ಪಿಂಚಣಿ, ಸಹಾಯಧನ ಪಡೆಯಲು ಮುಗಿಬಿದ್ದ ಫಲಾನುಭವಿಗಳು, ಗ್ರಾಹಕರನ್ನು ನಿಯಂತ್ರಿಸಲು ಬ್ಯಾಂಕ್ ಸಿಬ್ಬಂದಿ ಹೈರಾಣ ಚಾಮರಾಜನಗರ, ಏ.7(ಎಸ್‍ಎಸ್)- ಸಾಮಾಜಿಕ ಭದ್ರತಾ ಯೋಜನೆಯಡಿ ವಿವಿಧ ಪಿಂಚಣಿ ಯೋಜನೆಗಳ ಹಣವನ್ನು ಸರ್ಕಾರ ಫಲಾನುಭವಿ ಗಳ ಖಾತೆಗೆ ಜಮಾ ಮಾಡಿದ್ದು, ಹಣ ತೆಗೆದು ಕೊಳ್ಳಲು ನಗರದ ವಿವಿಧ ಬ್ಯಾಂಕ್‍ಗಳ ಮುಂದೆ ಸರದಿ ಸಾಲಿನಲ್ಲಿ ನಿಲ್ಲುವ ಮೂಲಕ ಸಾವಿರಾರು ಫಲಾನುಭವಿಗಳು ಪರದಾಡುವಂತಾಗಿದೆ. ಸರ್ಕಾರ ಜನ್‍ಧನ್ ಖಾತೆ ಹೊಂದಿರುವ ಮಹಿಳೆಯರ ಖಾತೆಗೆ 500 ರೂ., ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಡಿ ರೈತರಿಗೆ 2 ಸಾವಿರ ರೂ.,…
ಭಾರೀ ಗಾಳಿ ಮಳೆ: ಬಾಳೆ, ಮುಸುಕಿನ ಜೋಳ ನಾಶ
April 8, 2020ಲಕ್ಷಾಂತರ ರೂ. ನಷ್ಟ, ಸ್ಥಳಕ್ಕೆ ಶಾಸಕ, ಅಧಿಕಾರಿಗಳ ಭೇಟಿ, ಪರಿಶೀಲನೆ ಹನೂರು, ಏ.7- ಭಾರೀ ಗಾಳಿ ಮಳೆಗೆ ಲಕ್ಷಾಂತರ ರೂ. ಮೌಲ್ಯದ ಬಾಳೆ, ಮುಸುಕಿನ ಜೋಳ ನಾಶವಾಗಿರುವ ಘಟನೆ ತಾಲೂಕಿನ ಗಾಜನೂರು ಹಾಗೂ ಮಿಣ್ಯಂ ಗ್ರಾಮಗಳಲ್ಲಿ ಸೋಮವಾರ ಸಂಜೆ ನಡೆದಿದೆ. ಮಿಣ್ಯಂ ಗ್ರಾಮದ ಭೈರಲಿಂಗಪ್ಪ 4.5 ಎಕರೆಯಲ್ಲಿ ಬೆಳೆದಿದ್ದ ಕಟಾವಿಗೆ ಬಂದಿದ್ದ 1600 ಬಾಳೆ ಗಿಡ, ಬೆಟ್ಟದಯ್ಯನವರ ಜಮೀನಿನಲ್ಲಿ ಬೆಳೆದಿದ್ದ 3 ಸಾವಿರ ಬಾಳೆ ಗಿಡ, ಮಧುರ ಅವರ ಜಮೀನಿನಲ್ಲಿದ್ದ 2 ಸಾವಿರ ಬಾಳೆ ಗಿಡ, ಮಾದೇಗೌಡರ…
ಕೊರೊನಾ ಹಿನ್ನೆಲೆ: ವನ್ಯಜೀವಿಗಳ ಆರೋಗ್ಯದ ಮೇಲೆ ಕಟ್ಟೆಚ್ಚರ ವಹಿಸಿ
