶ್ವರ ವನ್ಯಜೀವಿ ವಲಯ ವಿಭಾಗದ ಪೊನ್ನಾಚಿ ಅರಣ್ಯ ಪ್ರದೇಶ ಮರೂರು ಬೀಟ್‍ನ ಕೆಂದಾರೆ ಹಳ್ಳದಲ್ಲಿ ಆನೆಯ ಕಳೇಬರ ಪತ್ತೆಯಾಗಿದೆ. ಕಳೆದೊಂದು ತಿಂಗಳ ಅವಧಿಯಲ್ಲಿ ಈ ಭಾಗ ದಲ್ಲಿ 5 ಆನೆಗಳ ಕಳೇಬರ ಪತ್ತೆಯಾಗಿದ್ದು, ಆನೆಗಳು ನೀರು, ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದು ಅಕ್ರಮ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪುತ್ತಿರುವುದು ಪ್ರಾಣಿ ಪ್ರಿಯರ ಆತಂಕಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಕಾಡಾನೆಗಳು ಮೇವು, ನೀರಿನಿಂದ ಮೃತಪಡುತ್ತಿವೆಯೇ ಅಥವಾ ಬೇರೆ ಇನ್ಯಾವ ಕಾರಣಗಳಿಂದ ಮೃತಪಡುತ್ತಿವೆ ಎಂಬುದನ್ನು ಅರಿತು ಕ್ರಮ ಕೈಗೊಳ್ಳಬೇಕಾಗಿದೆ ಎಂದು…
ಇಂದಿನಿಂದ ಮನೆಗೆ ಔಷಧ ತಲುಪಿಸುವ ‘ಔಷಧ ಮಿತ್ರ’ ಸೇವೆ ಆರಂಭ
April 18, 2020ಚಾಮರಾಜನಗರ, ಏ.17- ಔಷಧಿ ಅಂಗಡಿಗಳಲ್ಲಿ ಜನಸಂದಣಿ ಕಡಿಮೆ ಮಾಡುವ ಉದ್ದೇಶದಿಂದ ಜಿಲ್ಲೆಯಲ್ಲಿ ಇಂದಿನಿಂದ (ಏ.18) ನಾಗರಿಕರ ಮನೆ ಬಾಗಿಲಿಗೆ ಔಷಧವನ್ನು ಯಾವುದೇ ಸೇವಾ ಶುಲ್ಕವಿಲ್ಲದೇ ತಲುಪಿಸುವ `ಔಷಧ ಮಿತ್ರ’ ಸೇವೆ ಆರಂಭವಾಗಲಿದೆ ಎಂದು ಜಿಲ್ಲಾಧಿಕಾರಿ ಎಂ.ಆರ್.ರವಿ ತಿಳಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ನಗರ, ಪಟ್ಟಣ ಪ್ರದೇಶಗಳ ಔಷಧಿ ಅಂಗಡಿಗಳಲ್ಲಿ ಹೆಚ್ಚಿನ ಜನಸಂದಣಿ ಗಮನಿಸಲಾಗಿದೆ. ಹೀಗಾಗಿ ಲಾಕ್‍ಡೌನ್ ವೇಳೆ ಜನರ ಸಂಚಾರ ಕಡಿಮೆ ಮಾಡುವ ಹಾಗೂ ಅನಾರೋಗ್ಯದಿಂದ…
ವಿವಿಧ ಚೆಕ್‍ಪೋಸ್ಟ್‍ಗಳಿಗೆ ಮಧ್ಯರಾತ್ರಿ ಡಿಸಿ ದಿಢೀರ್ ಭೇಟಿ, ಪರಿಶೀಲನೆ
April 18, 2020ಚಾಮರಾಜನಗರ, ಏ.17- ಕೋವಿಡ್-19 ಮುಂಜಾಗ್ರತಾ ಕ್ರಮಗಳ ಹಿನ್ನೆಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಜಿಲ್ಲೆಯ ವಿವಿಧ ಚೆಕ್‍ಪೋಸ್ಟ್‍ಗಳಿಗೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಗುರುವಾರ ಮಧ್ಯರಾತ್ರಿ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು. ಜಿಲ್ಲಾ ಎಸ್ಪಿ ಹೆಚ್.