ಸಿಗರೇಟ್ ಸಾಗಣೆ: ಇಬ್ಬರ ಬಂಧನ 20 ಲಕ್ಷ ರೂ. ಮೌಲ್ಯದ ಸಿಗರೇಟ್ ವಶ
ಚಾಮರಾಜನಗರ

ಸಿಗರೇಟ್ ಸಾಗಣೆ: ಇಬ್ಬರ ಬಂಧನ 20 ಲಕ್ಷ ರೂ. ಮೌಲ್ಯದ ಸಿಗರೇಟ್ ವಶ

April 10, 2020

ಚಾಮರಾಜನಗರ, ಏ.9 (ಎಸ್‍ಎಸ್)- ತರಕಾರಿ ಸಾಗಿಸುವ ನೆಪದಲ್ಲಿ ಲಕ್ಷಾಂತರ ರೂ. ಮೌಲ್ಯದ ಸಿಗರೇಟ್ ಸಾಗಿ ಸುತ್ತಿದ್ದ ಇಬ್ಬರು ಆರೋಪಿ ಗಳನ್ನು ರಾಮಸಮುದ್ರ ಪೊಲೀಸರು ಬಂಧಿಸಿ, 20 ಲಕ್ಷ ರೂ.ಮೌಲ್ಯದ ಸಿಗರೇಟ್ ವಶ ಪಡಿಸಿಕೊಂಡಿದ್ದಾರೆ. ತಮಿಳು ನಾಡಿನ ಕೊಯಮತ್ತೂರಿನ ಭರತ್ ಹಾಗೂ ಗಣಪತಿ ಬಂಧಿತ ಆರೋಪಿಗಳು.

ವಿವರ: ತಮಿಳುನಾಡು ಮೂಲದ ಭರತ್ ಹಾಗೂ ಗಣಪತಿ ಕೊಯಮತ್ತೂರಿನಿಂದ ಮೈಸೂರಿಗೆ ಬೊಲೆರೋ (ಟಿಎನ್ 66, ವೈ-2039) ವಾಹನದಲ್ಲಿ ತರಕಾರಿ ಸಾಗಿಸಲು ಅನುಮತಿ ಪಡೆದಿದ್ದರು. ಆದರೆ ಗುರುವಾರ ತರಕಾರಿ ಜೊತೆಗೆ ಸಿಗರೇಟ್ ಬಾಕ್ಸ್‍ಗಳೊಂದಿಗೆ ಆಗಮಿಸಿದ ಬೊಲೆರೋ ವಾಹನವನ್ನು ತಾಲೂಕಿನ ಪುಣಜನೂರು ಚೆಕ್‍ಪೋಸ್ಟ್‍ನಲ್ಲಿದ್ದ ಸಿಬ್ಬಂದಿ ಹಾಗೂ ಪೊಲೀಸರು ತೀವ್ರ ತಪಾಸಣೆಗೊಳಪಡಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ವೇಳೆ ಮೇಲ್ನೋಟಕ್ಕೆ ಸಿಗರೇಟ್ ಬಾಕ್ಸ್‍ಗಳ ಮೇಲೆ ಆರೋಪಿಗಳು ತರಕಾರಿಗಳನ್ನು ಹಾಕಿದ್ದರು. ಕೆಳಗಡೆ ಕಿಂಗ್ ಸಿಗರೇಟ್‍ನ ಬಾಕ್ಸ್‍ಗಳು ದೊರೆತಿವೆ. ತಕ್ಷಣ ವಾಹನದಲ್ಲಿದ್ದ ಭರತ್ ಹಾಗೂ ಗಣಪತಿಯನ್ನು ವಶಕ್ಕೆ ಪಡೆದು 20 ಲಕ್ಷ ರೂ. ಮೌಲ್ಯದ ಸಿಗರೇಟ್ ವಶಪಡಿಸಿಕೊಳ್ಳಲಾಗಿದೆ ಎಂದು ರಾಮಸಮುದ್ರ ಠಾಣೆ ಎಸ್‍ಐ ಸುನೀಲ್ `ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ. ಈ ಸಂಬಂಧ ದೂರು ದಾಖಲಿಸಿಕೊಂಡು ತನಿಖೆ ಮುಂದುವರೆಸಲಾಗಿದೆ ಎಂದು ತಿಳಿಸಿದ್ದಾರೆ.

Translate »