April 8, 2020ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಸೂಚನೆ ಚಾಮರಾಜನಗರ, ಏ.7- ಅಮೆರಿಕಾದ ನ್ಯೂಯಾರ್ಕ್‍ನ ಮೃಗಾಲಯವೊಂದರಲ್ಲಿ ಹುಲಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿರುವ ಹಿನ್ನೆಲೆಯಲ್ಲಿ 2 ಪ್ರಮುಖ ಹುಲಿ ಸಂರಕ್ಷಿತ ಅಭಯಾರಣ್ಯ ಹೊಂದಿರುವ ಜಿಲ್ಲೆಯ ವನ್ಯಜೀವಿಗಳ ಆರೋಗ್ಯದ ಮೇಲೆ ಕಟ್ಟೆಚ್ಚರ ವಹಿಸುವಂತೆ ಡಿಸಿ ಡಾ.ಎಂ.ಆರ್.ರವಿ ಸೂಚಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲ್ಲಿ ಮಂಗಳವಾರ ನಡೆದ ಅರಣ್ಯ ಅಧಿಕಾರಿಗಳು, ಪಶು ವೈದ್ಯಾಧಿಕಾರಿಗಳು, ಆರೋಗ್ಯ ಇಲಾಖೆ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನ್ಯೂಯಾರ್ಕ್‍ನ ಬ್ರಾಂಕ್ಸ್ ಮೃಗಾಲಯದಲ್ಲಿ ಹುಲಿ ಹಾಗೂ ಕೆಲವು ಸಿಂಹಗಳಲ್ಲಿ ಕೊರೊನಾ…
ಪುಣಜನೂರು ಚೆಕ್‍ಪೋಸ್ಟ್‍ಗೆ ಜಿಲ್ಲಾ ಉಸ್ತುವಾರಿ ಸಚಿವರ ಭೇಟಿ; ಪರಿಶೀಲನೆ
April 6, 2020ಚಾಮರಾಜನಗರ, ಏ.5- ತಾಲೂಕಿನ ಗಡಿಭಾಗ ಪುಣಜನೂರು ಚೆಕ್‍ಪೋಸ್ಟ್‍ಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್‍ಕುಮಾರ್ ಭಾನುವಾರ ಭೇಟಿ ನೀಡಿ ಪರಿಶೀಲಿಸಿದರು. ಕೋವಿಡ್-19ರ ಮುಂಜಾಗ್ರತಾ ಕ್ರಮಗಳ ಪರಿಶೀಲನೆ ಅಂಗವಾಗಿ ಭೇಟಿ ನೀಡಿದ ಉಸ್ತು ವಾರಿ ಸಚಿವರು, ಚೆಕ್‍ಪೋಸ್ಟ್‍ನಲ್ಲಿ ನಡೆಸಲಾಗು ತ್ತಿರುವ ವಾಹನಗಳ ಪರಿಶೀಲನೆ, ಚಾಲಕರು, ಸಹಾಯಕರ ಆರೋಗ್ಯ ತಪಾಸಣೆ ಪ್ರಕ್ರಿಯೆ ಯನ್ನು ವೀಕ್ಷಿಸಿದರು. ಅಲ್ಲದೇ ವಾಹನಗಳಿಗೆ ನಡೆಸಲಾಗುತ್ತಿರುವ ಸ್ಯಾನಿಟೈಶೇಷನ್ ಕಾರ್ಯ ವನ್ನು ಸಚಿವರು ಖುದ್ದು ಪರಿಶೀಲಿಸಿದರು. ತಮಿಳುನಾಡಿನಿಂದ ರಾಜ್ಯಕ್ಕೆ ಆಗಮಿಸುವ ವಾಹನಗಳನ್ನು ಕಟ್ಟುನಿಟ್ಟಾಗಿ ತಪಾಸಣೆ ಮಾಡ ಲಾಗುತ್ತಿದೆಯೇ, ವಾಹನಗಳಿಗೆ ಸ್ಯಾನಿಟೈಸರ್…
ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಯುವಕನ ಬಂಧನ