ಡಿ.ಆನಂದಕುಮಾರ್ ಅವರೊಂದಿಗೆ ಮಧ್ಯ ರಾತ್ರಿ ಚಾಮರಾಜನಗರ ತಾಲೂಕಿನ ಬಾಣಹಳ್ಳಿ ಚೆಕ್‍ಪೋಸ್ಟ್, ಕೊಳ್ಳೇಗಾಲ ತಾಲೂಕಿನ ಟಗರಪುರ ಹಾಗೂ ಸತ್ತೇಗಾಲ ಚೆಕ್ ಪೋಸ್ಟ್‍ಗಳಿಗೆ ಭೇಟಿ ನೀಡಿ ನಿರ್ವಹಿಸಲಾಗುತ್ತಿರುವ ಕಾರ್ಯ ವೀಕ್ಷಿಸಿದರು. ಅಂತರ ಜಿಲ್ಲೆ ಸಂಪರ್ಕಿಸುವ ಪ್ರಮುಖ ಚೆಕ್ ಪೋಸ್ಟ್‍ಗಳಿಗೆ ಯಾವ ಸುಳಿವು ನೀಡದೇ ಅನಿರೀಕ್ಷಿತವಾಗಿ ಮಧ್ಯರಾತ್ರಿ ಜಿಲ್ಲಾಧಿಕಾರಿ ಎಂ.ಆರ್.ರವಿ ಅವರು…
ಇಂದಿನಿಂದ ಮಕ್ಕಳ, ವಯೋವೃದ್ಧರ ಆರೋಗ್ಯ ಸಮೀಕ್ಷೆ
April 14, 2020ಚಾಮರಾಜನಗರ, ಏ.13- ಮಕ್ಕಳು, ವಯೋವೃದ್ಧರ ಆರೋಗ್ಯ, ಯೋಗಕ್ಷೇಮ ವಿಚಾರಿಸುವ ಸಲುವಾಗಿ ಜಿಲ್ಲೆಯ ಅಂಗನ ವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ಸಮೀಕ್ಷೆ ನಡೆ ಸುವ ಕಾರ್ಯ ಮಂಗಳವಾರದಿಂದ (ನಾಳೆ) ಆರಂಭವಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ. ಎಂ.ಆರ್.ರವಿ ತಿಳಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಆರೋಗ್ಯ ಕಾಳಜಿಯಿಂದ 6 ತಿಂಗಳಿಂದ 10 ವರ್ಷದೊಳಗಿನ ಮಕ್ಕಳು ಹಾಗೂ 60 ವರ್ಷ ಮೇಲ್ಪಟ್ಟವರ ವಿವರ ಪಡೆಯಲಿದ್ದಾರೆ. ಅಲ್ಲದೆ ಅವರ ಆರೋಗ್ಯದ…
ಬಿಳಿಗಿರಿರಂಗನಬೆಟ್ಟದ ಗಿರಿಜನ ಪೋಡುಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್‍ಕುಮಾರ್ ಭೇಟಿ
April 13, 2020ಕೋವಿಡ್-19, ಬರ ಪರಿಸ್ಥಿತಿ ನಿರ್ವಹಣೆ ಕುರಿತು ಸಭೆ ಚಾಮರಾಜನಗರ, ಏ.12- ಕೋವಿಡ್ -19 ಮುಂಜಾಗ್ರತಾ ಕ್ರಮಗಳ ಹಿನ್ನೆಲೆ ಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಸುರೇಶ್‍ಕುಮಾರ್ ಭಾನುವಾರ ಬಿಳಿಗಿರಿ ರಂಗನಬೆಟ್ಟ ವ್ಯಾಪ್ತಿಯ ವಿವಿಧ ಪೋಡು ಗಳಿಗೆ ಭೇಟಿ ನೀಡಿ ಅರಣ್ಯವಾಸಿಗಳಿಗೆ ತಲುಪಿರುವ ಸೌಲಭ್ಯಗಳನ್ನು ಪರಿಶೀಲಿಸಿದರು. ಇಲ್ಲಿನ ಬಂಗ್ಲೆ ಪೋಡಿಗೆ ಮೊದಲು ಭೇಟಿ ನೀಡಿದ ಸಚಿವರು, ಮನೆ ಮನೆಗೆ ತೆರಳಿ ನಿಮಗೆ ಪಡಿತರ ತಲುಪಿದೆಯೇ? ಪೌಷ್ಟಿಕ ಆಹಾರ ಸಿಗುತ್ತಿದೆಯೇ? ಎಂದು ಪ್ರಶ್ನಿಸಿದರು. ಈ ವೇಳೆ ಸಚಿವರೊಂದಿಗೆ ಮಾತನಾಡಿದ ಅರಣ್ಯವಾಸಿಗಳು,…
ಕೊರೊನಾ ಸಂಬಂಧ ಸುಳ್ಳು ಸುದ್ದಿ: ಮೂವರ ವಿರುದ್ಧ ಪ್ರಕರಣ ದಾಖಲು ಇಬ್ಬರ ಬಂಧನ
April 13, 2020ಚಾಮರಾಜನಗರ, ಏ.12(ಎಸ್‍ಎಸ್)- ಜಿಲ್ಲೆಯಲ್ಲಿ ಮೊದಲ ಕೊರೊನಾ ಪಾಸಿಟಿವ್ ಕೇಸ್ ಪತ್ತೆಯಾಗಿದೆ ಎಂದು ಫೇಸ್‍ಬುಕ್ ಹಾಗೂ ವಾಟ್ಸ್‍ಪ್‍ನಲ್ಲಿ ಸುಳ್ಳು ಸುದ್ದಿ ಹರಡಿದ್ದ ಮೂವರ ವಿರುದ್ಧ ತೆರಕಣಾಂಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿಯ ವಿಜಯ ರುದ್ರೇಶ್, ಶಿಂಡನಪುರ ಗ್ರಾಮದ ಮಹದೇವಸ್ವಾಮಿ ಬಂಧಿತ ಆರೋಪಿಗಳು. ಪ್ರಕರಣದ ಮತ್ತೋರ್ವ ಆರೋಪಿ ಶಿಂಡನಪುರ ಚಂದ್ರು ನಾಪತ್ತೆಯಾಗಿದ್ದಾನೆ. ಚಾಮರಾಜನಗರದಲ್ಲಿ ಮೊದಲ ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗಿದೆ. ನಂಜನಗೂಡಿನ ಜ್ಯುಬಿಲೆಂಟ್ ಕಾರ್ಖಾನೆಯ ಉದ್ಯೋಗಿಯಿಂದ ಕೊರೊನಾ ಜಿಲ್ಲೆಯಲ್ಲಿ ಖಾತೆ ತೆರೆದಿದೆ…
ಕಳ್ಳಭಟ್ಟಿ ತಯಾರಿಸುತ್ತಿದ್ದ ಮೂವರ ಬಂಧನ
April 13, 2020ಹನೂರು, ಏ.12- ಕಳ್ಳಬಟ್ಟಿ ತಯಾರಿಸುತ್ತಿದ್ದ ಮೂವರನ್ನು ರಾಮಾಪುರ ಪೊಲೀಸರು ಬಂಧಿಸಿದ್ದಾರೆ.ತಾಲೂಕಿನ ಮಾರ್ಟಳ್ಳಿ ಗ್ರಾಪಂ ವ್ಯಾಪ್ತಿಯ ಕೋಟೆ ಪೋದೆ ನಿವಾಸಿಗಳಾದ ರವಿ, ಚಂದ್ರನಾಯ್ಕ ಮತ್ತು ರಾಜೇಂದ್ರ ನಾಯ್ಕ ಬಂಧಿತ ಆರೋಪಿಗಳು. ವಿವರ: ಕೋಟೆಪೋದೆ ಗ್ರಾಮದ ಮನೆಗಳಲ್ಲಿ ಕಳ್ಳಬಟ್ಟಿ ತಯಾರಿಸುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ಇನ್ಸ್‍ಪೆಕ್ಟರ್ ಮನೋಜ್‍ಕುಮಾರ್ ಹಾಗೂ ಸಿಬ್ಬಂದಿಗಳಾದ ನಂಜುಂಡ, ಶಿವರಾಜು, ನಾಗೇಂದ್ರ, ಮಾದೇಶ್, ಸುರೇಶ್, ಪೇದೆಗಳಾದ ರವಿ, ರಘು, ರವಿಪ್ರಸಾದ್, ಬಸವರಾಜು, ಸಂತೋಷ್, ಸೋಮು ಇನ್ನಿತರರು ದಾಳಿ ನಡೆಸಿ 20 ಲೀ. ಕಳ್ಳಬಟ್ಟಿ ವಶಕ್ಕೆ ಪಡೆದು…
