ಮಂಡ್ಯ ಜಿಲ್ಲಾಡಳಿತದಿಂದ ಆನ್‍ಲೈನ್ ಎಂ-ಪಾಸ್ ಆ್ಯಪ್ ಬಿಡುಗಡೆ
ಮಂಡ್ಯ

ಮಂಡ್ಯ ಜಿಲ್ಲಾಡಳಿತದಿಂದ ಆನ್‍ಲೈನ್ ಎಂ-ಪಾಸ್ ಆ್ಯಪ್ ಬಿಡುಗಡೆ

April 13, 2020
  • ತುರ್ತು ಸಂದರ್ಭಗಳಲ್ಲಿ ಬಳಸಿಕೊಳ್ಳಲು ಸಾರ್ವಜನಿಕರಿಗೆ ಡಿಸಿ ಸೂಚನೆ

ಮಂಡ್ಯ, ಏ.12(ನಾಗಯ್ಯ)- ಸಾರ್ವಜನಿಕರು ತುರ್ತು ಸಂದರ್ಭಗಳಲ್ಲಿ ಬಳಸಲು ಅನುಕೂಲವಾಗುವಂತೆ ಎಂ-ಪಾಸ್ ಆ್ಯಪ್ ಅನ್ನು ಭಾನುವಾರ ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಬಿಡುಗಡೆ ಮಾಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿಂದು ಆ್ಯಪ್ ಬಿಡುಗಡೆ ಮಾಡಿ ಮಾತನಾಡಿದ ಅವರು, ಸರ್ಕಾರದ ಸೂಚನೆಯಂತೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಈ ಆ್ಯಪ್ ಅನ್ನು ಅಭಿವೃದ್ಧಿ ಪಡಿಸಿದ್ದು, ಈ ಆ್ಯಪ್ ಮೂಲಕ ತುರ್ತು ಸಂದರ್ಭಗಳಲ್ಲಿ ಬಳಸಲು ಆನ್‍ಲೈನ್ ಮೂಲಕ ಎಂ-ಪಾಸ್ ಅನ್ನು ವಿತರಿಸಲಾಗುವುದು ಎಂದರು.

ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಅಥವಾ ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಆರೋಗ್ಯ ಸಮಸ್ಯೆ, ಸಾವು, ಅಪಘಾತ ಇನ್ನಿತರೆ ತುರ್ತು ಸಂದರ್ಭ ಗಳಲ್ಲಿ ಸಾರ್ವಜನಿಕರು ಸಂಚರಿಸಬೇಕಾ ಗುತ್ತದೆ. ಹೀಗಾಗಿ ಮಾನವೀಯ ಸ್ಪಂದನೆ ಯನ್ನಿಟ್ಟುಕೊಂಡು ಈ ಪಾಸ್ ಅನ್ನು ವಿತರಿಸಲಾಗುತ್ತಿದೆ ಎಂದರು.

ಆನ್‍ಲೈನ್ ಮೂಲಕ ಈ ಪಾಸ್ ಅನ್ನು ಪಡೆದುಕೊಳ್ಳಬಹುದಾಗಿದೆ. ಯಾವುದೇ ಜೆರಾಕ್ಸ್ ಅಂಗಡಿಗೆ ಹೋಗ ಬೇಕಾದ ಅವಶ್ಯಕತೆಯಿಲ್ಲ. ಮೊಬೈಲ್ ನಲ್ಲಿಯೇ ಇದನ್ನು ಡೌನ್‍ಲೋಡ್ ಮಾಡಿ ಕೊಂಡು ಬಳಸಬಹುದಾಗಿದೆ. ತುರ್ತು ಸಂದರ್ಭ ಬಿಟ್ಟು ಅನಗತ್ಯವಾಗಿ ಈ ಪಾಸ್ ಅನ್ನು ಬಳಸಿಕೊಳ್ಳಬಾರದು ಎಂದರು.

ಜಿಪಂ ಸಿಇಓ ಕೆ.ಯಾಲಕ್ಕಿಗೌಡ ಮಾತ ನಾಡಿ, ಸಾರ್ವಜನಿಕರು ಅನಗತ್ಯವಾಗಿ ಓಡಾಡುವುದನ್ನು ತಪ್ಪಿಸಲು ಈ ಎಂ-ಪಾಸ್ ವ್ಯವಸ್ಥೆ ಮಾಡಲಾಗಿದೆ. ತುರ್ತು ಸಂದರ್ಭಗಳಲ್ಲಿ ಮಾತ್ರ ಈ ಪಾಸ್ ಅನ್ನು ಬಳಸಿಕೊಂಡು ಸಾರ್ವಜನಿಕರು ಸಹಕರಿಸಬೇಕೆಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪರಶು ರಾಂ ಆ್ಯಪ್ ಬಗ್ಗೆ ಮಾಹಿತಿ ನೀಡಿ, ಜಿಲ್ಲಾ ಪೊಲೀಸ್ ವೆಬ್‍ಸೈಟ್ ಹಾಗೂ ಎಸ್‍ಪಿ ಬ್ಲಾಗ್‍ನಲ್ಲೂ ಈ ಆ್ಯಪ್ ಬಿಡುಗಡೆಯಾಗು ತ್ತಿದೆ. ಅಲ್ಲದೆ ಗೂಗಲ್ ಪ್ಲೇ ಸ್ಟೋರ್‍ನಲ್ಲೂ ಕೂಡ ಲಭ್ಯವಿರಲಿದೆ. ಸಾರ್ವಜನಿಕರು ತಮ್ಮ ವೈಯಕ್ತಿಕ ಮಾಹಿತಿ, ಪಾಸ್‍ಗೆ ಬೇಕಾದ ಪೂರಕ ದಾಖಲಾತಿ, ಕೆವೈಸಿ ವಿವರಗಳನ್ನು ಅಪ್‍ಲೋಡ್ ಮಾಡಬೇಕು, ಇದೆಲ್ಲವನ್ನೂ ಪರಿಶೀಲಿಸಿ ಪಾಸ್ ನೀಡಲಾಗುವುದು ಎಂದರು.

ಒಂದು ವೇಳೆ ಪಾಸ್ ತಿರಸ್ಕøತಗೊಂಡರೆ ಅದಕ್ಕೆ ಕಾರಣವೂ ಸಹ ಇದೇ ಆ್ಯಪ್‍ನಲ್ಲಿ ಲಭ್ಯವಿದೆ. ಸಾರ್ವಜನಿಕರಿಗೆ ಈ ಆ್ಯಪ್ ಬಗ್ಗೆ ಏನಾದರೂ ಗೊಂದಲ ವಾದಲ್ಲಿ ತಮ್ಮ (ಎಸ್ಪಿ ಕಚೇರಿ) ಕಚೇರಿ ಯಲ್ಲಿಯೇ ಕಾರ್ಯ ನಿರ್ವಹಿಸುವ ಮಹದೇವ್ ಅವರನ್ನು ಆ್ಯಪ್‍ನಲ್ಲಿರುವ ದೂರವಾಣಿ ಸಂಖ್ಯೆ ಮೂಲಕ ಸಂಪರ್ಕಿ ಸಿದರೆ ಅವರು ಅಗತ್ಯ ಮಾಹಿತಿ ನೀಡು ತ್ತಾರೆ ಎಂದು ತಿಳಿಸಿದರು. ಈ ವೇಳೆ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ. ಶೋಭಾರಾಣಿ ಮತ್ತಿತರರು ಇದ್ದರು.

Translate »