ಧಾರವಾಡ ಮೂಲದ ಕೊರೊನಾ ಸೋಂಕಿತ ಗುಣಮುಖ ಕಿಮ್ಸ್‍ನಿಂದ ಡಿಸ್ಚಾರ್ಜ್
ಮೈಸೂರು

ಧಾರವಾಡ ಮೂಲದ ಕೊರೊನಾ ಸೋಂಕಿತ ಗುಣಮುಖ ಕಿಮ್ಸ್‍ನಿಂದ ಡಿಸ್ಚಾರ್ಜ್

April 6, 2020

ಹುಬ್ಬಳ್ಳಿ,ಏ.5-ಕೋವಿಡ್-19 ಪಾಸಿಟಿವ್ ಸೋಂಕು ತಗುಲಿದ್ದ ಧಾರ ವಾಡದ ಹೊಸಯಲ್ಲಾಪುರ ನಿವಾಸಿ ಸಂಪೂರ್ಣ ಗುಣಮುಖರಾಗಿದ್ದು, ಭಾನುವಾರ ಸಂಜೆ ಹುಬ್ಬಳ್ಳಿಯ ಕಿಮ್ಸ್‍ನಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.

ಆಸ್ಟ್ರೇಲಿಯಾದಿಂದ ದುಬೈ, ಮಸ್ಕತ್, ಪಣಜಿ ಮಾರ್ಗವಾಗಿ ಧಾರವಾಡ ನಗ ರಕ್ಕೆ ಮಾ.12ರಂದು ಆಗಮಿಸಿದ್ದ 33 ವರ್ಷದ ವ್ಯಕ್ತಿಗೆ ಕೊರೊನಾ ಲಕ್ಷಣ ಗಳು ಕಂಡು ಬಂದಿತ್ತು. ಆದ್ದರಿಂದ ಮಾರ್ಚ್ 17ರಂದು ನಗರದ ಖಾಸಗಿ ಆಸ್ಪತ್ರೆಯೊಂದಕ್ಕೆ ತೆರಳಿದ್ದರು. ಅಲ್ಲಿಂದ ಮಾರ್ಚ್ 18ರಿಂದ 21ರವರೆಗೆ ಎಸ್‍ಡಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಬಳಿಕ ಅವರ ಥ್ರೋಟ್ ಸ್ವ್ಯಾಬ್ ಹಾಗೂ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳು ಹಿಸಲಾಗಿತ್ತು. ಪ್ರಯೋಗಾಲಯದ ರಿಪೆÇೀರ್ಟ್‍ನಲ್ಲಿ ಕೋವಿಡ್-19 ಪಾಸಿ ಟಿವ್ ಬಂದ ದಿನದಿಂದ ಹುಬ್ಬಳ್ಳಿಯ ಕಿಮ್ಸ್‍ನಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾ ಗಿತ್ತು. ಕಿಮ್ಸ್‍ನಲ್ಲಿ ಉತ್ತಮ ಚಿಕಿತ್ಸೆ ಪಡೆದ ಅವರು ಚೇತರಿಸಿಕೊಳ್ಳತೊಡಗಿದರು. ಬಳಿಕ ಅವರ ಗಂಟಲು ದ್ರವದ ಪ್ರಯೋ ಗಾಲಯದ ಮಾದರಿಯನ್ನು ಮಾ.31 ಹಾಗೂ ಏ.3ರಂದು ಎರಡು ಬಾರಿ ಮತ್ತೆ ಶಿವಮೊಗ್ಗದ ಪ್ರಯೋಗಾಲಯಕ್ಕೆ ಕಳು ಹಿಸಿಕೊಡಲಾಗಿತ್ತು. ಎರಡು ಬಾರಿಯೂ ಕೋವಿಡ್-19 ನೆಗೆಟಿವ್ ವರದಿ ಬಂದಿದ್ದು, ಗುಣಮುಖರಾದ ಇವರನ್ನು ಭಾನುವಾರ ಸಂಜೆ ಕಿಮ್ಸ್‍ನಿಂದ ಡಿಸ್ಚಾರ್ಜ್ ಮಾಡಿ ಮನೆಗೆ ಕಳುಹಿಸಿಕೊಡಲಾಗಿದೆ.

Translate »