April 6, 2020ಕೊಳ್ಳೇಗಾಲ, ಏ.5(ಎನ್.ನಾಗೇಂದ್ರ)- ತಾಲೂಕಿನ ಪಾಳ್ಯ ಗ್ರಾಮದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಯುವಕನೊಬ್ಬನನ್ನು ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿರುವ ಘಟನೆ ಭಾನುವಾರ ನಡೆದಿದೆ. ಬೆಂಗಳೂರಿನ ನಲ್ಲಸಂದ್ರ ನಿವಾಸಿ ಸಲ್ಲಾವುದ್ದೀನ್(24) ಬಂಧಿತ ಯುವಕ. ಈತ ಗ್ರಾಮದ ಬಸ್ ನಿಲ್ದಾಣದಲ್ಲಿ ಅನವಶ್ಯಕವಾಗಿ ಓಡಾಡುತ್ತಿದ್ದ. ಅಲ್ಲದೆ, ಬಾಯಲ್ಲಿ ನೀರು ತುಂಬಿಕೊಂಡು ಕಂಡ ಕಂಡವರ ಮೇಲೆ ಹಾಗೂ ಕೆಲ ಅಂಗಡಿ ಮಳಿಗೆಗಳ ಮೇಲೂ ಉಗುಳುವ ಮೂಲಕ ವಿಚಿತ್ರವಾಗಿ ವರ್ತಿಸುತ್ತಿದ್ದ. ಈ ಹಿನ್ನೆಲೆ ಆತಂಕಗೊಂಡ ಸ್ಥಳೀಯರು ಪೆÇಲೀಸ್ ಹಾಗೂ ಆರೋಗ್ಯ ಇಲಾಖೆಗೆ ದೂರವಾಣಿ ಮೂಲಕ ಮಾಹಿತಿ ನೀಡುತ್ತಿದ್ದಂತೆ…
ಈಜಲು ತೆರಳಿದ್ದ ಇಬ್ಬರ ಸಾವು
April 6, 2020ಚಾಮರಾಜನಗರ, ಏ.5(ಎಸ್‍ಎಸ್)- ಕೆರೆಗೆ ಈಜಲು ತೆರಳಿದ್ದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಅಮಚವಾಡಿ ಗ್ರಾಮದ ಹೊರವಲಯದಲ್ಲಿರುವ ಎಣ್ಣೆಹೊಳೆ ಹೊಸಕೆರೆಯಲ್ಲಿ ಭಾನುವಾರ ಮಧ್ಯಾಹ್ನ ನಡೆದಿದೆ. ಚಾಮರಾಜನಗರ ಗಾಳೀಪುರ ಬಡಾವಣೆಯ ಸೈಯದ್(17) ಹಾಗೂ ಶಾರನ್(17) ಮೃತಪಟ್ಟ ಬಾಲಕರು. ಅಮಚವಾಡಿಯಿಂದ 3 ಕಿಮೀ ದೂರಲ್ಲಿರುವ ಎಣ್ಣೆ ಹೊಳೆ ಹೊಸಕೆರೆಯಲ್ಲಿ ಈಜಲೆಂದು ಸೈಯದ್ ಹಾಗೂ ಶಾರನ್ ಸೇರಿ ದಂತೆ ನಾಲ್ಕೈದು ಮಂದಿ ತೆರಳಿದ್ದರು. ಕೆರೆಯಲ್ಲಿ ತಮ್ಮ ಸ್ನೇಹಿತ ರೊಂದಿಗೆ ಈಜುವ ವೇಳೆಗೆ ಕೆರೆಯ ಆಳದಲ್ಲಿದ್ದ ಕೆಸರಿಗೆ ಸಿಲುಕಿ ನೀರಿನಲ್ಲಿ…
ಹಾಲು, ಪಡಿತರ ಸಮರ್ಪಕವಾಗಿ ವಿತರಿಸಿ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಸೂಚನೆ
