ಇಂದಿನಿಂದ ಮಕ್ಕಳ, ವಯೋವೃದ್ಧರ ಆರೋಗ್ಯ ಸಮೀಕ್ಷೆ
ಚಾಮರಾಜನಗರ

ಇಂದಿನಿಂದ ಮಕ್ಕಳ, ವಯೋವೃದ್ಧರ ಆರೋಗ್ಯ ಸಮೀಕ್ಷೆ

April 14, 2020

ಚಾಮರಾಜನಗರ, ಏ.13- ಮಕ್ಕಳು, ವಯೋವೃದ್ಧರ ಆರೋಗ್ಯ, ಯೋಗಕ್ಷೇಮ ವಿಚಾರಿಸುವ ಸಲುವಾಗಿ ಜಿಲ್ಲೆಯ ಅಂಗನ ವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ಸಮೀಕ್ಷೆ ನಡೆ ಸುವ ಕಾರ್ಯ ಮಂಗಳವಾರದಿಂದ (ನಾಳೆ) ಆರಂಭವಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ. ಎಂ.ಆರ್.ರವಿ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಆರೋಗ್ಯ ಕಾಳಜಿಯಿಂದ 6 ತಿಂಗಳಿಂದ 10 ವರ್ಷದೊಳಗಿನ ಮಕ್ಕಳು ಹಾಗೂ 60 ವರ್ಷ ಮೇಲ್ಪಟ್ಟವರ ವಿವರ ಪಡೆಯಲಿದ್ದಾರೆ. ಅಲ್ಲದೆ ಅವರ ಆರೋಗ್ಯದ ಬಗ್ಗೆ ತಿಳಿದುಕೊಂಡು ಸಮಸ್ಯೆಗಳಿದ್ದರೆ ದಾಖಲಿಸಿಕೊಂಡು ಹತ್ತಿರದ ಪ್ರಾಥಮಿಕ ಆರೋಗ್ಯ ಕೆಂದ್ರ ಅಥವಾ ಸಾರ್ವಜನಿಕ ಆಸ್ಪತ್ರೆಗೆ ಕರೆತಂದು ತಪಾಸಣೆ ಚಿಕಿತ್ಸೆಗೆ ಅಗತ್ಯ ವ್ಯವಸ್ಥೆ ಮಾಡಲಿದ್ದಾರೆ.

ಇದಕ್ಕಾಗಿ 700ಕ್ಕೂ ಹೆಚ್ಚು ಅಂಗನ ವಾಡಿ, ಆಶಾ ಕಾರ್ಯಕರ್ತೆಯರ ತಂಡ ನಿಯೋಜಿತವಾಗಿದ್ದು, ಶುಕ್ರವಾರದೊಳಗೆ ಸಮೀಕ್ಷೆ ಪೂರ್ಣಗೊಳಿಸಲಿದ್ದಾರೆ. ತಾಲೂಕು ಆರೋಗ್ಯಾಧಿಕಾರಿ, ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ, ಜಿಲ್ಲಾ ಸರ್ವೆಲೆನ್ಸ್ ಅಧಿಕಾರಿ ಗಳು ನಿಗಾ ವಹಿಸಲಿದ್ದಾರೆ ಎಂದರು.

ಜಿಲ್ಲೆಯ ಜನರ ಆರೋಗ್ಯದ ಬಗ್ಗೆ ಗಮನ ಹರಿಸಲಾಗಿದೆ. ತೀವ್ರ ಉಸಿರಾಟ ತೊಂದರೆ (ಸಾರಿ) ಮತ್ತು ನೆಗಡಿ, ಶೀತ (ಇನ್‍ಫ್ಲು ಯೆಂಜಾ) ದಂತಹ ಲಕ್ಷಣಗಳಿರುವವರನ್ನು ಸಹ ಪರೀಕ್ಷೆಗೆ ಒಳಪಡಿಸಲಾಗುತ್ತದೆ ಎಂದರು.

ಜಿಲ್ಲೆಯಲ್ಲಿ ಕೋವಿಡ್-19 ಮುಂಜಾ ಗ್ರತಾ ಕ್ರಮಗಳನ್ನು ಸಮರ್ಪಕವಾಗಿ ಕೈಗೊಳ್ಳ ಲಾಗಿದೆ. ಜಿಲ್ಲೆಯಲ್ಲಿ ಇದುವರೆಗೆ ಯಾವುದೇ ಸೋಂಕು ಪ್ರಕರಣ ಕಂಡುಬಂದಿಲ್ಲ. ವೈದ್ಯರು ಅತ್ಯಂತ ಪರಿಶ್ರಮದಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು.

