ಜಮ್ಮು-ಕಾಶ್ಮೀರ: 9 ಉಗ್ರರ ಹತ್ಯೆ, ಓರ್ವ ಯೋಧ ಹುತಾತ್ಮ
ಮೈಸೂರು

ಜಮ್ಮು-ಕಾಶ್ಮೀರ: 9 ಉಗ್ರರ ಹತ್ಯೆ, ಓರ್ವ ಯೋಧ ಹುತಾತ್ಮ

April 6, 2020

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಕೇವಲ 24 ಗಂಟೆಗಳ ಅವಧಿಯಲ್ಲಿ 9 ಉಗ್ರರನ್ನು ಹೊಡೆದುರುಳಿಸಿದೆ.

ಕೊರೊನಾ ವೈರಸ್ ಸೋಂಕು ಪ್ರಸ ರಣೆಯಿಂದಾಗಿ ಲಾಕ್‍ಡೌನ್‍ನಿಂದಾಗಿ ಇಡೀ ದೇಶವೇ ಆತಂಕದಲ್ಲಿದ್ದು, ಇದೇ ವೇಳೆ ಜಮ್ಮು-ಕಾಶ್ಮೀರದಲ್ಲಿ ಬಾಲ ಬಿಚ್ಚಲು ಯತ್ನಿಸಿದ 9 ಉಗ್ರರನ್ನು ಭಾರ ತೀಯ ಸೇನೆ ಹೊಡೆದುರುಳಿಸಿದೆ.

ದಕ್ಷಿಣ ಕಾಶ್ಮೀರದ ಬಾಟ್ಪುರ್‍ದಲ್ಲಿ ನಿನ್ನೆ 4 ಮಂದಿ ಉಗ್ರರನ್ನು ಹೊಡೆದು ರುಳಿಸಲಾಗಿತ್ತು. ಇದರ ಬೆನ್ನಲ್ಲೇ ಇಂದು ಎಲ್‍ಒಸಿಯ ಕೆರಾನ್ ಸೆಕ್ಟರ್‍ನಲ್ಲಿ ಮತ್ತೆ 5 ಮಂದಿ ಉಗ್ರರನ್ನು ಹೊಡೆದುರುಳಿಸ ಲಾಗಿದೆ. ಓರ್ವ ಯೋಧ ಹುತಾತ್ಮ, 4 ಯೋಧರಿಗೆ ಗಂಭೀರ ಗಾಯವಾ ಗಿದ್ದು, ಗಾಯಾಳು ಸೈನಿಕರನ್ನು ಸೇನಾ ಸ್ಪತ್ರೆಗೆ ದಾಖಲು ಮಾಡಲಾಗಿದೆ.

Translate »