April 6, 2020ಚಾಮರಾಜನಗರ, ಏ.5- ಜಿಲ್ಲೆಯಲ್ಲಿ ಕೋವಿಡ್-19 ತಡೆಗೆ ಜಾರಿಯಲ್ಲಿರುವ ಲಾಕ್ ಡೌನ್ ಹಿನ್ನೆಲೆಯಲ್ಲಿ ಹಾಲು, ಪಡಿತರವನ್ನು ಸಮರ್ಪಕವಾಗಿ ವಿತರಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್‍ಕುಮಾರ್ ಸೂಚಿಸಿದರು. ಕೋವಿಡ್-19ರ ತಡೆಗಾಗಿ ಜಿಲ್ಲಾಡಳಿತ ಕೈಗೊಂಡಿರುವ ಮುನ್ನೆಚ್ಚರಿಕೆ ಕ್ರಮಗಳ ಹಿನ್ನೆಲೆಯಲ್ಲಿ ವಿವಿಧ ಸ್ಥಳಗಳಿಗೆ ಭೇಟಿ ನೀಡಿದÀ ಉಸ್ತುವಾರಿ ಸಚಿವರು, ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಅಧಿಕಾರಿ ಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೊಳಚೆ ಪ್ರದೇಶದ ವಾಸಿಗಳು, ವಲಸೆ ಕಾರ್ಮಿಕರು, ಕಟ್ಟಡ ಕಾರ್ಮಿಕರಿಗೆ ಹಾಲು ವಿತರಣೆ ಯಾಗುತ್ತಿದೆ. ಇದನ್ನು ಅತ್ಯಂತ ಹೊಣೆಗಾರಿಕೆ ಯಿಂದ…
ರಜಾ ದಿನಗಳಂದು ಪಡಿತರ ವಿತರಿಸಲು ಡಿಸಿ ಆದೇಶ
April 6, 2020ಚಾಮರಾಜನಗರ, ಏ.5- ಪಡಿತರದಾರರಿಗೆ ಏಪ್ರಿಲ್ ಮತ್ತು ಮೇ ತಿಂಗಳ ಆಹಾರ ಧಾನ್ಯ ಏಕಕಾಲದಲ್ಲಿ ವಿತರಿಸಬೇಕಾಗಿರುವುದರಿಂದ ಏಪ್ರಿಲ್ ಮಾಹೆಯ ಸಾರ್ವಜನಿಕ ರಜಾ ದಿನ ಏ.6 ಹಾಗೂ ನ್ಯಾಯಬೆಲೆ ಅಂಗಡಿಗಳ ವಾರದ ರಜೆ ಏ.7ರ ಮಂಗಳವಾರದಂದು ಜಿಲ್ಲೆಯ ಎಲ್ಲಾ ನ್ಯಾಯಬೆಲೆ ಅಂಗಡಿಗಳನ್ನು ಕಡ್ಡಾಯವಾಗಿ ತೆರೆದು ಪಡಿತರದಾರರಿಗೆ ಪಡಿತರ ವಿತರಿಸಬೇಕು ಹಾಗೂ ಜಿಲ್ಲೆಯ ಸಗಟು ಮಳಿಗೆಗಳು ಬಾಗಿಲು ತೆರೆದು ಆಹಾರ ಧಾನ್ಯಗಳನ್ನು ವಿತರಿಸಲು ಜಿಲ್ಲಾಧಿಕಾರಿ ಡಾ. ಎಂ.ಆರ್.ರವಿ ಆದೇಶಿಸಿದ್ದಾರೆ. ನ್ಯಾಯಬೆಲೆ ಅಂಗಡಿ ಮಾಲೀಕರು ಸರ್ಕಾರವು ನೀಡಿದ ನಿರ್ದೇಶನದಂತೆ ಓಟಿಪಿ/ ಆಧಾರ್ ಅಥೆಂಟಿಕೇಷನ್/…