ದಿಗ್ಭಂಧನ ಸಂದರ್ಭ ಕೃಷಿ ಚಟುವಟಿಕೆ ಗಳಿಗೆ ನಿರ್ಬಂಧ ಹಾಕಿಲ್ಲ. ತೋಟಗಾರಿಕೆ, ರೇಷ್ಮೆ ಚಟುವಟಿಕೆಗಳು ನಿರಾತಂಕವಾಗಿ ಮುಂದುವರೆಯಲಿದೆ. ಬಿತ್ತನೆ ಬೀಜ, ಗೊಬ್ಬರ, ಲಘು ಪೋಷಕಾಂಶಗಳು ಲಭ್ಯವಾಗು ತ್ತಿವೆ. ಇದರ ಜೊತೆಗೆ ಕೃಷಿಗೆ ಸಂಬಂಧಿ ಸಿದ ಪೂರಕವಾಗಿರುವ ಪಂಪ್‍ಸೆಟ್, ಮೋಟಾರ್ ರಿಪೇರಿ ಅಂಗಡಿಗಳನ್ನು ಸಾಮಾಜಿಕ ಅಂತರ ಕಾಯ್ದುಕೊಂಡು ತೆರೆಯಲು ಅವಕಾಶ ಕಲ್ಪಿಸಲಾಗಿದೆ ಎಂದರು.

ರೇಷ್ಮೆ ಉತ್ಪನ್ನ ತರುವ ಹಾಗೂ ಇಲ್ಲಿಂದ ತೆಗೆದುಕೊಂಡು ಹೋಗುವ ವಾಹನಗಳಿಗೆ ಸ್ಯಾನಿಟೈಜೇಷನ್ ಮಾಡಲಾಗುತ್ತಿದೆ. ರೇಷ್ಮೆ ಬೆಳೆಗಾರರು, ಬಿಚ್ಚಣಿಕೆದಾರರು, ನೂಲು ತೆಗೆಯುವವರು ತಮ್ಮ ಕಾರ್ಯಕ್ಷೇತ್ರ್ರದಲ್ಲಿ ಅಂತರ ಕಾಯ್ದುಕೊಳ್ಳಬೇಕು. ಸುರಕ್ಷತಾ ಸಾಧನಗಳನ್ನು ಬಳಸಬೇಕು ಎಂಬ ಬಗ್ಗೆ ಜಾಗೃತಿ ಮೂಡಿಸಲು ರೇಷ್ಮೆ ಇಲಾಖೆ ಅಧಿ ಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಪಡಿತರ ವಿತರಣೆಗೆ ಯಾವುದೇ ತೊಂದರೆ ಇಲ್ಲ. ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿ ರುವವರಿಗೂ ಪಡಿತರ ವಿತರಣೆ ನೀಡಬೇ ಕೆಂಬ ಹಿನ್ನೆಲೆಯಲ್ಲಿ ಈಗಾಗಲೇ 1930 ಅರ್ಜಿ ಗಳನ್ನು ಗುರುತಿಸಲಾಗಿದೆ. 2 ಸಾವಿರ ಜನರಿಗೆ ಸೌಲಭ್ಯ ವಿತರಿಸಲು ಅಗತ್ಯ ಸಿದ್ಧತೆ ಕೈಗೊಳ್ಳ ಲಾಗುವುದು. ಜನಧನ್ ಹಣ, ಪಿಂಚಣಿ ಪಡೆಯಲು ಬ್ಯಾಂಕುಗಳಲ್ಲಿ ಅಗತ್ಯ ವ್ಯವಸ್ಥೆ ಮಾಡಲಾಗಿದೆ ಎಂದರು.

