ಪುಣಜನೂರು ಚೆಕ್‍ಪೋಸ್ಟ್‍ಗೆ ಜಿಲ್ಲಾ ಉಸ್ತುವಾರಿ ಸಚಿವರ ಭೇಟಿ; ಪರಿಶೀಲನೆ
ಚಾಮರಾಜನಗರ

ಪುಣಜನೂರು ಚೆಕ್‍ಪೋಸ್ಟ್‍ಗೆ ಜಿಲ್ಲಾ ಉಸ್ತುವಾರಿ ಸಚಿವರ ಭೇಟಿ; ಪರಿಶೀಲನೆ

April 6, 2020

ಚಾಮರಾಜನಗರ, ಏ.5- ತಾಲೂಕಿನ ಗಡಿಭಾಗ ಪುಣಜನೂರು ಚೆಕ್‍ಪೋಸ್ಟ್‍ಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್‍ಕುಮಾರ್ ಭಾನುವಾರ ಭೇಟಿ ನೀಡಿ ಪರಿಶೀಲಿಸಿದರು.

ಕೋವಿಡ್-19ರ ಮುಂಜಾಗ್ರತಾ ಕ್ರಮಗಳ ಪರಿಶೀಲನೆ ಅಂಗವಾಗಿ ಭೇಟಿ ನೀಡಿದ ಉಸ್ತು ವಾರಿ ಸಚಿವರು, ಚೆಕ್‍ಪೋಸ್ಟ್‍ನಲ್ಲಿ ನಡೆಸಲಾಗು ತ್ತಿರುವ ವಾಹನಗಳ ಪರಿಶೀಲನೆ, ಚಾಲಕರು, ಸಹಾಯಕರ ಆರೋಗ್ಯ ತಪಾಸಣೆ ಪ್ರಕ್ರಿಯೆ ಯನ್ನು ವೀಕ್ಷಿಸಿದರು. ಅಲ್ಲದೇ ವಾಹನಗಳಿಗೆ ನಡೆಸಲಾಗುತ್ತಿರುವ ಸ್ಯಾನಿಟೈಶೇಷನ್ ಕಾರ್ಯ ವನ್ನು ಸಚಿವರು ಖುದ್ದು ಪರಿಶೀಲಿಸಿದರು.

ತಮಿಳುನಾಡಿನಿಂದ ರಾಜ್ಯಕ್ಕೆ ಆಗಮಿಸುವ ವಾಹನಗಳನ್ನು ಕಟ್ಟುನಿಟ್ಟಾಗಿ ತಪಾಸಣೆ ಮಾಡ ಲಾಗುತ್ತಿದೆಯೇ, ವಾಹನಗಳಿಗೆ ಸ್ಯಾನಿಟೈಸರ್ ಸಿಂಪಡಿಸಲಾಗುತ್ತಿದೆಯೇ, ರಾಜ್ಯಕ್ಕೆ ಆಗಮಿಸಿದ ವಾಹನಗಳನ್ನು ಕಡ್ಡಾಯವಾಗಿ ನೋಂದಣಿ ಪುಸ್ತಕದಲ್ಲಿ ನಮೂದಿಸಲಾಗುತ್ತಿದೆಯೇ, ಜೊತೆಗೆ ಕೊರೊನಾ ಸೋಂಕಿನ ಬಗ್ಗೆ ಆರೋಗ್ಯ ತಪಾಸಣೆ ಮಾಡಿ ಬಿಡಲಾಗುತ್ತಿದೆಯೇ ಎಂಬಿತ್ಯಾದಿಗಳ ಬಗ್ಗೆ ಮಾಹಿತಿ ಪಡೆದರು. ಅಲ್ಲದೇ ಚಾಲಕರು, ಸಹಾಯಕರು ಆರೋಗ್ಯವಾಗಿದ್ದಾರೆಯೇ ಎಂಬುದನ್ನು ಸ್ಕ್ರೀನಿಂಗ್ ಮೂಲಕ ಖಾತರಿ ಪಡಿಸಿಕೊಳ್ಳಬೇಕು ಎಂದರು.