ಇಂದಿನಿಂದ ಕೊಳಚೆ ಪ್ರದೇಶ ವಾಸಿಗಳು, ಕಾರ್ಮಿಕರಿಗೆ ಉಚಿತ ಹಾಲು ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ
April 3, 2020ಚಾಮರಾಜನಗರ, ಏ.2- ಸರ್ಕಾರದ ನಿರ್ದೇಶನ ಅನುಸಾರ ಲಾಕ್‍ಡೌನ್ ಸಂದರ್ಭದಲ್ಲಿ ಕೊಳಚೆ ಪ್ರದೇಶದ ವಾಸಿಗಳಿಗೆ, ವಲಸೆ ಕಾರ್ಮಿಕರಿಗೆ ಹಾಗೂ ಕಟ್ಟಡ ಕಾರ್ಮಿಕರಿಗೆ ನಾಳೆ ಯಿಂದಲೇ ಉಚಿತವಾಗಿ ಹಾಲನ್ನು ವಿತರಿಸ ಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಎಂ. ಆರ್. ರವಿ ಅವರು ತಿಳಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯನ್ನು ಉz್ದÉೀಶಿಸಿ ಅವರು ಮಾತನಾಡಿ ಜಿಲ್ಲೆಯಲ್ಲಿ 9300 ಕುಟುಂಬಗಳನ್ನು ಗುರುತಿಸಲಾಗಿದೆ. ಈ ಪೈಕಿ 9 ಸಾವಿರ ಕುಟುಂಬಗಳು ಕೊಳಚೆ ಪ್ರದೇಶದವರಾಗಿದ್ದಾರೆ. 150 ಕುಟುಂಬ ಗಳು ಕಟ್ಟಡ ಕಾರ್ಮಿಕರು, ಇನ್ನೂ 150…
ಜಿಲ್ಲಾ ಸಹಕಾರಿ ಬ್ಯಾಂಕ್ ವತಿಯಿಂದ 3 ಸಾವಿರ ಮಂದಿಗೆ ವೈದ್ಯಕೀಯ ಕಿಟ್ ವಿತರಣೆ
April 3, 2020ಕೊಳ್ಳೇಗಾಲ, ಏ.2(ಎನ್.ನಾಗೇಂದ್ರ)- ಜಿಲ್ಲಾ ಸಹಕಾರಿ ಬ್ಯಾಂಕ್ ವತಿಯಿಂದ ಚಾ.ನಗರ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿ ಸುವ ವೈದ್ಯರು ಹಾಗೂ ಸಿಬ್ಬಂದಿಗಳಿಗೆ ಮೂರು ಸಾವಿರ ವೈದ್ಯಕೀಯ ಕಿಟ್‍ಗಳನ್ನು ಗುರುವಾರ ಹನೂರು ಶಾಸಕ ಆರ್ ನರೇಂದ್ರ ವಿತರಿಸಿದರು. ಬಳಿಕ ಮಾತನಾಡಿದ ಅವರು, ಜಿಲ್ಲಾ ಸಹಕಾರಿ ಬ್ಯಾಂಕ್ ವತಿಯಿಂದ ಈಗಾ ಗಲೇ ಮೈಸೂರಿನಲ್ಲಿ ಐದು ಸಾವಿರ ಮಂದಿಗೆ ಕಿಟ್ ವಿತರಿಸಲಾಗಿದೆ. ಚಾ.ನಗರ ಜಿಲ್ಲೆಯೆ ವೈದ್ಯರು, ವೈದ್ಯಕೀಯ ಸಿಬ್ಬಂದಿ ಹಾಗೂ ವೃತ್ತಿನಿರತರ ಪತ್ರಕರ್ತರುಗಳಿಗೆ ಇಂದು 3 ಸಾವಿರ ಕಿಟ್ ವಿತರಿಸಲಾಗಿದೆ. ಈ ಕಿಟ್‍ನಲ್ಲಿ ಸ್ಯಾನಿಟೈಜರ್,…