ರಾಜ್ಯದ 18 ಜಿಲ್ಲೆಯಲ್ಲಿ ಲಾಕ್‍ಡೌನ್ ಮುಂದುವರಿಕೆ ಅನಿವಾರ್ಯ
ಮೈಸೂರು

ರಾಜ್ಯದ 18 ಜಿಲ್ಲೆಯಲ್ಲಿ ಲಾಕ್‍ಡೌನ್ ಮುಂದುವರಿಕೆ ಅನಿವಾರ್ಯ

April 9, 2020

ಮೈಸೂರು, ಏ.8(ಎಂಕೆ)- ರಾಜ್ಯದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ರಾಜ್ಯದ 18 ಜಿಲ್ಲೆಗಳಲ್ಲಿ ಲಾಕ್‍ಡೌನ್ ಮುಂದುವರೆಸುವ ಅನಿವಾರ್ಯತೆ ಇದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಬಿ.ಶ್ರೀರಾಮುಲು ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಯಲ್ಲಿ ಕೊರೊನಾ (ಕೋವಿಡ್-19) ಸೋಂಕು ಕುರಿತು ಅಧಿಕಾರಿಗಳೊಂ ದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏ.14ರ ನಂತರ ಲಾಕ್‍ಡೌನ್ ಮುಂದುವರೆಸಬೇಕೋ ಅಥವಾ ಬೇಡವೇ ಎಂಬ ವಿಚಾರವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ವಿಪಕ್ಷ ನಾಯಕರ ಜೊತೆಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಚರ್ಚಿಸಿದ್ದು, ಏ.11ರಂದು ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು.

ಬೆಂಗಳೂರು, ಮೈಸೂರು, ಕಲಬುರ್ಗಿ ಜಿಲ್ಲೆಗಳನ್ನು ರೆಡ್‍ಝೋನ್ ಎಂದು ಘೋಷಣೆ ಮಾಡಿದ್ದೇವೆ. ಈ ಜಿಲ್ಲೆಗಳಲ್ಲಿ ಲಾಕ್‍ಡೌನ್ ತೆರವು ಮಾಡಲು ಸಾಧ್ಯವೇ ಇಲ್ಲ. ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆ ರಾಜ್ಯದ 18 ಜಿಲ್ಲೆಗಳಲ್ಲಿ ಲಾಕ್‍ಡೌನ್ ಮುಂದು ವರಿಯುವ ಅನಿವಾರ್ಯತೆ ಇದೆ. ಲಾಕ್‍ಡೌನ್ ವಿಸ್ತರಣೆ ಮಾಡ ಬೇಕೇ ಬೇಡವೇ ಎಂಬುದರ ಬಗ್ಗೆ ಮುಖ್ಯಮಂತ್ರಿಗಳ ಜೊತೆ ನಾಳಿನ ಸಚಿವ ಸಂಪುಟದಲ್ಲಿ ಸಮಗ್ರವಾಗಿ ಚರ್ಚಿಸುತ್ತೇವೆ ಎಂದರು.

ಬೆಂಗಳೂರಿನ ನಂತರ ಮೈಸೂರು ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ನಂಜನಗೂಡಿನ ಜುಬಿಲಂಟ್ ಕಾರ್ಖಾನೆಯಲ್ಲಿ 24 ಜನರಿಗೆ ಕೊರೊನಾ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, ಇದೊಂದು ಆಘಾತಕಾರಿ ವಿಚಾರವಾಗಿದೆ. ಈ ನಿಟ್ಟಿನಲ್ಲಿ ಜುಬಿಲಂಟ್ ಕಾರ್ಖಾನೆಗೆ ಸೋಂಕು ಹೇಗೆ ಬಂತು ಎಂಬ ಬಗ್ಗೆ ಮಾಹಿತಿ ತೆಗೆದುಕೊಳ್ಳಲಾಗಿದೆ. ಆಸ್ಟ್ರೇಲಿಯಾ ಮತ್ತು ಜಪಾನ್‍ನಿಂದ ತಲಾ ಒಬ್ಬರು ಬಂದಿದ್ದಾರೆ ಎಂಬ ಮಾಹಿತಿ ಕೊಟ್ಟಿದ್ದಾರೆ. ಮುಖ್ಯವಾಗಿ ಚೀನಾದಿಂದ ಕಂಟೈನರ್‍ನಲ್ಲಿ ತಂದ ಕೆಲವು ವಸ್ತುಗಳಿಂದ ಸೋಂಕು ಹರಡಿದ್ದು ಎಂದು ಹೇಳಲಾಗು ತ್ತಿದೆ. ಕಂಟೈನರ್‍ನಲ್ಲಿ ತಂದ ವಸ್ತುಗಳನ್ನು ಪರೀಕ್ಷೆಗೆ ಒಳಪಡಿಸ ಲಾಗಿದೆ. ಆದರೂ ಖಚಿತ ಮಾಹಿತಿಗಾಗಿ ಪರಿಶೀಲನೆ ಮುಂದು ವರೆಸಿದ್ದೇವೆ ಎಂದು ತಿಳಿಸಿದರು.