ಜಿಲ್ಲೆಯ ವಿವಿಧೆಡೆಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಭೇಟಿ: ಕೊರೊನಾ ತಡೆ ಮುಂಜಾಗ್ರತಾ ಕ್ರಮ ಪರಿಶೀಲನೆ
April 10, 2020ಚಾಮರಾಜನಗರ, ಏ.9- ಜಿಲ್ಲೆಯ ವಿವಿಧ ಸ್ಥಳಗಳಿಗೆ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರು ಹಾಗೂ ಚಾ.ನಗರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಬಿ.ಬಿ.ಕಾವೇರಿ ಗುರುವಾರ ಭೇಟಿ ನೀಡಿ ಕೊರೊನಾ ವೈರಸ್ ತಡೆ ಹಿನ್ನೆಲೆಯಲ್ಲಿ ಕೈಗೊಳ್ಳಲಾ ಗಿರುವ ಮುಂಜಾಗ್ರತಾ ಕ್ರಮಗಳನ್ನು ಪರಿಶೀಲಿಸಿದರು. ಗುಂಡ್ಲುಪೇಟೆ ತಾಲೂಕಿನ ಮೂಲೆಹೊಳೆ ಚೆಕ್‍ಪೋಸ್ಟ್, ಕೆಕ್ಕನಹಳ್ಳ ಹಾಗೂ ಮೇಲುಕಾಮನ ಹಳ್ಳಿ ಚೆಕ್ ಪೋಸ್ಟ್‍ಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಅವರು, ಅಗತ್ಯ ವಸ್ತುಗಳ ಸಾಗಣೆ, ವಾಹನಗಳಿಗೆ ಮಾಡಲಾಗುತ್ತಿರುವ ಸ್ಯಾನಿಟೈಜೇಷನ್ ಸೇರಿದಂತೆ ಇತರೆ ಮಾಹಿತಿ ಪಡೆದರು. ಅಲ್ಲದೇ ಬಂಡೀಪುರ ಹುಲಿ ಯೋಜನೆ ನಿರ್ದೇಶಕ…
ಸಿಗರೇಟ್ ಸಾಗಣೆ: ಇಬ್ಬರ ಬಂಧನ 20 ಲಕ್ಷ ರೂ. ಮೌಲ್ಯದ ಸಿಗರೇಟ್ ವಶ
April 10, 2020ಚಾಮರಾಜನಗರ, ಏ.9 (ಎಸ್‍ಎಸ್)- ತರಕಾರಿ ಸಾಗಿಸುವ ನೆಪದಲ್ಲಿ ಲಕ್ಷಾಂತರ ರೂ. ಮೌಲ್ಯದ ಸಿಗರೇಟ್ ಸಾಗಿ ಸುತ್ತಿದ್ದ ಇಬ್ಬರು ಆರೋಪಿ ಗಳನ್ನು ರಾಮಸಮುದ್ರ ಪೊಲೀಸರು ಬಂಧಿಸಿ, 20 ಲಕ್ಷ ರೂ.ಮೌಲ್ಯದ ಸಿಗರೇಟ್ ವಶ ಪಡಿಸಿಕೊಂಡಿದ್ದಾರೆ. ತಮಿಳು ನಾಡಿನ ಕೊಯಮತ್ತೂರಿನ ಭರತ್ ಹಾಗೂ ಗಣಪತಿ ಬಂಧಿತ ಆರೋಪಿಗಳು. ವಿವರ: ತಮಿಳುನಾಡು ಮೂಲದ ಭರತ್ ಹಾಗೂ ಗಣಪತಿ ಕೊಯಮತ್ತೂರಿನಿಂದ ಮೈಸೂರಿಗೆ ಬೊಲೆರೋ (ಟಿಎನ್ 66, ವೈ-2039) ವಾಹನದಲ್ಲಿ ತರಕಾರಿ ಸಾಗಿಸಲು ಅನುಮತಿ ಪಡೆದಿದ್ದರು. ಆದರೆ ಗುರುವಾರ ತರಕಾರಿ ಜೊತೆಗೆ ಸಿಗರೇಟ್ ಬಾಕ್ಸ್‍ಗಳೊಂದಿಗೆ…