ಚೆಕ್‍ಪೋಸ್ಟ್ ಮೂಲಕ ಹಾದು ಹೋಗುವ ವಾಹನಗಳ ದಾಖಲೆಯನ್ನು ಸರಿಯಾಗಿ ನಿರ್ವಹಿಸಬೇಕು. ಹೊರರಾಜ್ಯದಿಂದ ಜಿಲ್ಲೆಗೆ ಬರುವ ಹಾಗೂ ಜಿಲ್ಲೆಯಿಂದ ಹೊರ ರಾಜ್ಯಗಳಿಗೆ ಹೋಗುವ ವಾಹನಗಳ ಬಗ್ಗೆ ನಮೂದಿಸಲು ಪ್ರತ್ಯೇಕ ವಹಿ ಇಡುವಂತೆ ಸೂಚಿಸಿದರು.

ಬಳಿಕ ಪುಣಜನೂರು ಬಳಿಯ ಪರಿಶಿಷ್ಟ ವರ್ಗ ಗಳ ಆಶ್ರಮ ಶಾಲೆಯಲ್ಲಿ ಆಶ್ರಯ ಪಡೆದಿರುವ ಹೊರ ಜಿಲ್ಲೆಯ ಕೆಲವು ನಾಗರಿಕರನ್ನು ಭೇಟಿ ಮಾಡಿ ಸಮಾಲೋಚಿಸಿದರು. ಲಾಕ್‍ಡೌನ್ ಕಾರಣದಿಂದ ನಿಮ್ಮನ್ನು ಆರೋಗ್ಯ ದೃಷ್ಟಿಯಿಂದ ಇಲ್ಲಿಯೇ ಅನಿ ವಾರ್ಯವಾಗಿ ಉಳಿಸಿಕೊಳ್ಳಬೇಕಿದೆ ಎಂದ ಸಚಿವರು, ಅಲ್ಲಿ ನೀಡಲಾಗುತ್ತಿರುವ ಆಹಾರ, ಆರೋಗ್ಯ ತಪಾ ಸಣೆ ಮತ್ತಿತರ ವಿವರವನ್ನು ಸಚಿವರು ಪಡೆದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕೋವಿಡ್-19ರ ತಡೆಗಾಗಿ ಕೈಗೊಂಡಿ ರುವ ಮುನ್ನೆಚ್ಚರಿಕೆ ಕ್ರಮಗಳನ್ನು ವ್ಯಾಪಕವಾಗಿ ಪರಿಶೀಲಿಸುತ್ತಿದ್ದೇನೆ. ಮೂಲೆ ಹೊಳೆಯಂತೆ ಪುಣಜನೂರು ಚೆಕ್‍ಪೋಸ್ಟ್‍ನಲ್ಲಿಯೂ ವಾಹನ ಗಳಿಗೆ ಸ್ಯಾನಿಟೈಶೇಷನ್ ಮಾಡುವಂತೆ ಸೂಚಿಸ ಲಾಗಿದೆ. ಅಲ್ಲದೇ ಜಿಲ್ಲೆಯ ಚೆಕ್‍ಪೋಸ್ಟ್‍ಗಳು, ಪ್ರಮುಖ ಸ್ಥಳಗಳಲ್ಲಿ ಔಷಧ ಸಿಂಪಡಿಸುವ ಟನಲ್‍ಗಳ ನಿರ್ಮಾಣಕ್ಕೆ ಕ್ರಮ ವಹಿಸಲು ಸೂಚಿಸಲಾಗಿದೆ ಎಂದರು.

ಬಳಿಕ ಉಸ್ತುವಾರಿ ಸಚಿವರು ನಗರದ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಚಿರತೆ ದಾಳಿಗೆ ಒಳ ಗಾಗಿ ಚಿಕಿತ್ಸೆ ಪಡೆಯುತ್ತಿರುವ ವೀರನಪುರ ಗ್ರಾಮದ ಸಂತ್ರಸ್ತರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಪರಿಹಾರ ಕುರಿತ ಆದೇಶ ಪತ್ರ ವಿತರಿಸಿದರು. ಈ ವೇಳೆ ಜಿಪಂ ಸಿಇಓ ನಾರಾ ಯಣರಾವ್, ಎಸಿ ನಿಖಿತ ಎಂ.ಚಿನ್ನಸ್ವಾಮಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನಿತಾ ಹದ್ದಣ್ಣನವರ್, ಮೆಡಿಕಲ್ ಕಾಲೇಜಿನ ಡೀನ್ ಡಾ.ಸಂಜೀವ್, ಜಿಲ್ಲಾ ಸರ್ಜನ್ ಡಾ. ಕೃಷ್ಣಪ್ರಸಾದ್ ಇತರರಿದ್ದರು.

Translate »