ಏ.30ರವರೆಗೂ ಲಾಕ್‍ಡೌನ್!: ಪಂಜಾಬ್ ರಾಜ್ಯದಲ್ಲಿ ಮುಖ್ಯ ಮಂತ್ರಿ ಅಮರೀಂದರ್ ಸಿಂಗ್ ಏ.30ರವರೆಗೂ ಲಾಕ್‍ಡೌನ್ ಮುಂದು ವರೆಸಲಾಗಿದೆ ಎಂದು ಮಾಹಿತಿ ಬಂದಿದೆ. ಈ ಹಿನ್ನೆಲೆ ರಾಜ್ಯದ ಮುಖ್ಯಮಂತ್ರಿಗಳು ಬುಧವಾರ ಎಲ್ಲಾ ವೈದ್ಯರು, ಹಿರಿಯ ಅಧಿಕಾರಿ ಗಳನ್ನು ಕರೆದು ಕೋವಿಡ್ 19 ಎದುರಿಸಲು ಅನೇಕ ಸಲಹೆ ಪಡೆದಿದ್ದಾರೆ. ನಾಳೆ ಕ್ಯಾಬಿನೇಟ್ ಸಭೆ ನಡೆಯಲಿದ್ದು, ಕೋವಿಡ್ -19 ಬಗ್ಗೆ ಸುದೀರ್ಘವಾಗಿ ಚರ್ಚೆ ನಡೆಸಲಾಗುವುದು ಎಂದರು.

ಕೊರೊನಾ ವಿರುದ್ಧ ಹೋರಾಡಲು ವೈದ್ಯರು, ಪೆÇಲೀಸರು ಹಾಗೂ ಅಧಿಕಾರಿಗಳು ಸಾಕಷ್ಟು ಕೆಲಸ ಮಾಡುತ್ತಿದ್ದಾರೆ. ಇವರಿಗೆ ಆತ್ಮ ಸ್ಥೈರ್ಯ ತುಂಬುವ ಸಲುವಾಗಿ ಇಡೀ ರಾಜ್ಯದಲ್ಲಿ ಪ್ರವಾಸ ಮಾಡು ತ್ತಿz್ದÉೀನೆ. ಆದಿವಾಸಿಗಳು ಹಾಗೂ ಗುಡ್ಡಗಾಡು ಜನತೆಗೆ ಹಾಲಿನ ಸಮಸ್ಯೆ ಎದುರಾಗಿದೆ ಎಂಬ ದೂರು ಬಂದಿದೆ. ಈ ಬಗ್ಗೆ ಮುಖ್ಯ ಮಂತ್ರಿಗಳ ಜೊತೆ ಚರ್ಚೆ ನಡೆಸಿ, ಹಾಲು ಪೂರೈಕೆಗೆ ಆದೇಶ ನೀಡಿz್ದÉೀನೆ ಎಂದರು. ಶಾಸಕ ಹರ್ಷವರ್ಧನ್, ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್, ಎಸ್‍ಪಿ ರಿಷ್ಯಂತ್ ಮತ್ತಿತರರು ಉಪಸ್ಥಿತರಿದ್ದರು.

Translate »