ಜಿಲ್ಲಾ ಎಸ್ಪಿ ಎಚ್.ಡಿ. ಆನಂದ್ ಕುಮಾರ್ ಮಾತನಾಡಿ ಕೋವಿಡ್-19 ವೈರಾಣು ಸಂಬಂಧ ಸುಳ್ಳುಸುದ್ದಿ ವದಂತಿ ಹರಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುತ್ತದೆ. ಇತ್ತೀಚೆಗಷ್ಟೇ ವ್ಯಕ್ತಿಯೊಬ್ಬರಿಗೆ ಕೋವಿಡ್-19 ಪಾಸಿಟಿವ್ ಬಂದಿದೆ ಎಂದು ಫೇಸ್‍ಬುಕ್ ಮೂಲಕ ಸುಳ್ಳು ಮಾಹಿತಿಯನ್ನು ಹರಡಲು ಕಾರಣ ರಾದ ಇಬ್ಬರನ್ನು ಬಂಧಿಸಿ ಕ್ರಮ ಜರುಗಿಸ ಲಾಗಿದೆ ಎಂದರು. ಹೆಚ್ಚುವರಿ ಜಿಲ್ಲಾಧಿ ಕಾರಿ ಸಿ.ಎಲ್.ಆನಂದ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಂ.ಸಿ.ರವಿ ಸುದ್ದಿಗೋಷ್ಠಿಯಲ್ಲಿದ್ದರು.

ವಾಹನಗಳ ಬಿಡಿಭಾಗಗಳ ಅಂಗಡಿಗಳು, ಮೆಕ್ಯಾನಿಕ್ ಗ್ಯಾರೇಜ್‍ಗಳು ಕಾರ್ಯನಿರ್ವಹಿಸಲು ಚಾ.ನಗರ ಜಿಲ್ಲಾಧಿಕಾರಿ ಅನುಮತಿ
ಚಾಮರಾಜನಗರ, ಏ.13- ಜಿಲ್ಲೆಯಲ್ಲಿ ಪೂರ್ವ ಮುಂಗಾರು ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಗಳಿಗಾಗಿ ರೈತರ ಜಮೀನುಗಳಲ್ಲಿ ಬೆಳೆಗಳಿಗೆ ನೀರು ಸರಬರಾಜು ಮಾಡಲು ಅಳವಡಿಸಲಾಗಿರುವ ಕೃಷಿ ಪಂಪ್‍ಸೆಟ್, ಕೃಷಿ ಯಂತ್ರೋಪ ಕರಣಗಳ ಮಾರಾಟ, ದುರಸ್ಥಿ ಅಂಗಡಿಗಳು, ಔಷಧಿ ಸಿಂಪಡಣೆ, ಸರಕು ಸಾಗಾಣಿಕೆಗೆ ಸಂಬಂಧಿಸಿದಂತೆ ಲಘು ಮತ್ತು ಭಾರಿ ವಾಹನಗಳ ಬಿಡಿಭಾಗಗಳ ಅಂಗಡಿಗಳು, ಮೆಕ್ಯಾನಿಕ್ ಗ್ಯಾರೇಜ್‍ಗಳನ್ನು ಯಾವುದೇ ಸಮಯ ನಿರ್ಬಂಧವಿಲ್ಲದೇ ಎಂದಿನಂತೆ ಕಾರ್ಯ ನಿರ್ವಹಿಸಲು ಕೆಲವು ಷರತ್ತುಗಳೊಂದಿಗೆ ಅನುಮತಿ ನೀಡಿ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಆದೇಶಿಸಿದ್ದಾರೆ.

ಕೋವಿಡ್-19 ತಡೆ ಸಂಬಂಧ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನೀಡಿರುವ ಸೂಚನೆಗಳು ಹಾಗೂ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸುವುದು. ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಕಾಯ್ದುಕೊಳ್ಳಲು ಒಬ್ಬರಿಂದ ಮತ್ತೊಬ್ಬರ ಮಧ್ಯೆ ಒಂದು ಮೀಟರ್‍ಗೆ ಗೆರೆ ಎಳೆದು ಅಂಗಡಿಗಳ ಮುಂಭಾಗದಲ್ಲಿ ಗುರುತು ಗಳನ್ನು ಮಾಡುವುದು. ಕಡ್ಡಾಯವಾಗಿ ಮಾಸ್ಕ್, ಸ್ಯಾನಿಟೈಸರ್, ಸೋಪು ಮತ್ತು ನೀರಿನ ವ್ಯವಸ್ಥೆ ಮಾಡುವಂತೆ ಜಿಲ್ಲಾಧಿಕಾರಿಗಳು ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ

Translate »