ಕಳ್ಳಭಟ್ಟಿ ತಯಾರಿಸುತ್ತಿದ್ದ ಮೂವರ ಬಂಧನ
ಚಾಮರಾಜನಗರ

ಕಳ್ಳಭಟ್ಟಿ ತಯಾರಿಸುತ್ತಿದ್ದ ಮೂವರ ಬಂಧನ

April 13, 2020

ಹನೂರು, ಏ.12- ಕಳ್ಳಬಟ್ಟಿ ತಯಾರಿಸುತ್ತಿದ್ದ ಮೂವರನ್ನು ರಾಮಾಪುರ ಪೊಲೀಸರು ಬಂಧಿಸಿದ್ದಾರೆ.ತಾಲೂಕಿನ ಮಾರ್ಟಳ್ಳಿ ಗ್ರಾಪಂ ವ್ಯಾಪ್ತಿಯ ಕೋಟೆ ಪೋದೆ ನಿವಾಸಿಗಳಾದ ರವಿ, ಚಂದ್ರನಾಯ್ಕ ಮತ್ತು ರಾಜೇಂದ್ರ ನಾಯ್ಕ ಬಂಧಿತ ಆರೋಪಿಗಳು.

ವಿವರ: ಕೋಟೆಪೋದೆ ಗ್ರಾಮದ ಮನೆಗಳಲ್ಲಿ ಕಳ್ಳಬಟ್ಟಿ ತಯಾರಿಸುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ಇನ್ಸ್‍ಪೆಕ್ಟರ್ ಮನೋಜ್‍ಕುಮಾರ್ ಹಾಗೂ ಸಿಬ್ಬಂದಿಗಳಾದ ನಂಜುಂಡ, ಶಿವರಾಜು, ನಾಗೇಂದ್ರ, ಮಾದೇಶ್, ಸುರೇಶ್, ಪೇದೆಗಳಾದ ರವಿ,  ರಘು, ರವಿಪ್ರಸಾದ್, ಬಸವರಾಜು, ಸಂತೋಷ್, ಸೋಮು ಇನ್ನಿತರರು ದಾಳಿ ನಡೆಸಿ 20 ಲೀ. ಕಳ್ಳಬಟ್ಟಿ ವಶಕ್ಕೆ ಪಡೆದು ಮೂವರ ಮೇಲೆ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Translate »